Bengaluru Traffic: ನಿಮ್ಮ ಸುತ್ತಲಿನ ಟ್ರಾಫಿಕ್ ಜಾಮ್ ಮಾಹಿತಿ ನೀಡಲಿದೆ ಹೊಸ ಅಪ್ಲಿಕೇಶನ್

ಬೆಂಗಳೂರು, ನವೆಂಬರ್ 09: ಉದ್ಯಾನ ನಗರಿ ಬೆಂಗಳೂರಿನ ಪ್ರಮುಖ ಸಮಸ್ಯೆ ಟ್ರಾಫಿಕ್. ನಗರದ ಯಾವ ರಸ್ತೆಯಲ್ಲಿ ಯಾವಾಗ ಸಂಚಾರ ದಟ್ಟಣೆ ಉಂಟಾಗುತ್ತದೆ ಎಂದು ಊಹಿಸುವುದು ಕಷ್ಟ. ಅದರಲ್ಲೂ ಮಳೆ ಬಂದರೆ ನಗರದ ರಸ್ತೆಗಳಲ್ಲಿ ವಾಹನ ಸವಾರರ ಪಾಡು ಯಾರಿಗೂ ಬೇಡ. ನಗರದ ಸಂಚಾರ ಸಮಸ್ಯೆ ಬಗ್ಗೆ ಮಾಹಿತಿ ನೀಡಲು ಅಪ್ಲಿಕೇಶನ್ ಒಂದನ್ನು ಬಿಡುಗಡೆ ಮಾಡಲು ಸಂಚಾರಿ ಪೊಲೀಸರು ತಯಾರಾಗಿದ್ದಾರೆ.

ಸದ್ಯ ಹಲವಾರು ಸಾಮಾಜಿಕ ಜಾಲತಾಣದ ಪೇಜ್‌ಗಳು, ಗೂಗಲ್ ಮ್ಯಾಪ್ ಸಂಚಾರ ದಟ್ಟಣೆ ಬಗ್ಗೆ ಮಾಹಿತಿ ನೀಡುತ್ತಿದೆ. ಆದರೆ ಪ್ರತಿ ಬಾರಿ ಇವುಗಳನ್ನು ನೋಡಲು ಸಾಧ್ಯವಿಲ್ಲ. ಆದ್ದರಿಂದ ಸ್ಮಾರ್ಟ್‌ ಫೋನ್‌ನಲ್ಲಿಯೇ ಮಾಹಿತಿ ಸಿಗಲು ಅನುಕೂಲವಾಗುವಂತೆ ಅಪ್ಲಿಕೇಶನ್ ಅಭಿವೃದ್ಧಿಗೊಳಿಸಲಾಗಿದೆ.

Know Traffic Alert Of Bengaluru City By Police New Application

ಮುಂದಿನ ಎರಡು ತಿಂಗಳಿನಲ್ಲಿ ಬೆಂಗಳೂರು ನಗರದ ಸಂಚಾರಿ ಪೊಲೀಸರು ASTraM ಎಂಬ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಲಿದ್ದಾರೆ. ಈ ಅಪ್ಲಿಕೇಶನ್ ಸಹಾಯದಿಂದ ನೀವು ರಿಯಲ್ ಟೈಂ ಟ್ರಾಫಿಕ್ ಅಪ್‌ಡೇಟ್ ಪಡೆಯಬಹುದು, ಅಲ್ಲದೇ ನಿಮ್ಮ ಸುತ್ತಮುತ್ತ ನಡೆದಿರುವ ರಸ್ತೆ ಅಪಘಾತಗಳ ಮಾಹಿತಿಯನ್ನು ಸಹ ಅಪ್‌ಡೇಟ್ ಮಾಡಬಹುದು.

ಅಪ್ಲಿಕೇಶನ್ ವಿಶೇಷತೆಗಳು: ಹಲವಾರು ಸಾಮಾಜಿಕ ಜಾಲತಾಣದ ಖಾತೆಗಳು, ಅಪ್ಲಿಕೇಶನ್ ಮೂಲಕ ಮಾಹಿತಿ ಪಡೆಯುವುದನ್ನು ಈ ಒಂದು ಅಪ್ಲಿಕೇಶನ್ ತಡೆಯಲಿದೆ. ಈ ವರ್ಷದ ಆರಂಭದಲ್ಲಿಯೇ ಈ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ. ಆದರೆ ಸದ್ಯ ಸಂಚಾರಿ ಪೊಲೀಸರು ಮಾತ್ರ ಸಂಚಾರ ನಿರ್ವಹಣೆ ಮಾಡಲು ಇದನ್ನು ಬಳಕೆ ಮಾಡುತ್ತಿದ್ದಾರೆ.

ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ. ಎನ್. ಅನುಚೇತ್ ಮಾತನಾಡಿ, "ಹೊಸ ಒನ್-ಸ್ಟಾಪ್ ಅಪ್ಲಿಕೇಶನ್ ಜನರಿಗೆ 5 ಕಿ. ಮೀ. ವ್ಯಾಪ್ತಿಯ ಸಂಚಾರ ದಟ್ಟಣೆಯ ಕುರಿತು ರಿಯಲ್ ಟೈಂ ಮಾಹಿತಿಯನ್ನು ನೀಡುತ್ತದೆ. ಅಲ್ಲದೇ ಅಪಘಾತಗಳ ಕುರಿತು ಅಪ್‌ಡೇಟ್ ನೀಡಲು ಸಹಾಯ ಮಾಡಲಿದೆ. ಜನರು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡವನ್ನು ಸಹ ಇದರಲ್ಲಿ ಪಾವತಿ ಮಾಡಬಹುದು" ಎಂದು ಹೇಳಿದ್ದಾರೆ.

