ರಂಜಾನ್ ಪ್ರಯುಕ್ತ ಕೆಎಸ್ಆರ್‌ಟಿಸಿಯಿಂದ ಹೆಚ್ಚುವರಿ ಬಸ್
ಬೆಂಗಳೂರು, ಜುಲೈ 15 : ಕೆಎಸ್‌ಆರ್‌ಟಿಸಿ ರಂಜಾನ್ ಪ್ರಯುಕ್ತ ಹೆಚ್ಚುವರಿ ಬಸ್ ಸೇವೆಗಳನ್ನು ಒದಗಿಸಲಿದೆ. ಜುಲೈ 17 ಮತ್ತು 18ರಂದು ಈ ಬಸ್ಸುಗಳು ಸಂಚಾರ ನಡೆಸಲಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಪಿಕಪ್ ಪಾಯಿಂಟ್ ವ್ಯವಸ್ಥೆ ಮಾಡಲಾಗಿದೆ.
ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಮತ್ತು ನಗರದ ವಿವಿಧ ಪಿಕಪ್ ಪಾಯಿಂಟ್‌ಗಳ ಮೂಲಕ ಕೆಎಸ್ಆರ್‌ಟಿಸಿಯ ಹೆಚ್ಚುವರಿ ಬಸ್ಸುಗಳು ಸಂಚಾರ ನಡೆಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮುಂಗಡ ಟಿಕೆಟ್ ಬುಕ್ ಮಾಡದ ಬಸ್ಸುಗಳು ಮೆಜೆಸ್ಟಿಕ್‌ನಿಂದ ಸಂಚರಿಸಲಿವೆ. [ಟಿಕೆಟ್ ಬುಕ್ ಮಾಡಲು ವಿಳಾಸ]

ಜುಲೈ 17ರ ಶುಕ್ರವಾರ ಮತ್ತು ಜುಲೈ 18ರ ಶನಿವಾರ ಹೆಚ್ಚುವರಿ ಬಸ್ಸುಗಳು ಸಂಚಾರ ನಡೆಸಲಿವೆ. ಹೆಚ್ಚುವರಿ ಬಸ್ಸುಗಳು ಮೈಸೂರು ರಸ್ತೆಯ ಸ್ಯಾಟಲೈಟ್ ನಿಲ್ದಾಣ, ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ, ವಿಜಯನಗರ ಟಿಟಿಎಂಸಿ, ಗಂಗಾನಗರ, ಮಲ್ಲೇಶ್ವರಂ 18ನೇ ಕ್ರಾಸ್, ಜಯನಗರ 4ನೇ ಬ್ಲಾಕ್ ಮುಂತಾದ ಪಿಕಪ್ ಪಾಯಿಂಟ್‌ಗಳಿಂದ ಸಂಚಾರ ನಡೆಸಲಿವೆ. [2015ರ ರಜಾದಿನಗಳ ಪಟ್ಟಿ]
ದಾವಣಗೆರೆ, ಹುಬ್ಬಳ್ಳಿ, ಹೊಸಪೇಟೆ, ಬಳ್ಳಾರಿ, ಶಿವಮೊಗ್ಗ ಮಾರ್ಗದಲ್ಲಿ ಸಂಚಾರ ನಡೆಸುವ ಮುಂಗಡ ರಹಿತ ಮತ್ತು ಹೆಚ್ಚುವರಿ ಬಸ್ಸುಗಳು ಕೆಂಪೇಗೌಡ ಬಸ್ ನಿಲ್ದಾಣ ಮುಂಭಾಗದ ಬಿಎಂಟಿಸಿ ಸರ್ವಿಸ್ ರಸ್ತೆ ಮೂಲಕ ಸಂಚಾರ ನಡೆಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎರಡು ದಿನಗಳ ರಜೆ
* ಜುಲೈ 18ರ ಶನಿವಾರ ರಂಜಾನ್ ಪ್ರಯುಕ್ತ ಸರ್ಕಾರಿ ರಜೆ
* ಜುಲೈ 19 ಭಾನುವಾರ












Click it and Unblock the Notifications