ಆಗಸ್ಟ್ 31ರವರೆಗೂ ಕಲಾಸಿಪಾಳ್ಯ, ಕೆಆರ್ ಮಾರ್ಕೆಟ್ ಸೀಲ್ ಡೌನ್

ಬೆಂಗಳೂರು, ಜುಲೈ 31: ರಾಜ್ಯದಲ್ಲಿ ಹಾಗೂ ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಪ್ರಕರಣಗಳ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಕೆಲವು ಪ್ರದೇಶಗಳಲ್ಲಿ ಸೀಲ್‌ಡೌನ್ ಮುಂದುವರಿಸಲು ಬಿಬಿಎಂಪಿ ನಿರ್ಧರಿಸಿದೆ.

ಪ್ರಮುಖವಾಗಿ ಅತ್ಯಂತ ಜನನಿಬಿಡ ಪ್ರದೇಶವಾದ ಕೆಆರ್ ಮಾರುಕಟ್ಟೆ ಮತ್ತು ಕಲಾಸಿಪಾಳ್ಯದಲ್ಲಿ ಆಗಸ್ಟ್ 31ರವರೆಗೂ ಸೀಲ್ ಡೌನ್ ಮುಂದುವರಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದ್ದಾರೆ.

KR Market and kalasipalya will continue to be closed till August 31, 2020

'ಕೊರೊನಾ ಸೋಂಕು ಹರಡುತ್ತಿರುವುದರಿಂದ, KR ಮಾರ್ಕೆಟ್ & ಕಲಾಸಿ ಪಾಳ್ಯ ಮಾರ್ಕೆಟ್ ನಲ್ಲಿ ಇಂದಿಗೆ ಕೊನೆಯಾಗುತ್ತಿರುವ ಸೀಲ್ ಡೌನ್ ಅವಧಿಯನ್ನು ದಿನಾಂಕ: 31-08-2020 ವರೆಗೆ ಮುಂದುವರೆಸಲಾಗಿದೆ. ‌ಸುರಕ್ಷತೆಯ ಆದ್ಯತೆಗೆ ಈ‌ ನಿರ್ಧಾರ ಕೈಗೊಳ್ಳಲಾಗಿದೆ' ಎಂದು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಬಿಬಿಎಂಪಿ ಘೋಷಿಸಿದಂತೆ ಜುಲೈ 31ಕ್ಕೆ ಸೀಲ್‌ಡೌನ್ ಅವಧಿ ಮುಕ್ತಾಯವಾಗುತ್ತಿತ್ತು. ಆದರೆ, ಸೋಂಕಿನ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವ ಪರಿಣಾಮ ಇನ್ನಷ್ಟು ದಿನಗಳ ಕಾಲ ಈ ಮಾರುಕಟ್ಟೆಗಳನ್ನು ಬಂದ್ ಮಾಡುವುದು ಉತ್ತಮ ಎಂಬ ನಿರ್ಧಾರಕ್ಕೆ ಮಹಾನಗರ ಪಾಲಿಕೆ ಬಂದಿದೆ.

ಜುಲೈ 30ರ ವರದಿಯಂತೆ ಬೆಂಗಳೂರಿನಲ್ಲಿ ಒಟ್ಟು 53324 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅದರಲ್ಲಿ 15,791 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದು, 36,523 ಕೇಸ್‌ ಸಕ್ರಿಯವಾಗಿದೆ. ಇದುವರೆಗೂ 1,009 ಜನರು ಬೆಂಗಳೂರಿನಲ್ಲಿ ಕೊರೊನಾದಿಂದ ಮೃತಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+