Special Tour Package: ಸರ್ಕಾರದಿಂದ ಬೆಂಗಳೂರು-ಮಂತ್ರಾಲಯ ಟೂರ್ ಪ್ಯಾಕೇಜ್ ಘೋಷಣೆ, ಬುಕ್ಕಿಂಗ್ ಹೇಗೆ?
ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ರಾಯಚೂರು ಜಿಲ್ಲೆಗೆ ಹೊಂದಿಕೊಂಡಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ರಾಘವೇಂದ್ರ ಸ್ವಾಮಿ ಮಂದಿರ ಮಂತ್ರಾಲಯ (Mantralayam) ಸನ್ನಿಧಾನಕ್ಕೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯು ವಿಶೇಷ ಪ್ರವಾಸ ಪ್ಯಾಕೇಜ್ (Bengaluru-Mantralay Tour Packages) ಘೋಷಿಸಿದೆ. ಮಂತ್ರಾಲಯ ನೋಡಿರದವರು ಮತ್ತು ನೋಡಬೇಕೆನ್ನುವವರಿಗೆ ಸುರಕ್ಷಿತವಾಗಿ ತೆರಳಲು ಇಲಾಖೆಯು ಡಿಲೆಕ್ಸ್ ಎಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ಈ ಬಸ್ ಮಾರ್ಗ, ಟಿಕೆಟ್ ದರ, ಸಮಯ, ದರ್ಶನ ಹಾಗೂ ಇತರ ವ್ಯವಸ್ಥೆಯ ಪೂರ್ಣ ಮಾಹಿತಿ ಮುಂದಿದೆ.
ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಭಕ್ತರು ಮತ್ತು ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಪ್ರವಾಸೋದ್ಯಮ ಇಲಾಖೆ ಬೆಂಗಳೂರಿನ ಯಶವಂತಪುರದಿಂದ ನೇರವಾಗಿ ಮಂತ್ರಾಲಯಕ್ಕೆ ಟೂರ್ ಪ್ಯಾಕೇಜ್ ಪರಿಚಯಿಸಿದೆ. ಮಧ್ಯಾಹ್ನದ ಊಟು ಸಹಿತ ಒಟ್ಟು ಎರಡು ದಿನದ ಪ್ಯಾಕೇಜ್ ಇದಾಗಿದೆ. ಪ್ರತಿ ಬುಧವಾರ ಹಾಗೂ ಶುಕ್ರವಾರ ರಾತ್ರಿ 08 ಗಂಟೆಗೆ ಬಿಎಂಟಿಸಿ ಬಸ್ ನಿಲ್ದಾಣ ಯಶವಂತಪುರದಿಂದ ಹೊರಡುತ್ತದೆ. ಭಕ್ತರು ಇಲ್ಲಿಗೆ ಮೆಟ್ರೋ ಹಾಗೂ ಬಿಎಂಟಿಸಿ ಬಸ್ ಮೂಲಕ ನಿಗದಿತ ಸಮಯಕ್ಕೆ ಬಂದು ಸೇರಬೇಕಿದೆ.

ಒಬ್ಬರಿಗೆ ಟಿಕೆಟ್ ದರವೆಷ್ಟು?: ಬೆಂಗಳೂರು-ಮಂತ್ರಾಲಯ ಟೂರ್ ಪ್ಯಾಕೇಜ್‌ನಲ್ಲಿ ಪ್ರತಿಯೊಬ್ಬರಿಗೆ ತಲಾ 2,780 ರೂಪಾಯಿ ಟಿಕೆಟ್ ದರವನ್ನು ಇಲಾಖೆ ನಿಗದಿಪಡಿಸಿದೆ. (ಇತರ ಪ್ಯಾಕೇಜ್‌ಗಳಂತೆ ಈ ಟ್ರಿಪ್‌ನಲ್ಲಿ ಹಿರಿಯ ನಾಗರಿಕರಿಗೆ ಶೇ.20ರಷ್ಟು ರಿಯಾಯಿತಿ ಬಗ್ಗೆ ಮಾಹಿತಿ ಇಲ್ಲ).
ಪ್ರಯಾಣ, ದೇವರ ದರ್ಶನದ ಸಮಯ ವಿವರ
ಮೊದಲ ದಿನ ಅಂದರೆ ಬುಧವಾರ ಹಾಗೂ ಶುಕ್ರವಾರ ರಾತ್ರಿ ಬೆಂಗಳೂರಿನ ನಿಗದಿತ ಸ್ಥಳದಿಂದ ಪ್ರವಾಸೋದ್ಯಮ ಇಲಾಖೆಯ ಬಸ್ ಹೊರಡುತ್ತದೆ. ಮಾರನೇ ದಿನ ಕ್ರಮವಾಗಿ ಗುರುವಾರ ಹಾಗೂ ಶನಿವಾರ ಬೆಳಗ್ಗೆ ಮಂತ್ರಾಲಯವನ್ನು ತಲುಪುತ್ತದೆ.
ಬೆಳಗ್ಗೆ 4.30 ಗಂಟೆಯಿಂದ 6ರವರೆಗೆ ಪ್ರಯಾಣಿಕರಿಗೆ ಫ್ರೆಶ್ ಅಪ್ ಆಗಲು ಅವಕಾಶ ಇರುತ್ತದೆ. ನಂತರ 6.30 ರಿಂದ 10ಗಂಟೆ ಹೊತ್ತಿಗೆ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿಸಲಾಗುತ್ತದೆ. ನಂತರ ಬೆಳಗ್ಗೆ 11 ರಿಂದ 12 ಗಂಟೆವರೆಗೆ ಪಂಚಮುಖಿ ಆಂಜನೇಯ ದೇವರ ದರ್ಶನಕ್ಕೆ ಬಸ್ ಅಲ್ಲಿಗೆ ತೆರಳುತ್ತದೆ. ದರ್ಶನ ಬಳಿಕ ಮಧ್ಯಾಹ್ನ 1 ರಿಂದ 2 ಗಂಟೆ ವೇಳೆಗೆ ಊಟದ ವ್ಯವಸ್ಥೆ ಇರುತ್ತದೆ. ಊಟ ಮುಗಿಸಿಕೊಂಡು ಮಂತ್ರಾಲಯದಿಂದ ಬಸ್ ಹೊರಟು ಅದೇ ದಿನ ರಾತ್ರಿ 09 ಗಂಟೆ ಸುಮಾರಿಗೆ ಬೆಂಗಳೂರಿಗೆ ಬಂದು ಸೇರುತ್ತದೆ.
ಬುಕ್ಕಿಂಗ್ ಹೇಗೆ ಮಾಡಬೇಕು?
ಆಕ್ತರ ಪ್ರಯಾಣಿಕರು/ಪ್ರವಾಸಿಗರು ಪ್ರವಾಸೊದ್ಯಮ ಇಲಾಖೆಯ ಅಧಿಕೃತ ಜಾಲತಾಣದ ಈ https://kstdc.co/tour_packages/mantralaya-tour/ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಥವಾ ದೂರವಾಣಿ 080-43344334 ಇಲ್ಲವೇ ಮೊಬೈಲ್ 8970650070 ಸಂಖ್ಯೆಗೆ ಕರೆ ಮಾಡಿ ವಿಚಾರಿಸಲೂ ಬಹುದಾಗಿದೆ.












Click it and Unblock the Notifications