Namma Metro: ಕೆಆರ್‌ಪುರಂ-ವೈಟ್‌ಫಿಲ್ಡ್ ಕಾರ್ಯಾಚರಣೆ ಮುನ್ನ 60 ಷರತ್ತು ಪಾಲಿಸಿ ಎಂದ CMRS
ಬೆಂಗಳೂರಿನಲ್ಲಿ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿರುವ ಬಹುನಿರೀಕ್ಷೆಯ ಕೆಆರ್ ಪುರಂ-ವೈಟ್‌ಫೀಲ್ಡ್ ನಮ್ಮ ಮೆಟ್ರೋ ಮಾರ್ಗದಲ್ಲಿ 60 ಷರತ್ತುಗಳ ಪಾಲನೆಗೆ BMRCL ಗೆ ನಿರ್ದೇಶನ ನೀಡಲಾಗಿದೆ.
ಬೆಂಗಳೂರು, ಮಾರ್ಚ್ 06: ಬೆಂಗಳೂರಿನಲ್ಲಿ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿರುವ ಬಹುನಿರೀಕ್ಷೆಯ ಕೆಆರ್ ಪುರಂ-ವೈಟ್‌ಫೀಲ್ಡ್ ನಮ್ಮ ಮೆಟ್ರೋ ಮಾರ್ಗದಲ್ಲಿ 60 ಷರತ್ತುಗಳ ಪಾಲನೆಗೆ BMRCL ಗೆ ನಿರ್ದೇಶನ ನೀಡಲಾಗಿದೆ.
ಹೌದು, ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿರುವ ನಮ್ಮ ಮೆಟ್ರೋದ ಕೆಆರ್ ಪುರಂ-ವೈಟ್‌ಫೀಲ್ಡ್ ಮಾರ್ಗದ ಸುರಕ್ಷತಾ ಲೆಕ್ಕಪರಿಶೋಧನೆಯನ್ನು ಈಗಾಗಲೇ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS) ನಡೆಸಿದ್ದಾರೆ. ಬಳಿಕ ಅವರು, ಈ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆಗಳಿಗೆ 60 ಷರತ್ತುಗಳನ್ನು ತೆರವು ಮಾಡಿಕೊಳ್ಳುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತಕ್ಕೆ (BMRCL) ಸೂಚಿಸಿದ್ದಾರೆ. ಪಾಲಿಸಿ ತೆರವು ಮಾಡಬೇಕಾದ ಷರತ್ತುಗಳು ಯಾವವು ಎಂಬ ಮಾಹಿತಿ ಇಲ್ಲಿದೆ.

ನಮ್ಮ ಮೆಟ್ರೋ 13 ಕಿಲೋಮೀಟರ್ 'ಪರ್ಪಲ್ ಲೈನ್' ವಿಸ್ತರಣೆಯು ಇದೇ ಮಾರ್ಚ್ 10 ರ ನಂತರ ಉದ್ಘಾಟನೆಗೊಳ್ಳಲಿದೆ ಎಂದು ಈಗಾಗಲೇ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ CMRS ಸೂಚಿಸಿದ ಷರತ್ತುಗಳನ್ನು ತೆರೆಯುವುದು ತುಸು ವಿಳಂಬವಾಗದಬಹುದು ಎಂದು ಹೇಳಲಾಗುತ್ತಿದೆ.
ಬೆಂಗಳೂರು ನಮ್ಮ ಮೆಟ್ರೋ ಅಧಿಕಾರಿಗಳಿಗೆ CMRS ಪತ್ರ ರವಾನಿಸಿದೆ. ಆ ಪತ್ರದಲ್ಲಿ ಮೆಟ್ರೋ ಸುರಕ್ಷತಾ ನಿಬಂಧನೆಗಳು ಮತ್ತು ಪ್ರಯಾಣಿಕರ ಮೂಲ ಸೌಕರ್ಯ, ವಿದ್ಯುತ್ ವ್ಯವಸ್ಥೆ, ತಾಂತ್ರಿಕತೆ, ಸಿವಿಲ್ ಎಂಜಿನಿಯರಿಂಗ್, ಟ್ರ್ಯಾಕ್, ಸಿಗ್ನಲ್ ವ್ಯವಸ್ಥೆ, ಸ್ಥಳ ನಿರ್ದಿಷ್ಟ ಸೂಚನೆಗಳ ವರ್ಗಗಳನ್ನು ಉಲ್ಲೇಖಿಸಲಾಗಿದೆ.
ಪತ್ರದಲ್ಲಿ ಉಲ್ಲೇಖಿಸಿದ ಷರತ್ತುಗಳು
* ಮೆಟ್ರೋ ನಿಲ್ದಾಣಗಳ ಪ್ಲಾಟ್‌ಫಾರ್ಮ್‌ಗಳಿಂದ ವಾಕ್‌ವೇಗೆ ಇರುವ ಪ್ರವೇಶ ನಿಯಂತ್ರಿಸಬೇಕು.
* ವಾಕ್‌ವೇಗಳಲ್ಲಿ ಅಧಿಕೃತ ವ್ಯಕ್ತಿಗಳಿಗೆ ಮಾತ್ರ ಅವಕಾಶ ನೀಡಬೇಕು. ಆ ಬಗ್ಗೆ ನಾಮಫಲಕ ಅಳವಡಿಸಬೇಕು.
* ಗೋಡೆ/ಕೀಸ್ಪೇಸ್‌ಗಳ ಮಧ್ಯದ ಅಂತರ ಮುಚ್ಚಬೇಕು
* ಪ್ರಯಾಣಿಕರಿಗೆ ಸೂಕ್ತ ಮಾರ್ಗದರ್ಶನಕ್ಕಾಗಿ ನೀಡಲು ಪ್ರಯಾಣಿಕರ ಪ್ರದೇಶದಲ್ಲಿನ ಎಲ್ಲೆಡೆ ನಿಯಮಾನುಸಾರ ಸಾಕಷ್ಟು ಸೂಚನಾ ಫಲಕ ಒದಗಿಸಬೇಕು.

