ಬೆಂಗಳೂರು-ಮೈಸೂರು ರೈಲ್ವೆ ಪ್ರಯಾಣಿಕರೇ ಗಮನಿಸಿ, ವೇಳಾಪಟ್ಟಿ ಬದಲು
ಬೆಂಗಳೂರು, ಜೂನ್ 21 : ಬೆಂಗಳೂರು-ಮೈಸೂರು ನಡುವಿನ 'ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್' ವಿಶೇಷ ರೈಲಿನ ವೇಳಾಪಟ್ಟಿ ಬದಲಾಗಿದೆ. ಜೂನ್ 21ರ ಭಾನುವಾರದಿಂದಲೇ ನೂತನ ವೇಳಾಪಟ್ಟಿ ಜಾರಿಗೆ ಬಂದಿದೆ.
Recommended Video
ಭಾನುವಾರ ಹೊರತು ಪಡಿಸಿ ಉಳಿದ 6 ದಿನ ಸಂಚಾರ ನಡೆಸುತ್ತಿದ್ದ 'ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್' ರೈಲು ಇನ್ನು ಮುಂದೆ ವಾರದ ಎಲ್ಲಾ ದಿನ ಸಂಚಾರ ನಡೆಸಲಿದೆ. ಚಾಮುಂಡಿ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿ ಅನ್ವಯವೇ ಸಂಚಾರ ನಡೆಸಲಿದೆ.
'ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್' ವಿಶೇಷ ರೈಲು ಇದುವರೆಗೆ ಮಧ್ಯಾಹ್ನ 1.45ಕ್ಕೆ ಮೈಸೂರಿನಿಂದ ಹೊರಡುತ್ತಿತ್ತು. ಇದರಿಂದ ಹೆಚ್ಚಿನ ಜನರಿಗೆ ಉಪಯೋಗ ಆಗುತ್ತಿರಲಿಲ್ಲ. ಆದ್ದರಿಂದ ವೇಳಾಪಟ್ಟಿ ಬದಲಾವಣೆ ಮಾಡಬೇಕು ಎಂಬ ಒತ್ತಾಯವೂ ಇತ್ತು.

ಜೂನ್ 21ರಿಂದ ಬದಲು: 'ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್' ರೈಲು ನಂಬರ್ 06503 ಸಂಜೆ 6.15ಕ್ಕೆ ಬೆಂಗಳೂರಿನಿಂದ ಹೊರಡಲಿದೆ. ಕೆಂಗೇರಿ (6.34), ಬಿಡದಿ (6.49), ರಾಮನಗರ (7.04), ಚನ್ನಪಟ್ಟಣ (7.14.), ಮದ್ದೂರು (7.34), ಮಂಡ್ಯ (7.48), ಪಾಂಡವಪುರ (8.19), ಶ್ರೀರಂಗಪಟ್ಟಣ (8.26), ಮೈಸೂರು (9.05) ತಲುಪಲಿದೆ.
ರೈಲು ಸಂಖ್ಯೆ 06504 ಜೂನ್ 22ರಿಂದ ಬೆಳಗ್ಗೆ 6.45ಕ್ಕೆ ಮೈಸೂರಿನಿಂದ ಹೊರಡಲಿದೆ. ಶ್ರೀರಂಗಪಟ್ಟಣ (6.59), ಪಾಂಡವಪುರ (7.04), ಮಂಡ್ಯ (7.28), ಮದ್ದೂರು (7.49), ಚನ್ನಪಟ್ಟಣ (8.09), ರಾಮನಗರ (8.24), ಬಿಡದಿ (8.39), ಕೆಂಗೇರಿ (8.59), ಬೆಂಗಳೂರು (9.35)ಕ್ಕೆ ಬಂದು ತಲುಪಲಿದೆ.












Click it and Unblock the Notifications