ಜೂ. 1ರಿಂದ ಬೆಂಗಳೂರಲ್ಲಿ ಕುಮಾರಣ್ಣ ಅಭಿಯಾನ
ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದ ಸಾಧನೆಗಳನ್ನು ಜನರ ಮುಂದಿಡಲು ಜೂನ್ 1ರಿಂದ ಹೊಸ ಬಗೆಯ ಅಭಿಯಾನ ಆರಂಭಿಸಲು ನಿರ್ಧರಿಸಲಾಗಿದೆ.
ಬೆಂಗಳೂರು, ಮೇ 30: ಜಾತ್ಯಾತೀತ ಜನತಾದಳ (ಜೆಡಿಎಸ್) ವತಿಯಿಂದ ಹೊಸತೊಂದು ಅಭಿಯಾನಕ್ಕೆ ಜೂನ್ 1ರಿಂದ ಚಾಲನೆ ನೀಡಲಾಗುತ್ತಿದೆ. ಅಂದು, ಮೆಜೆಸ್ಟಿಕ್ ನಲ್ಲಿರುವ ಅಣ್ಣಮ್ಮ ದೇಗುಲದಲ್ಲಿ ಪೂಜೆ ನೆರವೇರಿಸಿದ ನಂತರ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಅವರು, ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡ ಜನಪ್ರಿಯ ಕಾರ್ಯಕ್ರಮಗಳನ್ನು ಮತದಾರರಿಗೆ ಮತ್ತೆ ನೆನಪು ಮಾಡಿಕೊಡುವ ಪ್ರಯತ್ನ ಈ ಅಭಿಯಾನದ ಉದ್ದೇಶ.

ಈ ಹಿನ್ನೆಲೆಯಲ್ಲಿ, ಸುಮಾರು 15 ದಿನಗಳ ಕಾಲ ಸತತವಾಗಿ ನಗರದ ನಾನಾ ಪ್ರಾಂತ್ಯಗಳಿಗೆ ಭೇಟಿ ನೀಡುವ ಜೆಡಿಎಸ್ ಕಾರ್ಯಕರ್ತರು, ಕುಮಾರ ಸ್ವಾಮಿ ಸರ್ಕಾರದ ಸಾಧನೆಗಳನ್ನು ಸಾರಲಿದ್ದಾರೆ. ಕೆಲವಾರು ಪ್ರಾಂತ್ಯಗಳಲ್ಲಿ ಜರುಗುವ ಈ ಅಭಿಯಾನದಲ್ಲಿ ಖುದ್ದು ಕುಮಾರಸ್ವಾಮಿಯವರೇ ಪಾಲ್ಗೊಂಡು ಮನೆ ಮನೆಗೂ ತೆರಳಿ ತಮ್ಮ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡಲಿದ್ದಾರೆ.












Click it and Unblock the Notifications