"ನಾವು ಪಬ್ಲಿಕ್-ಐ ಸೇರಿದಂತೆ ವಿವಿಧ ಅಪ್ಲಿಕೇಶನ್ ಅನ್ನು ಒನ್-ಸ್ಟಾಪ್ ಅಪ್ಲಿಕೇಶನ್ ಜೊತೆಗೆ ಜೋಡಣೆ ಮಾಡಲಿದ್ದೇವೆ. ಸಂಚಾರಿ ಪೊಲೀಸರು ಈ ಅಪ್ಲಿಕೇಶನ್ ಬಳಕೆ ಮಾಡಲಿದ್ದು, ರಸ್ತೆ ಅಪಘಾತಗಳನ್ನು ಇದರಲ್ಲಿಯೇ ರಿಪೋರ್ಟ್‌ ಮಾಡಲಿದ್ದಾರೆ" ಎಂದು ತಿಳಿಸಿದ್ದಾರೆ.

ಜನರು ಮಾಹಿತಿ ತಿಳಿಯುವುದು ಮಾತ್ರವಲ್ಲ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ಚಿತ್ರಗಳನ್ನು ತೆಗೆದು ತಮ್ಮ ವೈಯಕ್ತಿಕ ಮಾಹಿತಿಯನ್ನು ಸೇರಿಸದೇ ದೂರು ಸಲ್ಲಿಕೆ ಮಾಡಲು ಸಹ ಅವಕಾಶವಿದೆ. ಈ ಅಪ್ಲಿಕೇಶನ್ ಬಿಡುಗಡೆಯಾದ ಮೇಲೆ ಜನರು ಟ್ರಾಫಿಕ್ ಅಪ್‌ಡೇಟ್‌ಗಾಗಿ ಸಾಮಾಜಿಕ ಜಾಲತಾಣ ಬಳಕೆ ಮಾಡಬೇಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಸಂಚಾರಿ ಪೊಲೀಸರು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದ 26 ವಿವಿಧ ಯೋಜನೆಗಳ ಪೈಕಿ ಈ ಅಪ್ಲಿಕೇಶನ್ ಸಹ ಒಂದಾಗಿದೆ. ಇದಕ್ಕೆ ಈಗಾಗಲೇ ಸರ್ಕಾರದ ಒಪ್ಪಿಗೆ ಸಿಕ್ಕಿದೆ. ಅಪ್ಲಿಕೇಶನ್ ನಿರ್ವಹಣೆ ಮಾಡಲು ಸಂಚಾರಿ ಪೊಲೀಸರು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲಿದ್ದಾರೆ. ನಗರದ ರಸ್ತೆಯ ಡಿಜಿಟಲ್ ಮ್ಯಾಪ್ ಆಧರಿಸಿ ಅಪ್ಲಿಕೇಶನ್ ಮೂಲಕ ಮಾಹಿತಿ ನೀಡಲಾಗುತ್ತದೆ.

ಜನರು ಅಪ್ಲಿಕೇಶನ್ ಬಳಕೆ ಮಾಡಲು ಆರಂಭಿಸಿ ಬದಲಾವಣೆಗಳನ್ನು ತಿಳಿಸಿದರೆ ಅದನ್ನು ಮಾಡಲು ಸಹ ಗುತ್ತಿಗೆ ನೀಡುವ ಸಂಸ್ಥೆಗೆ ತಿಳಿಸಲಾಗುತ್ತದೆ. ಸದ್ಯ ಸಂಚಾರಿ ಪೊಲೀಸರು 21 ಮೇಜರ್ ಟ್ರಾಫಿಕ್ ಕಾರಿಡಾರ್‌ಗಳನ್ನು ನಗರದಲ್ಲಿ ಗುರುತಿಸಿದ್ದಾರೆ. ಆದರೆ ಈ ಯೋಜನೆ ಇಡೀ ನಗರದ ಮಾಹಿತಿ ನೀಡಲಿದೆ.

ಶಾಲೆಗಳಿಗೆ ಸುರಕ್ಷಿತ ಮಾರ್ಗ, 150 ಸೋಲಾಕ್ ಬ್ಲಿಂಕ್ಸ್‌, 500 ಬಾಡಿ ವೋರ್ನ್‌ ಕ್ಯಾಮರಾ ಸೇರಿದಂತೆ ಇತರ ಹಲವು ಯೋಜನೆಗಳನ್ನು ಸಂಚಾರಿ ಪೊಲೀಸರು ಹಾಕಿಕೊಂಡಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ವಿವಿಧ ಯೋಜನೆಗೆ ಟೆಂಡರ್ ಕರೆಯಲಾಗುತ್ತದೆ. 2025ರ ಜನವರಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+