ಬೆಂಗಳೂರಿನ ಹೊರಗೆ 15 ಹೊಸ ಕೈಗಾರಿಕಾ ಲೇಔಟ್‌ಗಳನ್ನು ಅಭಿವೃದ್ಧಿಪಡಿಸಲು ಕೆಐಎಡಿಬಿ ಯೋಜನೆ
ಬೆಂಗಳೂರು, ಏಪ್ರಿಲ್. 02: ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ರಾಜ್ಯದಾದ್ಯಂತ 15 ಹೊಸ ಕೈಗಾರಿಕಾ ಲೇಔಟ್‌ಗಳನ್ನು ಸ್ಥಾಪಿಸಲು ಮತ್ತು ಹೆಚ್ಚಿನ ಕೈಗಾರಿಕೆಗಳಿಗೆ ಅವಕಾಶ ಕಲ್ಪಿಸಲು ಇತರ ಹಲವು ಕೈಗಾರಿಕಾ ಪ್ರದೇಶಗಳನ್ನು ವಿಸ್ತರಿಸಲು ಯೋಜಿಸುತ್ತಿದೆ.
ಸಿಲಿಕಾನ್ ಸಿಟಿಯ ಹೊಭಾಗಗಳಲ್ಲಿ ಹೊಸ ಕೈಗಾರಿಕಾ ಲೇಔಟ್‌ಗಳನ್ನು ಸ್ಥಾಪಿಸುವ ಈ ಕ್ರಮವು ಬೆಂಗಳೂರಿನ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಹೆಚ್ಚುತ್ತಿರುವ ಲೇಔಟ್‌ಗಳ ಬೇಡಿಕೆಗಳಿಗೆ ಸಹಾಯ ಮಾಡುತ್ತದೆ ಎಂದು ಕೆಐಎಡಿಬಿ ಅಧಿಕಾರಿಗಳು ಹೇಳಿದ್ದಾರೆ.

"ಕಳೆದ ಕೆಲವು ವರ್ಷಗಳ ಮಾರುಕಟ್ಟೆಯ ಬೇಡಿಕೆಯನ್ನು ವಿಶ್ಲೇಷಿಸಿದ್ದೇವೆ ಮತ್ತು ಕೈಗಾರಿಕಾ ಲೇಔಟ್‌ಗಳನ್ನು ಸ್ಥಾಪಿಸಲು ಹಲವು ಸ್ಥಳಗಳನ್ನು ಈಗಾಗಲೇ ಗುರುತಿಸಿದ್ದೇವೆ. ಕೆಲವು ಪ್ರದೇಶಗಳನ್ನು ಈಗಾಗಲೇ ಸ್ವಾಧೀನಪಡಿಸಿಕೊಂಡಿದ್ದರೆ, ಕೆಲವನ್ನು ಇತ್ತೀಚೆಗೆ ಆಯ್ಕೆ ಮಾಡಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಬೆಂಗಳೂರು ಸ್ಯಾಚುರೇಟೆಡ್ ಆಗಿದ್ದು, ಜನರು ಹೊರಹೋಗುವ ಅವಶ್ಯಕತೆಯಿದೆ ಎಂದು ಕೆಐಎಡಿಬಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್ ಆರ್ ಮಾಹಿತಿ ನೀಡಿದ್ದಾರೆ.
ಹೊಸದಾಗಿ ಬೆಂಗಳೂರಿನ ಹೊರ ವಲಯಗಳಲ್ಲಿ ನಿರ್ಮಾಣವಾಗಲಿರುವ ಈ 15 ಹೊಸ ಕೈಗಾರಿಕಾ ಲೇಔಟ್‌ಗಳು ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ, ಹಾಸನ ಮತ್ತು ಯಾದಗಿರಿ ಸುತ್ತಮುತ್ತ ನಿರ್ಮಾಣವಾಗುವ ನಿರೀಕ್ಷೆಯಿದೆ. ಇದರಿಂದ ಬೆಂಗಳೂರಿನ ಜನದಟ್ಟಣೆ ಕೊಂಡ ಮಟ್ಟಿಗೆ ಕಡಿಮೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಇನ್ನು ಅಧಿಕೃತ ಆದೇಶಶ ಬರಬೇಕಿದೆ.
