KSRTC Ambaari Utsav: ಕೆಎಸ್‌ಆರ್‌ಟಿಸಿಯ ಈ ಅಂಬಾರಿ ಉತ್ಸವ ಬಸ್‌ಗಳನ್ನು ನೋಡಿದ್ದೀರಾ?
ಮೈಸೂರು ವಿಭಾಗದಿಂದ ತಿರುಪತಿ, ಹೈದರಾಬಾದ್, ಚೆನ್ನೈ, ಮಂತ್ರಾಲಯ ಮತ್ತು ಎರ್ನಾಕುಲಂಗೆ 'ಎಸಿ ಅಂಬಾರಿ ಡ್ರೀಮ್ ಕ್ಲಾಸ್' ಬಸ್‌ಗಳನ್ನು ಓಡಿಸಲು ಉದ್ದೇಶಿಸಿದೆ.
ಬೆಂಗಳೂರು, ಫೆಬ್ರವರಿ. 17: ಕೆಎಸ್‌ಆರ್‌ಟಿಸಿಯ ಹೊಸ ಅಂಬಾರಿ ಉತ್ಸವ ವೋಲ್ವೋ ಬಸ್‌ಗಳನ್ನು ರಸ್ತೆಗೆ ಇಳಿಸಿದ್ದು, ಜನರ ಗಮನ ಸೆಳೆಯುತ್ತಿವೆ. ಯೂರೋಪಿಯನ್ ಶೈಲಿಯ ಈ ವೋಲ್ವೋ 9600 ಮಲ್ಟಿ-ಆಕ್ಸಲ್ ಸ್ಲೀಪರ್ ಬಸ್ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.
'ಅಂಬಾರಿ ಉತ್ಸವ' ಐಷಾರಾಮಿ ವರ್ಗದ ಬಸ್‌ಗಳು ಒಂದೊಂದೆ ಕೆಎಸ್‌ಆರ್‌ಟಿಸಿ ತೆಕ್ಕೆಗೆ ಸೇರುತ್ತಿದ್ದು, ಫೆಬ್ರವರಿ 21ರೊಳಗೆ 20 ಬಸ್‌ಗಳೂ ಮೈಸೂರು ವಿಭಾಗಕ್ಕೆ ಸೇರಿಕೊಳ್ಳಲಿವೆ.
"ಕೆಎಸ್‌ಆರ್‌ಟಿಸಿಯು ಪ್ರಯಾಣದ ಅನುಕೂಲಕ್ಕಾಗಿ ಹಲವು ಐಷಾರಾಮಿ ಬಸ್‌ಗಳನ್ನು ಪರಿಚಯಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಅಂಬಾರಿ, ಕ್ಲಬ್ ಕ್ಲಾಸ್ ಸ್ಲೀಪರ್ಸ್ ಮತ್ತು ಐರಾವತದಂತಹ ಬಸ್‌ಗಳಿಗೆ ಜನರು ಹೆಚ್ಚು ಆದ್ಯತೆ ನೀಡುತ್ತಿದ್ದು, ಕೆಎಸ್‌ಆರ್‌ಟಿಸಿಯ ಐಷಾರಾಮಿ ಬಸ್‌ಗಳಲ್ಲಿ ಅಪಾಯ ಮುಕ್ತ ಮತ್ತು ಆರಾಮದಾಯಕ ಪ್ರಯಾಣವನ್ನು ಆರಿಸಿಕೊಳ್ಳುತ್ತಿದ್ದಾರೆ" ಎಂದು ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ ತಿಳಿಸಿದ್ದಾರೆ.

