ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ ನೋಡಲು ವಿಮಾನ ಪ್ರಯಾಣ ಸಸ್ತಾ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 6: ದಸರಾ ಹಾಗೂ ನವರಾತ್ರಿ ಅಂಗವಾಗಿ ಕೆಎಸ್‌ಟಿಡಿಸಿ ಅ.10ರಿಂದ 20ರವರೆಗೆ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಮೈಸೂರಿಗೆ 72 ಸೀಟುಗಳ ವಿಶೇಷ ವಿಮಾನ ಹಾರಾಟ ನಡೆಸಲಿದೆ.

ಮಹಾರಾಜರ ಖಾಸಗಿ ದರ್ಬಾರ್: ನಿಜಕ್ಕೂ ಹೇಗೆ ನಡೆಯುತ್ತಿತ್ತು? ಮಹಾರಾಜರ ಖಾಸಗಿ ದರ್ಬಾರ್: ನಿಜಕ್ಕೂ ಹೇಗೆ ನಡೆಯುತ್ತಿತ್ತು?

ಈ ಕುರಿತು ಕೆಎಸ್‌ಟಿಡಿಸಿ ಎಂಡಿ ಕುಮಾರ್ ಪುಷ್ಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಮಾನ ಪ್ರಯಾಣ ದರ 990 ರೂ ನಿಂದ 2500 ರೂವರೆಗೂ ಇದೆ. ಅಲ್ಲದೆ ಮೈಸೂರು ಸಿಟಿ ರೌಂಡ್ಸ್ ಗೆ 10 ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಎಲ್ಇಡಿ ಪರದೆ ಮೂಲಕ ಜಂಬೂ ಸವಾರಿ, ಪಂಜಿನ ಕವಾಯತು ವೀಕ್ಷಣೆಗೆ ವ್ಯವಸ್ಥೆ ಎಲ್ಇಡಿ ಪರದೆ ಮೂಲಕ ಜಂಬೂ ಸವಾರಿ, ಪಂಜಿನ ಕವಾಯತು ವೀಕ್ಷಣೆಗೆ ವ್ಯವಸ್ಥೆ

ಕಳೆದ ಎರಡು ವರ್ಷ 7 ಸೀಟ್‌ನ ಸೆಸ್ನಾ ವಿಮಾನ ಬಳಸಲಾಗಿತ್ತು. ಈ ಬಾರಿ 72 ಸೀಟ್‌ ಅಲೆಯನ್ಸ್ ವಿಮಾನಬಳಸುವುದರಿಂದ ಹೆಚ್ಚಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಅಲ್ಲದೆ ಬೆಂಗಳೂರು-ಮೈಸೂರು ರಸ್ತೆ ನಡುವೆ ಟ್ರಾಫಿಕ್‌ ಜಾಮ್‌ ಕಿರಿ-ಕಿರಿ ಇಲ್ಲದೆ ಪ್ರಯಾಣಿಸಬಹುದಾಗಿದೆ.

ದಸರಾ ಆಹಾರ ಮೇಳ: ಅಕ್ಟೋಬರ್ 11 ರಿಂದ ವಿಶೇಷ ನಳಪಾಕ ಸ್ಪರ್ಧೆ ದಸರಾ ಆಹಾರ ಮೇಳ: ಅಕ್ಟೋಬರ್ 11 ರಿಂದ ವಿಶೇಷ ನಳಪಾಕ ಸ್ಪರ್ಧೆ

KSTDC launches air service between Bengaluru and Mysuru in cheap prices

ಈ ಕುರಿತು ಏರ್‌ ಇಂಡಿಯಾ ಜತೆ ಅಲೆಯನ್ಸ್ ವಿಮಾನ ಸಂಸ್ಥೆ ಒಪ್ಪಂದ ಮಾಡಿಕೊಂಡಿದ್ದು ಮಂಗಳವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಮಧ್ಯಾಹ್ನ 2. 10ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನ ಮಧ್ಯಾಹ್ನ 3 ಗಂಟೆಗೆ ಮೈಸೂರು ತಲುಪಲಿದೆ. ಅಲ್ಲಿಂದ ಮಧ್ಯಾಹ್ನ 3.30ಕ್ಕೆ ಹೊರಡುವ ವಿಮಾನ ಸಂಜೆ 4.20ಕ್ಕೆ ಬೆಂಗಳೂರು ತಲುಪಲಿದೆ.

English summary
KSTDC is launching air service between Bengaluru and Mysuru in cheap prices on the occasion of Dasara festival from October 10 to 20. The price will start from Rs.999 only.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X