ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತಯಂತ್ರ (ಇವಿಎಂ) ಬೇಡ ಮತಪತ್ರ ಬಳಸಿ: ಕುಮಾರಸ್ವಾಮಿ

By Manjunatha
|
Google Oneindia Kannada News

ಬೆಂಗಳೂರು, ಡಿಸೆಂಬರ್ 16: ಚುನಾವಣೆಯಲ್ಲಿ ಮತಯಂತ್ರ (ಇವಿಎಂ) ಬದಲಿಗೆ ಬ್ಯಾಲೆಟ್ ಪೇಪರ್ (ಮತ ಪತ್ರ) ಬಳಸಬೇಕೆಂಬ ಸಿದ್ದರಾಮಯ್ಯ ಅವರ ಒತ್ತಾಯಕ್ಕೆ ಈಗ ಮತ್ತೊಬ್ಬ ರಾಜ್ಯ ನಾಯಕರು ಧನಿಗೂಡಿಸಿದ್ದಾರೆ.

ಮುಂದಿನ ಅಸೆಂಬ್ಲಿ ಚುನಾವಣೆಯನ್ನೇ ಬಹಿಷ್ಕರಿಸಲು ಹೊರಟಿದೆಯಾ ಕಾಂಗ್ರೆಸ್?ಮುಂದಿನ ಅಸೆಂಬ್ಲಿ ಚುನಾವಣೆಯನ್ನೇ ಬಹಿಷ್ಕರಿಸಲು ಹೊರಟಿದೆಯಾ ಕಾಂಗ್ರೆಸ್?

ವಿಧಾನಸಭಾ ಚುನಾವಣೆಯಲ್ಲಿ ಇವಿಎಂ (ವಿದ್ಯುನ್ಮಾನ ಮತ ಯಂತ್ರದ) ಬದಲಿಗೆ ಮತ ಪತ್ರವನ್ನು ಬಳಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Kumaraswamy supports Siddaramaiah's Ballet paper election demand

ಪಕ್ಷದ ಪ್ರಮುಖರ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಮತಯಂತ್ರಗಳಿಗಿಂತಲೂ ಮತಪತ್ರ ಬಳಕೆ ಪಾರದರ್ಶಕವಾಗಿರುತ್ತದೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರು ಎರಡು ವರ್ಷಗಳಿಂದ ಮತ ಪತ್ರವನ್ನು ಬಳಸುವಂತೆ ಒತ್ತಾಯಿಸುತ್ತಲೇ ಬಂದಿದ್ದಾರೆ ಎಂದರು.

ಅಮೆರಿಕದಂತಹ ಮುಂದುವರಿದ ದೇಶಗಳಲ್ಲೇ ಇವಿಎಂ ಬದಲಿಗೆ ಮತ ಪತ್ರವನ್ನು ಬಳಸುತ್ತಿದ್ದಾರೆ. ಇವಿಎಂ ಬಗ್ಗೆ ರಾಜಕೀಯ ಪಕ್ಷಗಳು ಅನುಮಾನ ವ್ಯಕ್ತಪಡಿಸಿವೆ. ಪಾರದರ್ಶಕವಾಗಿ ಚುನಾವಣೆ ನಡೆಸಲು ಹಳೆಯ ಚುನಾವಣಾ ಪದ್ಧತಿಯನ್ನೇ ಆರಂಭಿಸಬೇಕು ಎಂದು ಅವರು ಹೇಳಿದರು.

ನಾನು ಅಭ್ಯರ್ಥಿಯಾಗಲ್ಲ, ಚುನಾವಣೆ ಪ್ರಚಾರ ಮಾಡುವೆ: ನಿಖಿಲ್ನಾನು ಅಭ್ಯರ್ಥಿಯಾಗಲ್ಲ, ಚುನಾವಣೆ ಪ್ರಚಾರ ಮಾಡುವೆ: ನಿಖಿಲ್

ನಿಖಿಲ್ ರಾಜಕೀಯಕ್ಕೆ ಬರಲ್ಲ
ಇದೇ ಸಮಯದಲ್ಲಿ ತಮ್ಮ ಮಗ ನಿಖಿಲ್ ರಾಜಕೀಯ ಪ್ರವೇಶದ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

English summary
JDS state president Kumaraswamy said election commission should use ballet paper instead of EVM for polling. He also said America is also using ballet paper for transparent polling process.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X