ಕೆಪಿಎಸ್‌ಸಿ ಕಚೇರಿ ಮಹಿಳಾ ಉದ್ಯೋಗಿಗೆ ಚಾಕು ಇರಿತ, ಆಸ್ಪತ್ರೆಗೆ ದಾಖಲು
ಬೆಂಗಳೂರು, ನವೆಂಬರ್ 5: ಕೆಪಿಎಸ್ ಸಿ ಕಚೇರಿಯಲ್ಲಿ ಮಹಿಳಾ ಉದ್ಯೋಗಿ ಮೇಲೆ ಚಾಕು ಇರಿದಿರುವ ಘಟನೆ ಸೋಮವಾರ ನಡೆದಿದೆ.
ಕೆಪಿಎಸ್‌ಸಿ ಸೀನಿಯರ್ ಅಸಿಸ್ಟೆಂಟ್ ಜಯಲಕ್ಷ್ಮೀಮೇಲೆ ಚಾಕುವಿನಿಂದ ಇರಿಯಲಾಗಿದೆ, ಅಹೋದ್ಯೋಗಿ ನಟರಾಜ್ ಆಕೆಯನ್ನು ಕೊಲೆ ಮಾಡಲು ಯತ್ನಿಸಿದ್ದ ಎನ್ನಲಾಗಿದೆ. ನಟರಾಜ್ ಕೂಡ ಕೆಪಿಎಸ್‌ಸಿ ಉದ್ಯೋಗಿಯಾಗಿದ್ದಾನೆ. ನಟರಾಜ್ ಮತ್ತು ಜಯಲಕ್ಷ್ಮೀಇಬ್ಬರು ಸೀನಿಯರ್ ಅಸಿಸ್ಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಕೆಪಿಎಸ್‌ಸಿ ಕಚೇರಿ ವಿಧಾನ ಸೌಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದೆ. ನಟರಾಜ್ ಅವರನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ, ಗಾಯಾಳು ಜಯಲಕ್ಷ್ಮೀಯನ್ನು ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ, ಪೊಲೀಸರು ನಟರಾಜ್‌ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.












Click it and Unblock the Notifications