ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇವರು ಸಿವಿ ರಾಮನ್‌ ನಗರದ 'ಸಿಂಗಂ ಭಾಸ್ಕರ್'

|
Google Oneindia Kannada News

ಗರಿಗರಿಯಾಗಿ ಇಸ್ತ್ರೀ ಮಾಡಿದ ಖಾಕಿ, ಕೈಯಲ್ಲಿ ವಾಕಿಟಾಕಿ, ಸಿಂಗಂ ಮೀಸೆ, ಸದಾ ನಗು ಮುಖ. ಸಾರ್ ಈ ಅಡ್ರೆಸ್ ಹೇಳ್ತಿರಾ? ಎಂದು ಕೇಳಿದರೆ ಸೌಜನ್ಯದಿಂದ ದಾರಿ ತೋರಿಸುವ ಶಾಂತ ಗುಣ. ಇವರು ಬೆಂಗಳೂರಿನ ಸಿವಿ ರಾಮನ್‌ ನಗರದ ಸಂಚಾರಿ ಪೊಲೀಸ್ ಭಾಸ್ಕರ್, ಏರಿಯಾದ ಜನರ ಪಾಲಿನ ನೆಚ್ಚಿನ 'ಸಿಂಗಂ ಭಾಸ್ಕರ್'.

ಪೊಲೀಸರ ಬಳಿ ಮಾತನಾಡುವುದೆಂದರೆ ಜನರು ಹೆದರುತ್ತಾರೆ. ಕಾರಣ ಅವರ ಸಿಡುಕು ಸ್ವಭಾವ. ಆದರೆ, ಸಿವಿ ರಾಮನ್ ನಗರದ ಪುಟ್ಟ ಮಕ್ಕಳು ಭಾಸ್ಕರ್ ಅವರನ್ನು ಯಾವುದೇ ಭಯವಿಲ್ಲದೇ ಮಾತನಾಡಿಸುತ್ತಾರೆ. ಖಡಕ್ ಸಿಂಗಂ ಮೀಸೆ ಹೊಂದಿರುವ ಭಾಸ್ಕರ್ ಎಂದಿಗೂ ಜನರ ಮೇಲೆ ಸಿಡುಕುವುದಿಲ್ಲ. ಅವರಿಗೆ ಕೈಲಾದ ಸಹಾಯ ಮಾಡುತ್ತಾರೆ. ಆದ್ದರಿಂದ ಅವರೆಂದರೆ ಜನರಿಗೆ ಇಷ್ಟ. [ಈ ಟ್ರಾಫಿಕ್ ಪೊಲೀಸ್ ಅಂದ್ರೆ ಜನರಿಗೆ ಅಚ್ಚುಮೆಚ್ಚು]

 Bhaskar

ಸಿವಿ ರಾಮನ್‌ ನಗರದ ಜನರ ಪಾಲಿಗೆ ಭಾಸ್ಕರ್ 'ಸಿಂಗಂ ಭಾಸ್ಕರ್'. ತಮ್ಮ ಖಡಕ್ ಸಿಂಗಂ ಮೀಸೆಯಿಂದ ಅವರು ಪ್ರಸಿದ್ಧಿ ಪಡೆದಿಲ್ಲ. ಜನರ ಜೊತೆ ಬೆರೆತು, ಶಾಂತ ರೀತಿಯಿಂದ ವರ್ತಿಸಿ ಅವರಿಗೆ ತಮ್ಮ ಕೈಲಾದ ಸಹಾಯ ಮಾಡುವುದರಿಂದ ಅವರು ಬಡಾವಣೆಯಲ್ಲಿ ತುಂಬಾ ಪ್ರಸಿದ್ಧಿ ಪಡೆದಿದ್ದಾರೆ. [ಸರಗಳ್ಳನನ್ನು ಹಿಡಿದ ಸಂಚಾರಿ ಪೊಲೀಸ್ ಪೇದೆ]

ಸಿಂಗಂ ಭಾಸ್ಕರ್ ಕರ್ತವ್ಯ ಮಾಡುತ್ತಿದ್ದಾರೆ ಎಂದರೆ ಜನರು ತಮ್ಮ ಪಾಡಿಗೆ ತಾವು ಶಿಸ್ತಿನಿಂದ ರಸ್ತೆಯಲ್ಲಿ ಸಾಗುತ್ತಾರೆ. ಸಿಗ್ನಲ್ ಜಂಪ್ ಮಾಡುವುದು, ಅನಗತ್ಯವಾಗಿ ಹಾರನ್ ಹೊಡೆಯುವುದು ಮುಂತಾದವುಗಳನ್ನು ಮಾಡದೆ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುತ್ತಾರೆ. [ಬೆಂಗಳೂರಿನ ಸಿಂಗಂ ಪೊಲೀಸ್ ಕಥೆ!]

ಅಂದಹಾಗೆ 25 ವರ್ಷದ ಸಿಂಗಂ ಭಾಸ್ಕರ್ ಮೂಲತಃ ಮೈಸೂರಿನವರು. ಐದು ವರ್ಷಗಳ ಹಿಂದೆ ಅವರು ಐದು ವರ್ಷಗಳ ಹಿಂದೆ ಬೆಂಗಳೂರು ಸಂಚಾರಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉತ್ತಮ ಕಾರ್ಯ ನಿರ್ವಹಣೆಗಾಗಿ ಬೆಂಗಳೂರು ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರಿಂದ ಇತ್ತೀಚೆಗೆ ಪ್ರಶಸ್ತಿಯನ್ನು ಪಡೆದಿದ್ದಾರೆ.

'ನಾನು ನನ್ನ ಕೆಲಸವನ್ನು ಶ್ರದ್ಧೆಯಿಂದ, ಇಷ್ಟಪಟ್ಟು ಮಾಡುತ್ತೇನೆ' ಎಂಬುದು ಸಿಂಗಂ ಭಾಸ್ಕರ್ ಅವರ ಒಂದು ಸಿಂಪಲ್ ಹೇಳಿಕೆ. ಕೆಲಸ ಮಾಡುವ ಸಂದರ್ಭದಲ್ಲಿ ನಾನು ಹಲವಾರು ಜನರೊಂದಿಗೆ ಮಾತನಾಡುತ್ತೇನೆ. ಅವರಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದು ಭಾಸ್ಕರ್ ಹೇಳುತ್ತಾರೆ. ಭಾಸ್ಕರ್ ಕಾರ್ಯವೈಖರಿ ಮೆಚ್ಚಿ ಅವರಿಗೆ ಪ್ರಶಸ್ತಿ ನೀಡಿದ ನಗರ ಪೊಲೀಸ್ ಆಯುಕ್ತರಿಗೆ ನಮ್ಮ ಅಭಿನಂದನೆಗಳು.

English summary
Bengaluru C.V.Raman Nagar residents to approach traffic policeman, even a Kid will be ready to meet the traffic police personal. He is Bhaskar by name, famously called Singam Bhaskar by CV Raman Nagar commuters. He is famous for his smile and his attitude to help others. 25 years old Bhaskar joined Bangalore traffic Police five years ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X