Namma Metro; ಮತ್ತೊಂದು ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭ

ಬೆಂಗಳೂರು, ಜುಲೈ 26; ಉದ್ಯಾನ ನಗರಿ ಬೆಂಗಳೂರಿನ ಜನರಿಗೆ ಸಿಹಿಸುದ್ದಿ. ನಗರದ ನೇರಳೆ ಮಾರ್ಗದವೊಂದರಲ್ಲಿ ನಮ್ಮ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಬುಧವಾರ ಸಂಜೆ ಚಾಲನೆ ಸಿಕ್ಕಿದೆ. ಇದರಿಂದಾಗಿ ವೈಟ್‌ಫೀಲ್ಡ್‌-ಕೆ. ಆರ್. ಪುರ ಮಾರ್ಗದ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಬುಧವಾರ ಸಂಜೆ ಕೆ. ಆರ್. ಪುರ-ಬೈಯಪ್ಪನಹಳ್ಳಿ ನಡುವೆ ನಮ್ಮ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ಆಗಸ್ಟ್‌ ತಿಂಗಳಿನಲ್ಲಿ ಈ ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ. ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ವೈಟ್‌ಫೀಲ್ಡ್‌ ನಮ್ಮ ಮೆಟ್ರೋ ರೈಲು ಮಾರ್ಗವನ್ನು ಲೋಕಾರ್ಪಣೆ ಮಾಡಿದ್ದರು.

namma-metro-train-run-begins

ನಮ್ಮ ಮೆಟ್ರೋ ಟ್ವೀಟ್‌ ಮೂಲಕ ಈ ಕುರಿತು ಮಾಹಿತಿ ನೀಡಿದೆ. ರೈಲಿನ ಪ್ರಾಯೋಗಿಕ ಸಂಚಾರದ ವಿಡಿಯೋ ಕೂಡಾ ಪೋಸ್ಟ್ ಮಾಡಿದೆ. 'ಇಂದು ಮೊದಲನೇ ರೈಲು ಪ್ರಾಯೋಗಿಕ ಸಂಚಾರವು ಕೆ. ಆರ್. ಪುರ ಮತ್ತು ಬೈಯಪ್ಪನಹಳ್ಳಿ ನಡುವೆ ನಿಧಾನಗತಿಯಲ್ಲಿ ಸಂಜೆ 6.04 ಗಂಟೆಗೆ ಪ್ರಾರಂಭವಾಗಿ ಮತ್ತೆ ಮರಳಿ ಕೆ. ಆರ್. ಪುರ ನಿಲ್ದಾಣಕ್ಕೆ ತಲುಪಿತು' ಎಂದು ಟ್ವೀಟ್ ಮಾಡಿದೆ.

ವೈಟ್‌ಫೀಲ್ಡ್‌ ಮಾರ್ಗ ಉದ್ಘಾಟನೆಗೊಂಡು ರೈಲು ಸಂಚಾರ ಆರಂಭವಾದರೂ ಸಹ ಕೆ. ಆರ್. ಪುರ-ಬೈಯಪ್ಪನಹಳ್ಳಿ ನಡುವೆ ನಮ್ಮ ಮೆಟ್ರೋ ರೈಲು ಸಂಚಾರ ನಡೆಸುತ್ತಿರಲಿಲ್ಲ. ಸುಮಾರು 2 ಕಿ. ಮೀ. ಮಾರ್ಗದ ಕಾಮಗಾರಿ ಈಗ ಪೂರ್ಣಗೊಂಡು ಪ್ರಾಯೋಗಿಕ ಸಂಚಾರ ಆರಂಭವಾಗಿದೆ.

ವಾಣಿಜ್ಯ ಸಂಚಾರಕ್ಕೆ ಮುಕ್ತ; ಪ್ರಾಯೋಗಿಕ ಸಂಚಾರದ ಸಮಯದಲ್ಲಿ ಕೆ. ಆರ್. ಪುರ ಮತ್ತು ಬೈಯಪ್ಪನಹಳ್ಳಿ ನಡುವೆ ಬುಧವಾರ ಸಂಜೆ ಗಂಟೆಗೆ ಸುಮಾರು 15 ಕಿ. ಮೀ. ವೇಗದಲ್ಲಿ ಮೆಟ್ರೋ ರೈಲು ಸಾಗಿದೆ. ಪ್ರಾಯೋಗಿಕ ಸಂಚಾರ ಪೂರ್ಣಗೊಂಡು, ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿದ ಬಳಿಕ ವಾಣಿಜ್ಯ ಸಂಚಾರ ಆರಂಭವಾಗಲಿದೆ.

