KSDL Officer: ಡೆತ್‌ನೋಟ್ ಬರೆದಿಟ್ಟು ಮತ್ತೊಬ್ಬ ಸರ್ಕಾರಿ ಅಧಿಕಾರಿ ಆತ್ಮಹ*ಗೆ ಶರಣು: ಕಾರಣವೇನು?

ಬೆಂಗಳೂರು, ಡಿಸೆಂಬರ್ 30: ರಾಜ್ಯದ ಬೆಳಗಾವಿಯಲ್ಲಿ ತಹಶೀಲ್ದಾರ ಕಚೇರಿಯಲ್ಲಿ ಎಸ್‌ಡಿಸಿ ಅಧಿಕಾರಿ ಪ್ರಾಣ ಬಿಟ್ಟಿದ್ದರು. ಅದರ ಬೆನ್ನಲ್ಲೆ ಕಲ್ಯಾಣ ಕರ್ನಾಟಕದಲ್ಲಿ ಸಚಿವರ ಆಪ್ತನ ಹೆಸರು ಬರೆದಿಟ್ಟು ಗುತ್ತಿಗೆದಾರರ ಸಾವನ್ನಪ್ಪಿದ್ದಾರೆ. ಈ ವಿಚಾರಗಳು ಸಾಕಷ್ಟು ಚರ್ಚೆ ಆಗುತ್ತಿದ್ದಂತೆ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಸೋಪ್ಸ್ ಆಂಡ್ ಡಿಟರ್ಜೆಂಟ್ ಲಿಮಿಟೆಡ್ (KSDL) ಅಧಿಕಾರಿಯೊಬ್ಬರು ಮನೆಯಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಕೈಯಲ್ಲಿದ್ದ ಡೆತ್‌ನೋಟ್ ಅನ್ನು ಪೊಲೀಸರು ವಶಕ್ಕೆ ಪಡೆದ್ದಾರೆ. ಪ್ರಕರಣ ತಡವಾಗಿ ಬೆಳಕಿದೆ ಬಂದಿದೆ.

KSDL ಅಧಿಕಾರಿ ಅಮೃತ್ ಶಿರೂರ್ ಬಾಡಿಗೆ ಮನೆಯಲ್ಲಿ ಆತ್ಮಹ* ಮಾಡಿಕೊಂಡಿದ್ದಾರೆ. ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ. ಅವರ ಮೃತ ಮನೆಯಲ್ಲಿಯೇ ಸೋಮವಾರ ಪತ್ತೆಯಾಗಿದೆ. ಈ ಘಟನೆ ಎರಡು ದಿನಗಳ ಹಿಂದೆ (ಡಿಸೆಂಬರ್ 28ರಂದು) ನಡೆದಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಮೃತ ಅಧಿಕಾರಿ ಕೈಲಿದ್ದ ಡೆತ್‌ನೋಟ್ ಅನ್ನು ಪರಿಶೀಲಿಸಿರುವ ಪೊಲೀಸ್ ಅಧಿಕಾರಿಗಳು ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

KSDL Officer Amrit Shirur Lost his Life In Muneshwara Block Mahalakshmi Layout Due Family Issues

ಸರ್ಕಾರಿ ಅಧಿಕಾರಿ ಸಾವಿಗೆ ಕಾರಣವೇನು?