*ಫೈರ್ ಎಕ್ಸಿಟ್‌ಗಾಗಿ ಸಾಕಷ್ಟು ಸಂಖ್ಯೆಯ ಸಂಕೇತ ಪ್ರದರ್ಶಿಸಬೇಕು.
* ಫೈರ್ ಎಕ್ಸಿಟ್ ಸಂಕೇತ ಪ್ರಯಾಣಿಕರಿಗೆ ಸುಲಭವಾಗಿ ಗೋಚರಿಸುವಂತೆ ಇರಬೇಕು.
* ಪ್ರಯಾಣಿಕರ ಪ್ರವೇಶ /ನಿರ್ಗಮನ, ಟಿಕೆಟಿಂಗ್, ಸ್ವಯಂಚಾಲಿತ ಶುಲ್ಕ ಸಂಗ್ರಹಣೆ, ಎಸ್ಕಲೇಟರ್‌ಗಳು ಮತ್ತು ಲಿಫ್ಟ್‌ಗಳು, ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು.
* ಮೇಲಿನ ಎಲ್ಲ ಷರತ್ತುಗಳು ವೈಟ್‌ಫೀಲ್ಡ್ -ಕೆ.ಆರ್‌ಪುರಂ ಮಾರ್ಗದ ಎಲ್ಲ ನಿಲ್ದಾಣಗಳಲ್ಲಿ ಅನುಷ್ಠಾನಕ್ಕೆ ತೆರಬೇಕು.
* ಷರತ್ತುಗಳ ಪಾಲನೆ/ತೆರವಿನ ಬಳಿಕವೇ ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರ ನಡೆಸಬೇಕು. ಇವು ಸೇರಿದಂತೆ ಒಟ್ಟು 60 ಷರತ್ತಗಳನ್ನು ಸಿಎಂಆರ್‌ಎಸ್ ವಿಧಿಸಿದೆ.
'ನಮ್ಮ ಮೆಟ್ರೋ' ಅಧಿಕಾರಿಗಳು ಈಗಾಗಲೇ ಹಲವು ನಿರ್ದೇಶನಗಳನ್ನು ಕೈಗೊಳ್ಳಲು ಯೋಜಿಸಿರುವುದರಿಂದ ಹೆಚ್ಚಿನ ವಿಳಂಬವಿಲ್ಲದೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಬಗ್ಗೆ ಸಿಎಂಆರ್‌ಎಸ್ ವಿಶ್ವಾಸ ವ್ಯಕ್ತಪಡಿಸಿದೆ. ಫೆಬ್ರವರಿ 22 ಮತ್ತು 24 ರವರೆಗೆ CMRS ಕಮಿಷನರ್ ಅಭಯ್ ಕುಮಾರ್ ಈ ರೈಲು ಮಾರ್ಗವನ್ನು ಪರಿಶೀಲಿಸಿದರು. ಈ ಹಿನ್ನೆಲೆಯಲ್ಲಿ 12 ನಿಲ್ದಾಣ ಹೊಂದಿರುವ ಈ ವೈಟ್‌ಫಿಲ್ಡ್ - ಕೆ.ಆರ್ ಪುರಂ ಮಾರ್ಗ ಇನ್ನೊಂದು ವಾರದಲ್ಲಿ ಉದ್ಘಾಟನೆಗೊಳ್ಳುವ ನಿರೀಕ್ಷೆಇದೆ.












Click it and Unblock the Notifications