Kunal Kamra Row: ಬೆಂಗಳೂರಿನ ಈ ಯೋಜನೆ ಬಗ್ಗೆ ಅಪಹಾಸ್ಯ, ಕುನಾಲ್ ಕಾಮ್ರಾಗೆ ಆಹ್ವಾನ!

Kunal Kamra Row: ಬೆಂಗಳೂರಿನ ಯೋಜನೆಯೊಂದರ ಬಗ್ಗೆ ಇದೀಗ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈಗಾಗಲೇ ಕಳೆದ 4 ದಿನಗಳಿಂದ ಕುನಾಲ್ ಕಾಮ್ರಾ ಅವರ ಕಾಮಿಡಿ ಇದೀಗ ದೇಶದಾದ್ಯಂತ ಸುದ್ದಿಯಾಗಿದೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಗ್ಗೆ ಕಾಮಿಡಿಯನ್ ಕುನಾಲ್ ಕಮ್ರಾ ಅವರು ಕಾಮಿಡಿ ಮಾಡಿದ್ದಾರೆ ಎನ್ನುವ ವಿಚಾರವು ದೇಶದಾದ್ಯಂತ ಭಾರೀ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಕುನಾಲ್ ಹಾಗೂ ಈಜಿಪುರ ಫ್ಲೈಓವರ್‌ನ ಬಗ್ಗೆ ಏಕಕಾಲಕ್ಕೆ ಚರ್ಚೆ ನಡೆದಿದೆ.

ಬೆಂಗಳೂರಿನ ಈಜಿಪುರ ಫ್ಲೈಓವರ್ ವಿಚಾರ ರಾಷ್ಟ್ರದಾದ್ಯಂತ ಚರ್ಚೆಗೆ ಕಾರಣವಾಗಿದ್ದು. ಈಜಿಪುರ ಟ್ರೋಲ್ ಮತ್ತೆ ಮುನ್ನೆಲೆಗೆ ಬಂದಿದೆ. ಅವರನ್ನು ಬೆಂಗಳೂರಿಗೆ ಆಹ್ವಾನ ನೀಡಲಾಗಿದೆ. ದೇಶದಲ್ಲಿ ಇದೀಗ ಕಾಮಿಡಿ ವಿಚಾರವಾಗಿ ಗಂಭೀರವಾದ ಚರ್ಚೆಗಳು ನಡೆದಿವೆ. ಮಹಾರಾಷ್ಟ್ರದಲ್ಲಿ ನಡೆದ ಕಾಮಿಡಿ ಶೋ ಗದ್ದಲ ಇದೀಗ ದೇಶದಾದ್ಯಂತ ಚರ್ಚೆಯಾಗಿದ್ದು. ಈ ಚರ್ಚೆಯಲ್ಲಿ ಇದೀಗ ಈಜಿಪುರದ ವಿಷಯವನ್ನು ಪ್ರಸ್ತಾಪಿಸಲಾಗಿದೆ.

Kunal Kamra Row mockery of bengaluru Ejipura flyover project and invitation Kunal Kamra

ಕುನಾಲ್ ಕಾಮ್ರಾ ಅವರು ಮಹಾರಾಷ್ಟ್ರದ ಮುಂಬೈನ ಹ್ಯಾಬಿಟ್ಯಾಟ್ ಸ್ಟುಡಿಯೋದಲ್ಲಿ ಕಾಮಿಡಿ ಶೋ ನೀಡಿದ್ದರು. ಇದಾದ ಮೇಲೆ ಈ ಸ್ಟುಡಿಯೋದಲ್ಲಿ ಭಾರೀ ಪ್ರತಿಭಟನೆ ಹಾಗೂ ಕುರ್ಚಿಗಳನ್ನು ಧ್ವಂಸ ಮಾಡಲಾಗಿತ್ತು. ಏಕನಾಥ್‌ ಶಿಂಧೆ ಅವರ ಬಗ್ಗೆ ಅವಹೇಳನಕಾರಿಯಾಗಿ ಕಾಮಿಡಿ ಮಾಡಲಾಗಿದೆ ಎಂದು ಆರೋಪಿಸಿದ್ದ ಶಿವಸೇನೆ (ಏಕನಾಥ್ ಶಿಂಧೆ ಬಣ)ದ ಕಾರ್ಯಕರ್ತರು ಈ ಪ್ರತಿಭಟನೆಯನ್ನು ನಡೆಸಿದ್ದಾರು.

