ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಿಚ್ಚ ಸುದೀಪ್ ದಂಪತಿ ವಿರುದ್ಧ ಗರಂ ಆದ ಕೌಟುಂಬಿಕ ಕೋರ್ಟ್!

ವಿವಾಹ ವಿಚ್ಛೇದನ ಅರ್ಜಿ ವಿಚಾರಣೆಗೆ ಹಾಜರಾಗದ ಕಿಚ್ಚ ಸುದೀಪ್ ಹಾಗೂ ಪ್ರಿಯಾ ರಾಧಾಕೃಷ್ಣನ್ ವಿರುದ್ಧ ಕೌಟುಂಬಿಕ ನ್ಯಾಯಲಯ ಗರಂ ಆಗಿದೆ. ಮುಂದಿನ ವಿಚಾರಣೆಯನ್ನು ಜೂನ್ 14ಕ್ಕೆ ಮುಂದೂಡಲಾಗಿದೆ.

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 09: 'ರಾಜಿ ಆಗಿದ್ರೆ ಅರ್ಜಿ ಹಿಂಪಡೆಯಿರಿ, ಕೋರ್ಟ್ ಸಮಯ ಏಕೆ ವ್ಯರ್ಥ ಮಾಡ್ತೀರಿ, ಜೂನ್ 14ರಂದು ಎಲ್ಲೇ ಇದ್ದರೂ ಇಬ್ಬರೂ(ಕಿಚ್ಚ ಸುದೀಪ್ ಹಾಗೂ ಪ್ರಿಯಾ ರಾಧಾಕೃಷ್ಣನ್) ಅವರು ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆ ಎದುರಿಸಬೇಕು' ಎಂದು ಕೌಟುಂಬಿಕ ನ್ಯಾಯಾಲಯದ ನ್ಯಾಯಧೀಶರು ಗುರುವಾರ (ಮಾರ್ಚ್ 09) ದಂದು ಆದೇಶಿಸಿದ್ದಾರೆ.

ಕಿಚ್ಚ ಸುದೀಪ್ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿ, ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಳ್ಳುವುದಕ್ಕೆ ಸುದೀಪ್, ಪತ್ನಿ ಪ್ರಿಯಾ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರುವ ಸುದ್ದಿ 2015ರಿಂದ ನೀವು ಓದಿರುತ್ತಿರುತ್ತೀರಿ. [14 ವರ್ಷದ ಸುದೀಪ್ ದಾಂಪತ್ಯ ಜೀವನದಲ್ಲಿ ಬಿರುಗಾಳಿ: ಡೈವೋರ್ಸ್!]

ಡಿವೋರ್ಸ್ ಪಡೆಯುವುದಕ್ಕೆ ಅಸಲಿ ಕಾರಣ ಏನು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಒಟ್ಟಿಗೆ ಇರಲು ಮಾತ್ರ ಮಗಳು ಸಾನ್ವಿ ಮಾತ್ರ ಕಾರಣ ಎಂಬುದು ಎಲ್ಲರಿಗೂ ತಿಳಿದಿದೆ.

Kichcha Sudeepa and Priya Divorce case Postponed to June 14
2015ರ ಸೆಪ್ಟೆಂಬರ್ ನಲ್ಲಿ ಅರ್ಜಿ ವಿಚಾರಣೆ ಆರಂಭವಾಗಿ ಮಾರ್ಚ್ 09, 2017ರ ತನಕ ಮುಂದುವರೆದಿದೆ. ಆದರೆ, ನಟ ಸುದೀಪ್ ಹಾಗೂ ಪ್ರಿಯಾ ಅವರು ಕೋರ್ಟಿಗೆ ಇಲ್ಲಿ ತನಕ ಹಾಜರಾಗಿಲ್ಲ.[ಟ್ವಿಟ್ಟರ್ ಹ್ಯಾಕ್ ಆಗಿಲ್ಲ, ಇದು ನನ್ನದೇ ಖಾತೆ : ದರ್ಶನ್]

ಇಬ್ಬರ ನಡುವೆ ರಾಜಿ ಸಂಧಾನವಾಗಿದೆ. ಮಗಳಿಗಾಗಿ ಇಬ್ಬರು ಒಟ್ಟಿಗೆ ವಾಸಿಸಲು ಅಥವಾ ವಿಚ್ಛೇದನ ಪಡೆಯದೆ ಬೇರೆ ಬೇರೆ ವಾಸಿಸಿ ಮಗಳನ್ನು ಪೋಷಿಸಲು ನಿರ್ಧರಿಸಿದ್ದಾರೆ ಎಂಬ ಸುದ್ದಿಯಿದೆ. ಆದರೆ, ಇದಕ್ಕೆಲ್ಲ ಕಾನೂನಿನ ಮುದ್ರೆ ಬಿದ್ದಿಲ್ಲ.

ಒಂದು ವೇಳೆ ಜೂನ್ 14ರಂದು ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಕೋರ್ಟಿಗಿರುತ್ತದೆ.


ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದಾಗ ಸರಣಿ ಟ್ವೀಟ್ ಮಾಡಿದ್ದ ಸುದೀಪ್ ಅವರು ನಂತರ ಈ ಬಗ್ಗೆ ಹೆಚ್ಚು ಮಾತನಾಡಿಲ್ಲ. ಪತ್ನಿ ಪ್ರಿಯಾಗೆ ಅನ್ಯಾಯವಾಗಿದೆ ಎಂದು ಒಮ್ಮೆ ಹೇಳಿದ್ದು ಬಿಟ್ಟರೆ, ಇದು ನನ್ನ ವೈಯಕ್ತಿಕ ವಿಚಾರ ಮಾಧ್ಯಮಗಳು, ಅಭಿಮಾನಿಗಳು, ಸಾರ್ವಜನಿಕರು ನನ್ನ ಖಾಸಗಿತನಕ್ಕೆ ಬೆಲೆ ನೀಡುವ ಭರವಸೆ ಇದೆ ಎಂದಿದ್ದರು.

English summary
Actor Kichcha Sudeepa who is busy in Hebbuli promotion and his wife Priya did not turn up at the family court today (March 09) for a hearing on their divorce. The case is adjourned to June 14 for the final hearing and both have appear before court in person.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X