• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆರ್.ಆರ್. ನಗರ ಚುನಾವಣೆಯ ಮೂಲಕ ಜೆಡಿಎಸ್ ಸಮಾಧಿ ಮಾಡಲು ಹೊರಟ್ರಾ ಡಿಕೆಶಿ!

|

ಬೆಂಗಳೂರು, ಅ 15: ರಾಜರಾಜೇಶ್ವರಿ ನಗರ ಅಸೆಂಬ್ಲಿ ಉಪಚುನಾವಣೆಯ ವೇಳೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಒಂದು ದಿನದ ಹಿಂದೆಯಷ್ಟೇ, 'ಕೆಲವರು ನನಗೆ ಸ್ಲೋ ಪಾಯ್ಸನ್ ಕೊಡುತ್ತಿದ್ದಾರೆ'ಎನ್ನುವ ಹೇಳಿಕೆಯನ್ನು ನೀಡಿದ್ದ ಕುಮಾರಸ್ವಾಮಿ, 'ಕೆಪಿಸಿಸಿ ಅಧ್ಯಕ್ಷರು ನನ್ನ ಪಕ್ಷವನ್ನು ಫಿನಿಷ್ ಮಾಡುತ್ತೇನೆ ಎನ್ನುವ ಮಾತನ್ನಾಡಿದ್ದಾರೆ'ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.

ರಾಜೀನಾಮೆ ನೀಡಲು ಮುಂದಾಗಿದ್ದ ಶ್ರೀರಾಮುಲು ಸದ್ಯಕ್ಕೆ ಶಾಂತ: ಇದಕ್ಕೆ ಒಂದೇ ಒಂದು ಕಾರಣ

ನಗರದ ತಮ್ಮ ಜೆ.ಪಿ.ನಗರ ನಿವಾಸದಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, "ಒಂದು ಸಮುದಾಯಕ್ಕೆ ತಾವೇ ದೊಡ್ದ ನಾಯಕರು, ಎಲ್ಲರನ್ನೂ ನಾನೇ ಉದ್ದಾರ ಮಾಡುತ್ತೇನೆ ಎನ್ನುವ ಭ್ರಮೆ ಕೆಲವರಿಗಿದೆ"ಎಂದು ಪರೋಕ್ಷವಾಗಿ ಡಿಕೆಶಿ ಹೆಸರನ್ನು ಪ್ರಸ್ತಾವಿಸದೇ ಎಚ್ಡಿಕೆ ಹೇಳಿದರು.

'ಉಪಚುನಾವಣೆಯ ಸಂದರ್ಭದಲ್ಲಿ ಸ್ಥಳೀಯ ಮುಖಂಡರನ್ನು ತಮ್ಮ ಪಕ್ಷಕ್ಕೆ ಸೆಳೆಯುವ ಕೆಲಸವನ್ನು ಎಲ್ಲಾ ಪಕ್ಷದವರು ಮಾಡುತ್ತಾರೆ, ಇದಕ್ಕೆ ನನ್ನ ಅಭ್ಯಂತರವಿಲ್ಲ. ಅವರು ಕರೆದ ಕೂಡಲೇ ನಮ್ಮ ಪಕ್ಷದ ಮುಖಂಡರು ಹೋಗಬೇಕೆಂದೇನೂ ಇಲ್ಲ'ಎಂದು ಕುಮಾರಸ್ವಾಮಿ ಹೇಳಿದರು.

ಆರ್.ಆರ್.ನಗರ ಚುನಾವಣೆ: ಗೆದ್ದರೆ ಒಂದು, ಸೋತರೆ ಇನ್ನೊಂದು: ಉಭಯ ಸಂಕಟದಲ್ಲಿ ಸಿಎಂ ಬಿಎಸ್ವೈ

ರಾಜರಾಜೇಶ್ವರಿ ನಗರ ಚುನಾವಣೆಯ ಮುಖಾಂತರ ಜೆಡಿಎಸ್ ಪಕ್ಷದ ಸಮಾಧಿ

ರಾಜರಾಜೇಶ್ವರಿ ನಗರ ಚುನಾವಣೆಯ ಮುಖಾಂತರ ಜೆಡಿಎಸ್ ಪಕ್ಷದ ಸಮಾಧಿ

"ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ನನ್ನ ಪಕ್ಷದ ಹಲವಾರು ಮುಖಂಡರ ಮನೆಗೆ ಬುಧವಾರ ರಾತ್ರಿ ಹೋಗಿದ್ದಾರೆ. ಇವರ ಈ ಪ್ರಯತ್ನ ಯಶಸ್ವಿಯಾಗುವುದಿಲ್ಲ. ಅವರು ನಮ್ಮ ಪಕ್ಷದ ಮುಖಂಡರ ಜೊತೆ ಏನು ಮಾತನಾಡಿದ್ದಾರೆ ಎನ್ನುವುದರ ಅರಿವು ನನಗಿದೆ. ರಾಜರಾಜೇಶ್ವರಿ ನಗರ ಚುನಾವಣೆಯ ಮುಖಾಂತರ ಜೆಡಿಎಸ್ ಪಕ್ಷದ ಸಮಾಧಿ ಮಾಡುತ್ತೇನೆ ಎನ್ನುವ ಪದವನ್ನು ಡಿಕೆಶಿ ಬಳಸಿದ್ದಾರೆ"ಎನ್ನುವ ಆರೋಪವನ್ನು ಕುಮಾರಸ್ವಾಮಿ ಮಾಡಿದರು.

