ಗಮನ ಬೇರೆಡೆ ಸೆಳೆದು ಶಾಸಕರ ಪತ್ನಿಯ ಬಳಿ ಇದ್ದ ಹಣ ಕದ್ದರು
ಬೆಂಗಳೂರು, ಜನವರಿ 30: ಗಮನ ಬೇರೆಡೆ ಸೆಳೆದು ಶಾಸಕರೊಬ್ಬರ ಪತ್ನಿಯ ಬಳಿ ಇದ್ದ ಒಂದೂವರೆ ಲಕ್ಷ ಹಣವನ್ನು ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಕುಣಿಗಲ್ ಶಾಸಕ ಎಚ್ ಡಿ ರಂಗನಾಥ್ ಅವರ ಪತ್ನಿ ಸುಮಾ ಅವರಿಗೆ ಸೇರಿದ ಬ್ಯಾಗನ್ನು ಕದಿಯಲಾಗಿದೆ. ಸುಮಾ ಅವರು ಖಾಸಗಿ ಬ್ಯಾಂಕ್‌ವೊಂದರಲ್ಲಿ ಆರ್‌ಟಿಜಿಎಸ್ ಮೂಲಕ ಹಣ ಕಳುಹಿಸಿ ಉಳಿದ ಹಣವನ್ನು ತಮ್ಮ ಬ್ಯಾಗ್‌ನಲ್ಲಿ ಇಟ್ಟುಕೊಂಡು ಕಾರಿನಲ್ಲಿ ಕುಳಿತಿದ್ದರು.
ಕಾರಿನ ಚಾಲಕನಾಗಿ ಕಾಯುತ್ತಿದ್ದಾಗಲೇ ದುಷ್ಕರ್ಮಿಯೊಬ್ಬ ಬಂದುವಿಳಾಸ ಕೇಳುವವನಂತೆ ಮಾತಿಗೆ ಎಳೆದಿದ್ದ, ಅವರು ಮಾತನಾಡುತ್ತಿದ್ದಾಗಲೇ ಮತ್ತೊಬ್ಬ ಹಿಂಬದಿ ಕಿಟಕಿ ಮೂಲಕ ಕೈ ಹಾಕಿ ಹಾಕಿ ಬ್ಯಾಗ್ ಎತ್ತಿಕೊಂಡು ಪರಾರಿಯಾಗಿದ್ದಾನೆ. ಕಾರಿನ ದಾಖಲೆಗಳಿದ್ದ ಬ್ಯಾಗ್‌ನ್ನು ಕೂಡ ಕದ್ದಿದ್ದಾರೆ.

ವಿಜಯನಗರ ಠಾಣೆಗೆ ದೂರು ನೀಡಲಾಗಿದ್ದು ತನಿಖೆ ಮುಂದುವರೆದಿದೆ. ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಯಿಸಿರುವ ಪಶ್ಚಿಮ ವಿಭಾಗದ ಡಿಸಿಪಿ ರವಿ ಚೆನ್ನಣ್ಣನವರ್ ಸಿಸಿಟಿವಿ ದೃಶ್ಯಗಳನ್ನು ಪರೀಕ್ಷಿಸುತ್ತಿದ್ದಾರೆ.











Click it and Unblock the Notifications