ಕೋರಮಂಗಲ ನಿವಾಸಿಗಳಿಗೆ ಮತ್ತೆ ದುಸ್ವಪ್ನವಾದ ಮಳೆ ನೀರು

ಬೆಂಗಳೂರು, ಆಗಸ್ಟ್ 30: ಕಳೆದ ವರ್ಷದ ಭಾರಿ ಮಳೆಗೆ ನಡುಗಡ್ಡೆಯಂತಾಗಿದ್ದ ಬೆಂಗಳೂರಿನ ಕೋರಮಂಗಲ ಪ್ರದೇಶ ಕಳೆದ ಮೂರು ದಿನಗಳಿಂದ ಸುರಿದ ಮಳೆಗೆ ಮತ್ತೊಮ್ಮೆ ಕಳೆದ ವರ್ಷದಂತೆಯೇ ಪ್ರವಾಹ್ಕಕೆ ತುತ್ತಾಗುವ ಆತಂಕಕ್ಕೆ ಸಿಲುಕಿದೆ.

ಕೋರಮಂಗಲ ಪ್ರದೇಶದ ರಸ್ತೆಗಳು ಚರಂಡಿಗಳು, ಹಾಗೂ ಒಳಚರಂಡಿಗಳು, ಕಸ ಹಾಗೂ ತ್ಯಾಜ್ಯದಿಂದ ತುಂಬಿ ಹೋಗಿದ್ದು ಮಳೆ ನೀರು ಹರಿದುಹೋಗದೆ ಇಡೀ ಪ್ರದೇಶ ಜಲಾವೃತಗೊಳ್ಳುವಂತಾಗಿದೆ.

ಕೋರಮಂಗಲದ ಮಹಾರಾಜ ಸಿಗ್ನಲ್ ಬಳಿ ಇತ್ತೀಚೆಗೆ ಮಳೆ ನೀರು ಹರಿದು ಹೋಗಲು ಗೋಡೆಯೊಂದನ್ನು ತೆರವುಗೊಳಿಸಲಾಗಿದೆಯಾದರೂ ಇದರಿಂದಾಗಿ ಸ್ಥಳೀಯ ನಿವಾಸಿಗಳು ಮತ್ತಷ್ಟು ಸಮಸ್ಯೆಯನ್ನು ಎದುರಿಸುವಂತಾಗಿದೆ.

Koramangala residents fed up with rain water logging again

ಅಲ್ಲದೆ ಮಹಾರಾಜ ಸಿಗ್ನಲ್‌ನಲ್ಲಿ ಗೋಡೆ ತೆರವಿನಿಂದಾಗಿ ವಿಪರೀತ ಟ್ರಾಫಿಕ್ ಜಾಮ್ ನಿಂದಾಗಿ ದ್ವಿಚಕ್ರ ವಾಹನ ಚಾಲಕರು, ಕಾರು ಚಾಲಕರು ಪರದಾಡುವಂತಾಗಿದೆ.

ಕೋರಮಂಗಲ ನಿವಾಸಿಗಳು ಶಾಶ್ವತ ಪರಿಹಾರಕ್ಕೆ ಒತ್ತಾಯಿಸುತ್ತಿದ್ದರೂ ಬಿಬಿಎಂಪಿ ಸೇರಿದಂತೆ ಯಾವುದೇ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ, ಪ್ಲಾಸ್ಟಿಕ್ ಬಾಟಲಿಗಳು ಸೇರಿದಂತೆ ಘನತ್ಯಾಜ್ಯದಿಂದ ಈ ಪ್ರದೇಶ ತುಂಬಿ ಹೋಗಿದ್ದು ಲೋಡ್ ಗಟ್ಟಲೆ ತ್ಯಾಜ್ಯವನ್ನು ಸಾಗಿಸಿದರೂ ಸಮಸ್ಯೆ ಪರಿಹಾರ ಆಗುವಂತೆ ಕಾಣುತ್ತಿಲ್ಲ.

ನಮ್ಮ ಸಮಸ್ಯೆಯನ್ನು ಸ್ಥಳೀಯ ಜನಪ್ರತಿನಿಧಿಗಳಿಗೆ ಹೇಳಿಕೊಂಡು ಬೇರೆಡೆ ಸಾಗಿಸುವಂತೆ ಹಲವಾರು ಬಾರಿ ಮನವಿ ಮಾಡಿದ್ದೇವೆ. ಕಳೆದ ಮೂರ್ನಾಲ್ಕು ದಿನಗಳಿಂದ ಕೇವಲ ಆರುನೂರು ಮೀಟರ್ ರಸ್ತೆಯನ್ನು ಸ್ವಚ್ಛಗೊಳಿಸಲು ಇಪ್ಪತ್ತು ನಿಮಿಷಗಳ ಕಾಲ ಮಾತ್ರ ಬಿಬಿಎಂಪಿ ಕಾರ್ಮಿಕರು ಕೆಲಸ ಮಾಡಿದಂತೆ ನಟಿಸಿದರಾದರೂ ಚರಂಡಿಗಳು ಸ್ವಚ್ಛಗೊಳ್ಳದೆ ಮತ್ತೆ ಎಂದಿನಂತೆ ನೀರು ನಿಲ್ಲುವಂತ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

ಕೋರಮಂಗಲ ಪ್ರದೇಶದಲ್ಲಿ ಚರಂಡಿ ನೀರು ರಸ್ತೆಗಳಿಗೆ ನುಗ್ಗಿ ಸಂಪೂರ್ಣ ಜಲಾವೃತಗೊಂಡು ಬಳಿಕ ಮನೆಗಳಿಗೆ ನುಗ್ಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ದುರವಸ್ಥೆಯನ್ನು ಅಧಿಕಾರಿಗಳು ಕಣ್ಣಾರೆ ಕಂಡರೂ ಏನೂ ಮಾಡುತ್ತಿಲ್ಲ. ಅಲ್ಲದೆ ಈ ಪ್ರದೇಶದಲ್ಲಿ ಟ್ರಾಫಿಕ್ ಸಮಸ್ಯೆ ಹಾಗೂ ನೀರು ನಿಲ್ಲುವ ಸಮಸ್ಯೆಯನ್ನು ದೂರಮಾಡಲು ಸಾಧ್ಯವಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+