ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ಮಾರ್ಗಸೂಚಿ ಅಲ್ಟ್ರಾ ಡರ್ಬಿ ರೇಸ್‌ಗೆ ಅನ್ವಯಿಸುವುದಿಲ್ಲವೇ?; ಡಿಕೆಶಿ

|
Google Oneindia Kannada News

ಬೆಂಗಳೂರು, ಜನವರಿ 27: ಬೆಂಗಳೂರು ರೇಸ್‌ಕೋರ್ಸ್‌ನಲ್ಲಿ ನಡೆಯುತ್ತಿರುವ ಈ ಡರ್ಬಿಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದಾರೆ. ಮಾಸ್ಕ್ ಧರಿಸಿಲ್ಲ, ಸಾಮಾಜಿಕ ಅಂತರ ಇಲ್ಲ. ಸರ್ಕಾರಕ್ಕೆ ಆದಾಯ ಬರುವ ಮೂಲಗಳಿಗೆ ಯಾವುದೇ ಕೋವಿಡ್ ರೂಲ್ಸ್ ಅನ್ವಯವಾಗುವುದಿಲ್ಲವೇ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

ಈ ಕುರಿತು ಕೂ ಮಾಡಿರುವ ಅವರು, ಕೋವಿಡ್ ಮಾರ್ಗಸೂಚಿಗಳ ಅನ್ವಯ ಮದುವೆ ಹಾಗೂ ಮೊದಲಾದ ಕಾರ್ಯಕ್ರಮಗಳಲ್ಲಿ 500 ಮಂದಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಪ್ರತಿಭಟನೆ, ಧರಣಿಗಳಿಗೆ ಅವಕಾಶ ಇಲ್ಲ. ಹೋಟೆಲ್‌ ಮೊದಲಾದ ಕಡೆ 50:50 ನಿಯಮ ಹೇರಲಾಗಿದೆ. ಆದರೆ, ಬುಧವಾರ ಗಣರಾಜ್ಯೋತ್ಸವದಂದು ಆರಂಭವಾದ 'ಅಲ್ಟ್ರಾ ಡರ್ಬಿ ಬೆಂಗಳೂರು' ರೇಸ್‌ಗೆ ಯಾವುದೇ ಕೋವಿಡ್ ನಿಯಮಗಳು ಅನ್ವಯವಾಗುವುದಿಲ್ಲವೇ? ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ನಾಡಿನ ಕುಡಿಯುವ ನೀರಿನ ಬವಣೆ ನೀಗಿಸಲು ಕಾಂಗ್ರೆಸ್‌ ಪಕ್ಷ ಕೈಗೊಂಡ ಮೇಕೆದಾಟು ಯೋಜನೆ ಪಾದಯಾತ್ರೆಗೆ ಬಿಜೆಪಿ ಪಕ್ಷ ಹಾಗೂ ಸರ್ಕಾರ ಏನೆಲ್ಲಾ ಕಳಂಕ ಹಚ್ಚಿತು. ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಆರೋಪದ ಮೇಲೆ ನನ್ನನ್ನೂ ಸೇರಿದಂತೆ ಕಾಂಗ್ರೆಸ್‌ ನಾಯಕರ ಮೇಲೆ ಪ್ರಕರಣ ದಾಖಲಾಗಿದೆ. ಕೋವಿಡ್ ಬಿಕ್ಕಟ್ಟಿನ ಮಧ್ಯೆಯೂ ಕುದುರೆ ರೇಸ್‌ ನಡೆಸಲು ಸರ್ಕಾರ ಅನುಮತಿ ನೀಡಿದ್ದು ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ.

KPCC President DK Shivakumar Reaction On Ultra Derby Race In Bengaluru Turf Club

ದಿ ಕಿಂಗ್‌ಫಿಷರ್ ಅಲ್ಟ್ರಾ ಡರ್ಬಿ ರೇಸ್
ಬೆಂಗಳೂರು ನಗರದಲ್ಲಿ ಚಳಿಗಾಲದ ರೇಸ್ "ದಿ ಕಿಂಗ್‌ಫಿಷರ್ ಅಲ್ಟ್ರಾ ಡರ್ಬಿ ಬೆಂಗಳೂರು' ಬುಧವಾರ ಗಣರಾಜ್ಯೋತ್ಸವದ ದಿನ ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ನಡೆಯಿತು.

ಯುನೈಟೆಡ್ ಬ್ರಿವರೀಸ್ ಡರ್ಬಿಯನ್ನು ಪ್ರಾಯೋಜಿಸುತ್ತಿದ್ದು, ಬೆಂಗಳೂರು ಟರ್ಫ್ ಕ್ಲಬ್ ಜೊತೆಗೂಡಿ ನಡೆಸುತ್ತಿರುವ ರೇಸ್‌ನ ಒಟ್ಟು ಮೊತ್ತ ಒಂದು ಕೋಟಿ ಮೂವತ್ತೊಂಬತ್ತು ಲಕ್ಷದ ಮೂವತ್ತೈದು ಸಾವಿರ (1.39 ಕೋಟಿ) ರೂಪಾಯಿ ಆಗಿದೆ.

Recommended Video

1921 ರಲ್ಲಿ Subhash Chandra Bose ಬರೆದ ರಾಜೀನಾಮೆ ಪತ್ರ ಸಿಕ್ಕಿದ್ದು ಹೇಗೆ? | Oneindia Kannada

ಇದುವರೆಗಿನ ರೇಸ್‌ಗಳಲ್ಲಿ ಇದು ದಾಖಲೆಯ ಮೊತ್ತವಾಗಿದ್ದು, ಇದರಲ್ಲಿ ಗೆಲ್ಲುವ ಕುದುರೆಯು ತನ್ನ ಮಾಲೀಕನಿಗೆ ಸುಮಾರು ಲಕ್ಷ ಮೌಲ್ಯದ ಟ್ರೋಪಿಯೊಂದಿಗೆ 68.28 ಲಕ್ಷ ರೂ. ಗೆದ್ದುಕೊಡಲಿದೆ.

ಕಿಂಗ್ಸ್‌ಟನ್ ಕೋರ್ಟ್ ಮತ್ತು ಸಿಟಾರೆ ಕಣದಿಂದ ಹಿಂದೆ ಸರಿದ ಕಾರಣ ಏಳು ಕುದುರೆಗಳು ಮಾತ್ರ ಕಣದಲ್ಲಿ ಉಳಿದಿವೆ. ಇವುಗಳಲ್ಲಿ ಐದು ಗಂಡು ಮತ್ತು ಎರಡು ಹೆಣ್ಣು ಕುದುರೆಗಳಿದ್ದವು.

English summary
Does the Covid-19 Rules apply in the Ultra Derby Race In Bengaluru Turf Club? KPCC President DK Shivakumar questioned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X