ಇದೀಗ ಈ ವಿಚಾರದಲ್ಲಿ ಬೆಂಗಳೂರಿನ ಈಜಿಪುರದ ಬಗ್ಗೆ ಚರ್ಚೆ ನಡೆದಿದೆ. ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ aashay sachdeva ಎನ್ನುವವರು ಮಾಡಿರುವ ಪೋಸ್ಟ್‌ ಭಾರೀ ಚರ್ಚೆಗೆ ಕಾರಣವಾಗಿದೆ. Kunal Kamra ಅವರ (Kunal Kamra Statement) ಟ್ವೀಟ್‌ಗೆ ರೀಟ್ವೀಟ್‌ ಮಾಡಿರುವ ಬೆಂಗಳೂರಿನ ನಿವಾಸಿ ಮುಂದಿನ ದಿನಗಳಲ್ಲಿ ಬೆಂಗಳೂರಿನ ಈಜಿಪುರ ಮೇಲ್ಸೇತುವೆಯ ಕೆಳಗೆ ಬಂದು Stand Up Comedy / ಹಾಸ್ಯ ಮಾಡುವಂತೆ ಆಹ್ವಾನ ನೀಡಲಾಗಿದೆ. ಇದೀಗ ಈ ಪೋಸ್ಟ್‌ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ವೈರಲ್ ಆಗುತ್ತಿದೆ.

ಈಜುತ್ತಿರುವ ಈಜಿಪುರ ಮೇಲ್ಸೇತುವೆ: ಬೆಂಗಳೂರಿನ ಈಜಿಪುರದ ಮೇಲ್ಸೇತುವೆಯು ಈಜಿದಲ್ಲೇ ಈಜುತ್ತಿದೆ! ಹೌದು ಈಜಿಪುರ ಮೇಲ್ಸೇತುವೆ ಕಾಮಗಾರಿಯನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು 2017ರಲ್ಲಿ ಕೈಗೊಂಡಿತ್ತು. ಆದರೆ ಈ ಯೋಜನೆ 2025ರಲ್ಲೂ ಪೂರ್ಣಗೊಂಡಿಲ್ಲ. ಇತ್ತೀಚಿನ ದಿನಗಳಲ್ಲಿ ಈ ಕಾಮಗಾರಿ ಪುನರ್‌ ಪ್ರಾರಂಭವಾಗಿದೆ.

Take a Poll

ಇದೀಗ ಬೆಂಗಳೂರಿನ ಈಜಿಪುರ ಫ್ಲೈಓವರ್ ಬಳಿ ಬಂದು ಕಾಮಿಡಿ ಮಾಡುವಂತೆ ಕುಮಾನ್ ಕಾಮ್ರಾ ಅವರಿಗೆ ಆಹ್ವಾನಿಸಲಾಗಿದೆ. ಈ ಕಾಮಿಡಿ ರಿಕ್ವೆಸ್ಟ್‌ ವೈರಲ್‌ ಆಗುತ್ತಿದ್ದು ಬಿಬಿಎಂಪಿಗೆ ಜನ ಮಂಗಳಾರತಿ ಎತ್ತುತ್ತಿದ್ದಾರೆ. ಬೆಂಗಳೂರಿನ ಆಶಯ್ ಸಚ್‌ದೇವ್, ಅವರು ಕುನಾಲ್‌ ಅವರಿಗೆ "ನೀವು ಈಜಿಪುರ ಫ್ಲೈಓವರ್ ಕೆಳಗಡೆ ಮುಂದಿನ ಪ್ರದರ್ಶನವನ್ನು ಕೊಡಬಹುದಾ ?" ಅಂತ ಕೇಳಿದ್ದಾರೆ.

ಬೆಂಗಳೂರಿನ ಕೋರಮಂಗಲ ಭಾಗದಲ್ಲಿ 2.5 ಕಿಲೋಮೀಟರ್ ಉದ್ದದ ಈಜಿಪುರ ಮೇಲ್ಸೇತುವೆ ಕಾಮಗಾರಿಯು ಕಳೆದ 7 ವರ್ಷಗಳಿಂದಲೂ ನಡೆಯುತ್ತಿದೆ. ಈ ಬಗ್ಗೆ ಈಗಾಗಲೇ ಹಲವು ಹಾಸ್ಯ ಹಾಗೂ ಟ್ರೋಲ್‌ಗಳು ಆಗಿವೆ. ಇದೀಗ ಆಗಿರುವ ಟ್ರೋಲ್ ಹೊಸ ಸೇರ್ಪಡೆಯಷ್ಟೇ ಎನ್ನುತ್ತಿದ್ದಾರೆ ಬೆಂಗಳೂರಿಗರು.

Kunal Kamra Row ಏನಿದು ಕುನಾಲ್ ಕಾಮ್ರಾ ವಿವಾದ

ಸ್ಟ್ಯಾಂಡ್‌ಅಪ್‌ ಕಾಮಿಡಿಯನ್ ಕುನಾಲ್ ಕಾಮ್ರಾ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರನ್ನು ಗದ್ದರ್ (ದೇಶದ್ರೋಹಿ) ಎಂದಿದ್ದಾರೆ ಎನ್ನುವುದು ವಿವಾದ ಸ್ವರೂಪ ಪಡೆದುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+