ವೈಟ್‌ಫೀಲ್ಡ್‌-ಕೆ. ಆರ್. ಪುರ ಮಾರ್ಗದಲ್ಲಿ ಕೆ. ಆರ್. ಪುರ ಮತ್ತು ಬೈಯಪ್ಪನಹಳ್ಳಿ ನಡುವೆ ಮೆಟ್ರೋ ಸಂಚಾರ ನಡೆಸದ ಕಾರಣ ಜನರು ಬೈಯಪ್ಪನಹಳ್ಳಿಯಲ್ಲಿ ಮೆಟ್ರೋ ಇಳಿದು, ಎರಡು ಕಿ. ಮೀ. ಬಸ್‌ನಲ್ಲಿ ಸಾಗಿ ಮತ್ತೆ ಮೆಟ್ರೋ ಹತ್ತಬೇಕು.

ಬೈಯಪ್ಪನಹಳ್ಳಿ-ಕೆ. ಆರ್. ಪುರ ನಡುವೆ ನಡೆಯತ್ತಿದ್ದ ಸಿವಿಲ್‌ ಕಾಮಗಾರಿ ಪೂರ್ಣಗೊಂಡು, ಟ್ರಾಕ್, ಸಿಗ್ನಲ್ ಸೇರಿದಂತೆ ಕೆಲವು ತಾಂತ್ರಿಕ ಕೆಲಸಗಳು ಪೂರ್ಣಗೊಂಡ ಬಳಿಕ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ವಾಣಿಜ್ಯ ಸಂಚಾರ ಆರಂಭವಾದ ಬಳಿಕ ನೇರವಾಗಿ ಮೆಟ್ರೋದಲ್ಲಿ ಸಂಚಾರ ನಡೆಸಬಹುದಾಗಿದೆ.

ನೇರ ರೈಲು ಮಾರ್ಗದಲ್ಲಿ ಸಂಚಾರ ಆರಂಭಗೊಂಡರೆ ಪ್ರತಿನಿತ್ಯ ಸುಮಾರು 1 ಲಕ್ಷ ಜನರು ಈ ಮಾರ್ಗದಲ್ಲಿ ಸಂಚಾರ ನಡೆಸಲಿದ್ದಾರೆ ಎಂದು ಬಿಎಂಆರ್‌ಸಿಎಲ್ ಅಂದಾಜಿಸಿದೆ. ನೇರ ಮೆಟ್ರೋ ಸಂಚಾರ ಆರಂಭವಾದರೆ ಹೊರ ವರ್ತುಲ ರಸ್ತೆಗಳಲ್ಲಿ ವಾಹನಗಳ ಸಂದಣಿ ಕಡಿಮೆಯಾಗುವ ನಿರೀಕ್ಷೆ ಇದೆ.

ಬಿಎಂಆರ್‌ಸಿಎಲ್ 2022ರಲ್ಲಿಯೇ ವೈಟ್‌ಫೀಲ್ಡ್‌-ಕೆ. ಆರ್. ಪುರ ಮಾರ್ಗವನ್ನು 2 ಹಂತದಲ್ಲಿ ಲೋಕಾರ್ಪಣೆ ಮಾಡಲು ತೀರ್ಮಾನಿಸಿತ್ತು. ಮೊದಲ ಹಂತದಲ್ಲಿ ವೈಟ್‌ಫೀಲ್ಡ್‌ ಕೆ. ಆರ್. ಪುರ ಮತ್ತು ಎರಡನೇ ಹಂತದಲ್ಲಿ ಕೆ. ಆರ್. ಪುರ-ಬೈಯಪ್ಪನಹಳ್ಳಿ ಮಾರ್ಗವನ್ನು ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸಲು ನಿರ್ಧರಿಸಿತ್ತು.

ವೈಟ್‌ಫೀಲ್ಡ್‌-ಕೆ. ಆರ್. ಪುರ ಬಿಎಂಆರ್‌ಸಿಎಲ್‌ನ ನೇರಲೆ ಮಾರ್ಗದ ವಿಸ್ತರಿತ ಯೋಜನೆ. ಈಗ ಪ್ರಾಯೋಗಿಕ ಸಂಚಾರ ಆರಂಭವಾಗಿರುವ 2 ಕಿ. ಮೀ. ಮಾರ್ಗದಲ್ಲಿ ಮೂರು ನಿಲ್ದಾಣಗಳಿವೆ. ಮೆಟ್ರೋ ರೈಲು ಸಂಚಾರ ಆರಂಭವಾದರೆ ಈಗ ಬಸ್‌ನಲ್ಲಿ ಹೋಗುವುದಕ್ಕಿಂತ ಅರ್ಧ ತಾಸು ಸಮಯ ಉಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+