ಕೆಎಸ್‌ಆರ್‌ಟಿಸಿ ಐರಾವತದಲ್ಲಿ 699 ಬೆಳ್ಳಿದೀಪ ಪತ್ತೆ

ಬೆಂಗಳೂರು, ಜನವರಿ 12: ಬೆಂಗಳೂರಿನಿಂದ ವಿಜಯವಾಡಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ 699 ಬೆಳ್ಳಿದೀಪಗಳು ಪತ್ತೆಯಾಗಿವೆ.

ಕೆಎಸ್‌ಆರ್‌ಟಿಸಿಯ ಐರಾವತ ಕ್ಲಬ್ ಕ್ಲಾಸ್‌ ಬಸ್‌ನಲ್ಲಿ ವಾರಸುದಾರರೇ ಇಲ್ಲದ 40 ಕೆಜಿ ತೂಕದ 699 ಬೆಳ್ಳಿ ದೀಪಗಳು ಪತ್ತೆಯಾಗಿವೆ.

ರಾತ್ರಿ 8.58ಕ್ಕೆ ಹೊಸಕೋಟೆ ಟೋಲ್‌ ಬಳಿ ನಿಗಮದ ತನಿಖಾಧಿಕಾರಿಗಳು ದಾಳಿ ನಡೆಸಿ ಬಸ್‌ ಪರಿಶೀಲನೆ ನಡೆಸಿದ್ದಾರೆ. ಆಗ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಬೆಳ್ಳಿ ವಸ್ತುಗಳು ಪತ್ತೆಯಾಗಿವೆ. ಅವುಗಳನ್ನು ವಾಣಿಜ್ಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ.

KSRTC bus crew suspended for ferrying silver lamps

ಪ್ರಭಾಕರ ರೆಡ್ಡಿ ನೇತೃತ್ವದ ತಂಡ ಬಸ್ ಸಂಖ್ಯೆ ಕೆಎ27 ಎಫ್ 2844 ತಡೆದು ಮೊದಲಿಗೆ ಟಿಕೆಟ್ ಪರಿಶೀಲಿಸಿದೆ. ಬಳಿಕ ಡಿಕ್ಕಿ ಪರಿಶೀಲಿಸಿದಾಗ ಅನುಮಾನಾಸ್ಪದವಾಗಿ ಸಾಗಿಸುತ್ತಿದ್ದ 4 ಬ್ಯಾಗ್‌ಗಳು ಪತ್ತೆಯಾಗಿದೆ. ಈ ಕುರಿತು ನಿರ್ವಾಹಕರನ್ನು ಪ್ರಶ್ನಿಸಿದಾಗ ವಾರಸುದಾರರಿಲ್ಲ ಎಂದು ಹೇಳಿದ್ದಾರೆ.

ಬಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಾಲಕ ಎಚ್‌ ಕೃಷ್ಣಮೂರ್ತಿ ಮತ್ತು ಚಾಲಕ ಕಂ ನಿರ್ವಾಹಕ ಎಸ್ ನಾರಾಯಣಪ್ಪ ಅವರನ್ನು ಅಕ್ರಮಕ್ಕೆ ಸಹಕರಿಸಿರುವ ಆರೋಪದಲ್ಲಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+