ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಇಂದಿನಿಂದ ಹೆಲಿ ಟ್ಯಾಕ್ಸಿ ಸೇವೆ ಕಾರ್ಯಾರಂಭ!

|
Google Oneindia Kannada News

ಬೆಂಗಳೂರು, ಮಾರ್ಚ್ 05: ಟ್ರಾಫಿಕ್ ಸಮಸ್ಯೆ ತಗ್ಗಿಸಲು ಹಾಗೂ ಪ್ರಯಾಣ ಸಮಯವನ್ನು ಕಡಿಮೆ ಮಾಡಲು ನೆರವಾಗುವಂತೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಹೆಲಿ ಟ್ಯಾಕ್ಸಿ ಸೇವೆ ಇಂದಿನಿಂದ ಆರಂಭವಾಗಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಎಲೆಕ್ಟ್ರಾನಿಕ್ ಸಿಟಿ ನಡುವೆ ಇಂದು ಹೆಲಿ ಟ್ಯಾಕ್ಸಿ ಸೇವೆ ಆರಂಭವಾಗಿದೆ. ಇಂದು ಬೆಳಗ್ಗೆ 6.30ಕ್ಕೆ ಎಲೆಕ್ಟ್ರಾನಿಕ್ ಸಿಟಿಯಿಂದ ಮೊದಲ ಹೆಲಿ ಟ್ಯಾಕ್ಸಿ ಟೇಕ್ ಆಫ್ ಆಗಿದೆ.

ಹೆಲಿ ಟ್ಯಾಕ್ಸಿಯಲ್ಲಿ ತೆರಳಬೇಕೆ? ಹಾಗಾದರೆ ಬುಕಿಂಗ್ ಹೇಗೆ?ಹೆಲಿ ಟ್ಯಾಕ್ಸಿಯಲ್ಲಿ ತೆರಳಬೇಕೆ? ಹಾಗಾದರೆ ಬುಕಿಂಗ್ ಹೇಗೆ?

ಐವರು ಗ್ರಾಹಕರು ಮುಂಗಡವಾಗಿ ತಮ್ಮ ಸೀಟ್ ಬುಕ್ ಮಾಡಿದ್ದರು. ದಿನಕ್ಕೆ ಮೂರು ಟ್ರಿಪ್‍ನಂತೆ ಈ ಸೇವೆ ಇರಲಿದ್ದು, ಕೊಚ್ಚಿ ಮೂಲದ ತಂಬಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಈ ಸೇವೆ ಒದಗಿಸುತ್ತಿದೆ. ಮುಂದೆ ಹೆಚ್‍ಎಎಲ್ ವಿಮಾನ ನಿಲ್ದಾಣಕ್ಕೂ ಸೇವೆಯನ್ನ ವಿಸ್ತರಿಸಲಿದ್ದಾರೆ.

KIAL and Electronic city much nearer from Today

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಎಲೆಕ್ಟ್ರಾನಿಕ್ ಸಿಟಿ ನಡುವೆ ರಸ್ತೆ ಮಾರ್ಗವಾಗಿ ಪ್ರಯಾಣ ಮಾಡಲು 1 ರಿಂದ 3 ಗಂಟೆ ಸಮಯ ಬೇಕು. ಆದರೆ ಹೆಲಿಕಾಪ್ಟರ್ ನಿಂದ ಪ್ರಯಾಣ ಸಮಯ 15 ನಿಮಿಷಗಳಿಗೆ ಇಳಿಯಲಿದೆ. ಗ್ರಾಹಕರು ' ಹೆಲಿಟ್ಯಾಕ್ಸಿ.ಕ್ಯಾಬ್ ' ಅಪ್ಲಿಕೇಷನ್ ಮೂಲಕ ಹೆಲಿ ಟ್ಯಾಕ್ಸಿಯನ್ನ ಬುಕ್ ಮಾಡಿಕೊಳ್ಳಬಹುದು.

ಒಬ್ಬರಿಗೆ 4 ಸಾವಿರ ರೂ.(ತೆರಿಗೆ ಸೇರಿ) ದರ ನಿಗದಿಪಡಿಸಲಾಗಿದೆ. ಈ ಎರಡು ನಿಲ್ದಾಣಗಳ ನಡುವೆ ಕ್ಯಾಬ್ ನಲ್ಲಿ ಹೋದರೆ ಸುಮಾರು 1500 ರಿಂದ 2000 ರೂ. ಖರ್ಚಾಗುತ್ತದೆ.

ಮೊದಲ ಹಂತದಲ್ಲಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದ್ದು, ಇದು ಮುಂಬರುವ ಮಟ್ರೋ ನಿಲ್ದಾಣ ಹಾಗೂ ಬಸ್ ನಿಲ್ದಾಣಕ್ಕೆ ಸಮೀಪದಲ್ಲೇ ಇದೆ. ಎರಡನೇ ಹಂತದಲ್ಲಿ ವಿಮಾನ ನಿಲ್ದಾಣದಿಂದ ಕಂಠೀರವ ಸ್ಟೇಡಿಯಂ ಬಳಿ ಇರುವ ಐಟಿಸಿ ಗಾರ್ಡೇನಿಯಾ ಸೇರಿದಂತೆ ಐಷಾರಾಮಿ ಹೋಟೆಲ್‍ಗಳಿಗೆ ಸೇವೆ ಒದಗಿಸಲಾಗುತ್ತದೆ. ಈ ಹೋಟೆಲ್ ಗಳಲ್ಲಿ ಎಲ್ಲಾ ಸುರಕ್ಷತೆ ಹಾಗೂ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಗೆ ಬೇಕಾದ ವಿಮಾನಯಾನ ಅಗತ್ಯತೆಗಳಿವೆ ಎಂದು ತಂಬಿ ಏವಿಯೇಷನ್ ಅಧ್ಯಕ್ಷರು ಹಾಗೂ ಎಂಡಿ ಆಗಿರುವ ಕ್ಯಾಪ್ಟರ್ ನಾಯರ್ ತಿಳಿಸಿದ್ದಾರೆ.

ಗ್ರಾಹಕರು ಹೆಲಿಕಾಪ್ಟರ್ ನಲ್ಲಿ 15 ಕೆಜಿ ತೂಕದಷ್ಟು ಲಗೇಜ್ ಹೊತ್ತಯ್ಯಬಹುದಾಗಿದ್ದು, ಅದಕ್ಕಿಂತ ಹೆಚ್ಚಿನ ತೂಕದ ಲಗೇಜ್ ಗೆ ಹೆಚ್ಚಿನ ಶುಲ್ಕ ನೀಡಬೇಕಾಗುತ್ತದೆ ಎಂದು ನಾಯರ್ ಹೇಳಿದ್ದಾರೆ.

English summary
Bengaluru's Helicopter taxi service is all set to take off on Monday with users able to fly from Kempegowda International Airport to Electronic city in 15 minutes, a journey that usually takes two hours by road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X