ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮಬೆಂಗಳೂರು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 24: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರತ್ಯೇಕ ಲಾಂಛನ ಪಡೆದುಕೊಂಡ ಮೊದಲ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ. ಇದರ ಬೆನ್ನಲ್ಲೇ #nammabengaluru ಹ್ಯಾಶ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.

ಸಕಲ ಸಮಸ್ಯೆಗಳ ಪರಿಹಾರಕ್ಕೆ ಬಳಸಿ ಬಿಬಿಎಂಪಿ ಆಪ್ಸಕಲ ಸಮಸ್ಯೆಗಳ ಪರಿಹಾರಕ್ಕೆ ಬಳಸಿ ಬಿಬಿಎಂಪಿ ಆಪ್

ಪ್ರವಾಸೋದ್ಯಮ ಇಲಾಖೆಯು ಬ್ರ್ಯಾಂಡ್ ಬೆಂಗಳೂರಿಗೊಂದು ಹೊಸ ಲಾಂಛನ ಹಾಗೂ ಪ್ರವಾಸಿಗರಿಗೆ ಅನುಕೂಲಕ್ಕಾಗಿ ಅಪ್ಲಿಕೇಷನ್ ಬಿಡುಗಡೆ ಮಾಡಿದೆ. ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಅವರು ಲೋಗೋ ಹಾಗೂ ಆಂಡ್ರಾಯ್ಡ್ ಅಪ್ಲಿಕೇಷನ್ ಲೋಕಾರ್ಪಣೆ ಮಾಡಿದರು.

 ಸಮಸ್ಯೆಗೆ ಸ್ಪಂದಿಸಲು ಬಿಬಿಎಂಪಿಯಿಂದ 'Fix My Street' ಅಪ್ಲಿಕೇಷನ್ ಸಮಸ್ಯೆಗೆ ಸ್ಪಂದಿಸಲು ಬಿಬಿಎಂಪಿಯಿಂದ 'Fix My Street' ಅಪ್ಲಿಕೇಷನ್

ನ್ಯೂಯಾರ್ಕ್, ಪ್ಯಾರೀಸ್, ಹಾಗೂ ಆಮ್ಸಸ್ಟರ್ ಡ್ಯಾಮ್ ಸೇರಿದಂತೆ ಕೆಲವೇ ನಗರಗಳು ಇಂಥ ಲಾಂಛನ ಹೊಂದಿದೆ. ಆಯ್ಕೆಯಾಗಿರುವ ಲಾಂಛನ ಹಾಗೂ ಬೆಂಗಳೂರಿನ ಪ್ರವಾಸ ಕೈಗೊಳ್ಳುವವರಿಗೆ ಮಾಹಿತಿ ಮತ್ತು ಸೇವೆ ನೀಡಲು ಇದು ಬಳಕೆಯಾಗಲಿದೆ.

ಬೆಂಗಳೂರಲ್ಲಿ 8 ಹೆಲಿಪ್ಯಾಡ್ ನಿರ್ಮಿಸಲಿದೆ ಬಿಬಿಎಂಪಿಬೆಂಗಳೂರಲ್ಲಿ 8 ಹೆಲಿಪ್ಯಾಡ್ ನಿರ್ಮಿಸಲಿದೆ ಬಿಬಿಎಂಪಿ

ನ್ಯೂಯಾರ್ಕ್ ನಲ್ಲಿ ಈ ರೀತಿ ಲಾಂಛನ ರೂಪಿಸಿ ಅದಕ್ಕೆ ಪೂರಕ ಕಾರ್ಯಕ್ರಮ ರೂಪಿಸಿದ ನಂತರ ಉದ್ಯೋಗ ಅವಕಾಶಗಳು ಹೆಚ್ಚಾಗಿದೆ ಎಂದು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

#nammabengaluru ಹ್ಯಾಶ್ ಟ್ಯಾಗ್

#nammabengaluru ಹ್ಯಾಶ್ ಟ್ಯಾಗ್

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರತ್ಯೇಕ ಲಾಂಛನ ಪಡೆದುಕೊಂಡ ಮೊದಲ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ. ಇದರ ಬೆನ್ನಲ್ಲೇ #nammabengaluru ಹ್ಯಾಶ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.

ಪ್ರವಾಸೋದ್ಯಮ ಇಲಾಖೆಯು ಬ್ರ್ಯಾಂಡ್ ಬೆಂಗಳೂರಿಗೊಂದು ಹೊಸ ಲಾಂಛನ ಹಾಗೂ ಪ್ರವಾಸಿಗರಿಗೆ ಅನುಕೂಲಕ್ಕಾಗಿ ಅಪ್ಲಿಕೇಷನ್ ಬಿಡುಗಡೆ ಮಾಡಿದೆ.