ಸಿದ್ದರಾಮಯ್ಯನವರು ಈಗಾಗಲೇ ಜೆಡಿಎಸ್ ಪಕ್ಷವನ್ನು ಸಮಾಧಿ ಮಾಡಿದ್ದಾಗಿದೆ

ಸಿದ್ದರಾಮಯ್ಯನವರು ಈಗಾಗಲೇ ಜೆಡಿಎಸ್ ಪಕ್ಷವನ್ನು ಸಮಾಧಿ ಮಾಡಿದ್ದಾಗಿದೆ

"ಸಿದ್ದರಾಮಯ್ಯನವರು ಈಗಾಗಲೇ ಜೆಡಿಎಸ್ ಪಕ್ಷವನ್ನು ಸಮಾಧಿ ಮಾಡಿದ್ದಾಗಿದೆ. ಈಗ ಅವರ ಜೊತೆ ಇವರೂ (ಡಿಕೆಶಿ) ಕೈಜೋಡಿಸಿದ್ದಾರೆ. ನಮ್ಮ ಇದುವರೆಗಿನ ರಾಜಕೀಯದಲ್ಲಿ, ಕಾಂಗ್ರೆಸ್ ಅಧ್ಯಕ್ಷರ ವಿರುದ್ದವೇ ಹೋರಾಟ ನಡೆಸಿಕೊಂಡು ಬಂದವರು. ಪಕ್ಷದ ಮುಖಂಡರಾದ ಕೂಡಲೇ ಒಂದು ಸಮುದಾಯವನ್ನು ಜೊತೆಗೆ ಕರೆದುಕೊಂಡು ಹೋಗುತ್ತೇನೆ ಎನ್ನುವ ಭ್ರಮೆ ಸರಿಯಲ್ಲ" - ಕುಮಾರಸ್ವಾಮಿ.

ಜೆಡಿಎಸ್ ಸಮಾಧಿ ಮಾಡಲು ಹೊರಟರಾ ಡಿಕೆಶಿ

ಜೆಡಿಎಸ್ ಸಮಾಧಿ ಮಾಡಲು ಹೊರಟರಾ ಡಿಕೆಶಿ

ಡಿ.ಕೆ.ಶಿವಕುಮಾರ್ ಅವರ ಕೊಡುಗೆ ಈ ಸಮಾಜಕ್ಕೆ ಏನು ಎನ್ನುವುದು ಎಲ್ಲರಿಗೂ ಗೊತ್ತಿದೆ. ಎಷ್ಟು ಬಡವರ ಕಷ್ಟಸುಖಕ್ಕೆ ಅವರು ಆಗಿದ್ದಾರೆ ಎನ್ನುವುದು ತಿಳಿದಿದೆ. ಕಾಂಗ್ರೆಸ್ ಅಧ್ಯಕ್ಷರಾದರು ಎಂದ ಕೂಡಲೇ ಕಿಂದರಜೋಗಿ ರೀತಿಯಲ್ಲಿ ಅವರ ಹಿಂದೆ ಹೋಗಲು, ಸಮಾಜಕ್ಕೆ ಅವರ ಕಾಣಿಕೆ ಏನು"ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಕೆಲವರು ನನಗೆ ಸ್ಲೋ ಪಾಯ್ಸನ್ ಕೊಡ್ತಿದ್ದಾರೆ

ಕೆಲವರು ನನಗೆ ಸ್ಲೋ ಪಾಯ್ಸನ್ ಕೊಡ್ತಿದ್ದಾರೆ

"ಕೆಲವರು ನನಗೆ ಸ್ಲೋ ಪಾಯ್ಸನ್ ಕೊಡ್ತಿದ್ದಾರೆ, ಏನೋ ನಮ್ಮಿಂದಲೇ ಕುಮಾರಸ್ವಾಮಿಗೆ ರಕ್ಷಣೆ ಸಿಕ್ಕಿತು, ಅವರ ಸರ್ಕಾರ ಉಳಿಯಲು ನಾವೇ ಕಾರಣ ಅನ್ನುವ ರೀತಿಯಲ್ಲಿ ಪ್ರಚಾರ ತೆಗೆದುಕೊಂಡರು'' ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಕುಮಾರಸ್ವಾಮಿ, ರಾಮನಗರದಲ್ಲಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು.

English summary
KPCC President DK Shivakumar Trying To Poach Our Leaders In RR Nagar, HD Kumaraswamy Statement,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X