''ನಾನು ನನ್ನ ಪತ್ನಿಗೆ ಒಳ್ಳೆ ಗಂಡನಾಗಲಿಲ್ಲ. ಅಪ್ಪ ಅಮ್ಮನಿಗೆ ತಕ್ಕ ಮಗನಾಗಲಿಲ್ಲ'' ಎಂದು ಮೃತ ಅಧಿಕಾರಿ ಅಮೃತ್ ಶಿರೂರ್ ಅವರು ಡೆತ್‌ನೋಟ್ ಬರೆದು, ಅದನ್ನು ಕೈಲಿ ಹಿಡಿದುಕೊಂಡೆ ಪ್ರಾಣ ಬಿಟ್ಟಿದ್ದಾರೆ. ಇದೆಲ್ಲ ಗಮನಿಸಿದ ಪೊಲೀಸರಿಗೆ ಪ್ರಾಥಮಿಕ ತನಿಖೆಯ ಪ್ರಕಾರ, ಇದು ಸಾವು ಕೌಟುಂಬಿಕ ಕಲಹದಿಂದ ಆಗಿದೆ ಎಂದು ಶಂಕಿಸಿದ್ದಾರೆ.

ಡೆತ್‌ನೋಟ್‌ನಲ್ಲಿ ಹಲವು ಅಂಶಗಳನ್ನು ಮೃತ ಅಧಿಕಾರಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಅಧಿಕಾರಿ ಕೌಟುಂಬಿಕ ಕಲಹಗಳಿಂದ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ನನ್ನ ಸಾವಿಗೆ ಬೇರೆ ಯಾರು ಕಾರಣರಲ್ಲ. ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದ್ದಾರೆ ಎಂದು ತಿಳಿದು ಬಂದಿದೆ.

ಮೊನ್ನೆಯಷ್ಟೇ ಕಲ್ಯಾಣ ಕರ್ನಾಟಕದ ಬೀದರ್‌ನಲ್ಲಿ ಗುತ್ತಿಗೆದಾರರ ಸಚಿವ ಪಂಚಾಳ ಎಂಬುವವರು ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮಗೆ ಕಿರುಕುಳ ನೀಡಲಾಗಿದೆ ಎಂದು ಹೇಳಿರುವ ಗುತ್ತಿಗಾರರು ಕಿರುಕುಳ ತಾಳಲಾರದೇ ಮೃತಪಟ್ಟಿದ್ದಾರೆ.

ಈ ಪ್ರಕರಣ ರಾಜ್ಯ ರಾಜಕಾರಣದಲ್ಲಿ ವ್ಯಾಪಕ ಕೋಲಾಹಲ ಸೃಷ್ಟಿಸಿದೆ. ಸಚಿವ ಪ್ರಯಾಂಕ್ ಖಗೆ ಅವರು ರಾಜೀನಾಮೆ ನೀಡಬೇಕು ಎಂದೆಲ್ಲ ವಿಪಕ್ಷಗಳು ಆಗ್ರಹಿಸಿವೆ. ಧರಣೆ ನಡೆಸಲಾಗಿದೆ. ಸರ್ಕಾರ ಮಾತ್ರ ಏನು ಆಗಿಲ್ಲ ಎಂಬಂತೆ ವರ್ತಿಸುತ್ತಿದೆ. ಇದಕ್ಕು ಮೊದಲು ಹಿರಿಯ ಅಧಿಕಾರಿಗಳ ಕಿರುಕುಳ, ಸಚಿವೆಯೊಬ್ಬರ ಹೆಸರು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಬೆಳಗಾವಿ ವ್ಯಾಪ್ತಿಯಲ್ಲಿ ತಹಶೀಲ್ದಾರ್ ಕೊಠಡಿಯಲ್ಲಿ ಅಧಿಕಾರಿ ನೇಣಿಗೆ ಕೊರಳೊಡ್ಡಿದ್ದರು.

ಹೀಗೆ ಸಾಲು ಸಾಲು ಅಧಿಕಾರಿಗಳು, ಗುತ್ತಿಗೆದಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪತ್ರ ಬರೆದಟ್ಟು ಸಾವ್ನಪ್ಪತ್ತಿದ್ದಾರೆ. ಸರ್ಕಾರದ ಆಡಳಿತ, ಭದ್ರಷ್ಟಾಚಾರ ಕುರಿತು ವಿಪಕ್ಷಗಳು ಕಿಡಿ ಕಾರಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+