ಫೇಸ್ಬುಕ್, ಟ್ವಿಟ್ಟರಿನಲ್ಲಿ ಸರಕಾರಕ್ಕೆ ದೂರು ಮುಟ್ಟಿಸಿಫೇಸ್ಬುಕ್, ಟ್ವಿಟ್ಟರಿನಲ್ಲಿ ಸರಕಾರಕ್ಕೆ ದೂರು ಮುಟ್ಟಿಸಿ

ಬೆಂಗಳೂರು ಲಾಂಛನ ರಚನೆ

ಬೆಂಗಳೂರು ಲಾಂಛನ ರಚನೆಯಲ್ಲಿ ಒಂದೇ ಸಂಸ್ಥೆಗೆ ಗುತ್ತಿಗೆ ನೀಡಲಾಗಿಲ್ಲ. ಅಂತರ್ಜಾಲದಲ್ಲಿ ಸಾರ್ವಜನಿಕರಿಂದ ಸ್ಪರ್ಧೆ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟು 1,350 ಲಾಂಛನಗಳು ಸಲ್ಲಿಕೆಯಾಗಿದ್ದವು. ರಾಷ್ಟ್ರೀಯ ಫ್ಯಾಷನ್ ಟೆಕ್ನಾಲಜಿ ಸಂಸ್ಥೆ, ಚಿತ್ರಕಲಾ ಪರಿಷತ್ ಸೇರಿ ಅನೇಕ ಸಂಸ್ಥೆಗಳ ಸಹಯೋಗದಲ್ಲಿ ಒಂದು ನವೋದಯ ಸಂಸ್ಥೆ ನಮ್ಮೂರು ಸಂಸ್ಥೆಯ ವಿನೋದ್ ಕುಮಾರ್ ರೂಪಿಸಿದ ಲಾಂಛನವನ್ನು ಆಯ್ಕೆ ಮಾಡಲಾಗಿದೆ.

ಪ್ರವಾಸಿಗರಿಗೆ ಎಲ್ಲ ಮಾಹಿತಿ ನೀಡುವ ಆಪ್

ಬೆಂಗಳೂರಿಗೆ ಆಗಮಿಸುತ್ತಿರುವ ಪ್ರವಾಸಿಗರಿಗೆ ಎಲ್ಲ ಮಾಹಿತಿ ನೀಡುವ ಮೊಬೈಲ್ ಆಪ್ ಸಿದ್ಧವಾಗಿದೆ. ಆಂಡ್ರಾಯ್ಡ್ ಅಪ್ಲಿಕೇಷನ್ ನಲ್ಲಿ ಬೆಂಗಳೂರಿನ ಪ್ರವಾಸಿತಾಣಗಳ ಮಾಹಿತಿ ಇರಲಿದೆ.

ಅಪ್ಲಿಕೇಷನ್ ಮೂಲಕವೇ ಕ್ಯಾಬ್ ಬುಕ್

ಪ್ರವಾಸಿಗರು ಅಪ್ಲಿಕೇಷನ್ ಮೂಲಕವೇ ಕ್ಯಾಬ್, ಬಸ್ ಬುಕ್ ಮಾಡಿ ಸುತ್ತಾಡಬಹುದು. ಆಸ್ಪತ್ರೆಗಳು, ಮೆಟ್ರೋ ನಿಲ್ದಾಣಗಳು, ಬಿಎಂಟಿಸಿ ಬಸ್ ಸಮಯ ಬೆಂಗಳೂರಿನಲ್ಲಿ ದಿನಪೂರ್ತಿ ನಡೆಯಲಿರುವ ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಬಹುದು.

ಮಾರ್ಗಗಳ ಮಾಹಿತಿ

ಕಬ್ಬನ್ ಪಾರ್ಕ್ ಮಾರ್ಗ, ಲಾಲ್ ಬಾಗ್ ಪಥ, ದೇವಸ್ಥಾನ ಪಥ ಹೀಗೆ ಪ್ರವಾಸಿಗರಿಗೆ ಆಸಕ್ತಿ ಇರುವ ವಿಷಯದಲ್ಲಿ ಸಂಚರಿಸಲು ಮಾಹಿತಿ ನೀಡಲಾಗುತ್ತದೆ.

ಲೋಗೋ ಹಾಕ್ಕೊಂಡ್ರೆ ಮೀಸಲಾತಿ ಸಿಗುತ್ತಾ?

ಈ ಲೋಗೋ ಹಾಕ್ಕೊಂಡ್ರೆ ಮೀಸಲಾತಿ ಸಿಗುತ್ತಾ? ವಿಐಪಿ ಟ್ರೀಟ್ ಸಿಗುತ್ತಾ? ಟ್ರಾಫಿಕ್ ಪೋಲೀಸರು ಸುಮ್ನೆ ಬಿಡ್ತಾರಾ? ಎಂದು ಸಾರ್ವಜನಿಕರು ಪ್ರಶ್ನೆ ಹಾಕಿದ್ದಾರೆ.

ಪ್ರವಾಸಿಗರ ಅನುಕೂಲಕ್ಕೆ ಆಪ್

ಬೆಂಗಳೂರಿಗೆ ಸಮಗ್ರ ಮಾಹಿತಿ ನೀಡುವ ಅಪ್ಲಿಕೇಷನ್ ಇಲ್ಲಿದೆ

English summary
Know Why #NammaBengaluru is trending on Twitter. #NammaBengaluru gets its own identity. A city steeped in history, culture, art, cuisines. A identity that will tell the Bengaluru stories across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X