' ಕೆಎಸ್‌ಆರ್‌ಟಿಸಿಯ 'ಅಂಬಾರಿ ಉತ್ಸವ' ಬಸ್‌ಗಳನ್ನು ಪರಿಚಯಿಸಲಿದೆ, ಇದು ಸೂಪರ್ ಐಷಾರಾಮಿ ಮತ್ತು ವಿಶೇಷ ಪ್ರಯಾಣದ ಅನುಭವವನ್ನು ನೀಡುತ್ತದೆ. ನಾವು ಅಂತಹ 20 ಬಸ್‌ಗಳ ಸೇವೆಗಳನ್ನು ಮೈಸೂರಿನಿಂದ ವಿವಿಧ ಸ್ಥಳಗಳಿಗೆ ಪ್ರಾರಂಭಿಸುತ್ತೇವೆ' ಎಂದು ಮಾಹಿತಿ ನೀಡಿದ್ದಾರೆ.
ಮೈಸೂರು ವಿಭಾಗವು ಮೈಸೂರಿನಿಂದ ತಿರುಪತಿ, ಹೈದರಾಬಾದ್, ಚೆನ್ನೈ, ಮಂತ್ರಾಲಯ ಮತ್ತು ಎರ್ನಾಕುಲಂಗೆ 'ಎಸಿ ಅಂಬಾರಿ ಡ್ರೀಮ್ ಕ್ಲಾಸ್' ಬಸ್‌ಗಳನ್ನು ಓಡಿಸಲು ಉದ್ದೇಶಿಸಿದೆ.
ಇದಲ್ಲದೆ, ಬೆಂಗಳೂರು - ಮೈಸೂರು - ಕೋಜಿಕೋಡು, ಮೈಸೂರು - ಕುಂದಾಪುರ, ಮೈಸೂರು - ಬೆಂಗಳೂರು - ಗೋಕರ್ಣ, ಮೈಸೂರು - ಉಡುಪಿ ಮತ್ತು ಮೈಸೂರು - ಬೆಳಗಾವಿ ಸೇರಿದಂತೆ ಹತ್ತು ನಾನ್-ಎಸಿ ಸ್ಲೀಪರ್ ಬಸ್‌ಗಳನ್ನು ಮೈಸೂರು ವಿಭಾಗದಿಂದ ನಿರ್ವಹಿಸಲಾಗುತ್ತದೆ.

ಕೆಎಸ್‌ಆರ್‌ಟಿಸಿ 700 ಕ್ಕೂ ಹೆಚ್ಚು ಹೊಸ ಬಸ್‌ಗಳನ್ನು ಖರೀದಿಸುತ್ತಿದೆ. ಬಸ್‌ಗಳನ್ನು ಅದರ ವೇಳಾಪಟ್ಟಿ ಮತ್ತು ದೈನಂದಿನ ಟ್ರಿಪ್‌ಗಳ ಪ್ರಕಾರ ಮೈಸೂರು ವಿಭಾಗಕ್ಕೆ ವಿತರಿಸಲಾಗುತ್ತದೆ. 550 ಸಾರಿಗೆ ಬಸ್‌ಗಳು, 50 ಎಲೆಕ್ಟ್ರಿಕ್ ಬಸ್‌ಗಳು, 40 ನಾನ್ ಎಸಿ ಸ್ಲೀಪರ್, 20 ಅಂಬಾರಿ ಉತ್ಸವ, 50 ಸಿಟಿ ವಾಹನಗಳು ಬರಲಿವೆ. ಜೊತೆಗೆ 13.5 ಮೀಟರ್ ಉದ್ದದ ನಾಲ್ಕು ಎಸಿ ಸ್ಲೀಪರ್ ಬಸ್‌ಗಳು ಮತ್ತು 13.4 ಮೀಟರ್ ಉದ್ದದ ನಾಲ್ಕು ನಾನ್ ಎಸಿ ಸ್ಲೀಪರ್ ಬಸ್‌ಗಳು ಬರಲಿವೆ"' ಎಂದು ಹೇಳಿದ್ದಾರೆ.
ಸದ್ಯ ಮೈಸೂರು ವಿಭಾಗವು 1,072 ಬಸ್‌ಗಳನ್ನು ಹೊಂದಿದ್ದು, ರಾಜ್ಯದಾದ್ಯಂತ ಪ್ರತಿದಿನ 7,854 ಟ್ರಿಪ್‌ಗಳನ್ನು ನಿರ್ವಹಿಸಲಾಗುತ್ತದೆ. ವಿಭಾಗವು 4 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತದೆ.












Click it and Unblock the Notifications