ಕೆಐಎಡಿಬಿ ಹೊಸ ಕೈಗಾರಿಕಾ ಲೇಔಟ್‌ಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತಲೇ ಇದ್ದರೂ, ಮಂಡಳಿಯು ಅಭಿವೃದ್ಧಿಪಡಿಸಿದ ವಿವಿಧ ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸ ಮಾಡುವ ಕೈಗಾರಿಕೋದ್ಯಮಿಗಳು ಮೂಲಸೌಕರ್ಯಗಳ ಕೊರತೆಯನ್ನು ಎತ್ತಿ ತೋರಿಸಿದ್ದಾರೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಲೇಔಟ್‌ಗಳ ವಿಸ್ತರಣೆಗಿಂತ ಉತ್ತಮ ಸೌಲಭ್ಯಗಳನ್ನು ಒದಗಿಸುವತ್ತ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.

"ಕೆಟ್ಟ ರಸ್ತೆಗಳಿಂದ ಹಿಡಿದು ನೀರಿನ ಚರಂಡಿಗಳ (SWD) ಕೊರತೆಯಿಂದ ಕಳಪೆ ತ್ಯಾಜ್ಯ ನಿರ್ವಹಣೆಯವರೆಗೆ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಹೆಚ್ಚಿನ ಕೈಗಾರಿಕಾ ಪ್ರದೇಶಗಳು ಮೂಲಭೂತ ಮೂಲಸೌಕರ್ಯಗಳನ್ನು ಹೊಂದಿಲ್ಲ. ಹಲವು ಪ್ರದೇಶಗಳಲ್ಲಿ ಕೈಗಾರಿಕೆಗಳು ಸಂಘಗಳನ್ನು ರಚಿಸಿಕೊಂಡು ಸ್ವಂತ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿವೆ. ಕೆಐಎಡಿಬಿ ಮೂಲಸೌಕರ್ಯ ಒದಗಿಸುವತ್ತ ಗಮನಹರಿಸಬೇಕು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಫ್‌ಕೆಸಿಸಿಐ) ಅಧ್ಯಕ್ಷ ಬಿ ವಿ ಗೋಪಾಲ್ ರೆಡ್ಡಿ ಒತ್ತಾಯಿಸಿದ್ದಾರೆ.
ಈ ಪ್ರದೇಶಗಳಲ್ಲಿನ ಕೈಗಾರಿಕೋದ್ಯಮಿಗಳ ಸಂಕಷ್ಟವನ್ನು ವಿವರಿಸಿದ ವೈಟ್‌ಫೀಲ್ಡ್ ಎಕ್ಸ್‌ಪೋರ್ಟ್ ಪ್ರಮೋಷನ್ ಪಾರ್ಕ್ ಇಂಡಸ್ಟ್ರಿಯಲ್ ಅಸೋಸಿಯೇಷನ್ (ಡಬ್ಲ್ಯುಇಪಿಪಿಐಎ) ಆರ್ ಉಮಾ ಶಂಕರ್, ಈ ಪ್ರದೇಶದಲ್ಲಿನ ಕೈಗಾರಿಕೆಗಳಿಗೆ ನಿಯಮಿತವಾಗಿ ನೀರು ಸರಬರಾಜು ಕೂಡ ಇಲ್ಲ ಎಂದು ತಮ್ಮ ಅಸಮಾಧಾನ ಹಂಚಿಕೊಂಡಿದ್ದಾರೆ.
ಕೆಐಎಡಿಬಿ ಹೆಚ್ಚುವರಿ ಅಭಿವೃದ್ಧಿ ಶುಲ್ಕವನ್ನು ವಿಧಿಸುತ್ತದೆ ಎಂದು ಬಿ ವಿ ಗೋಪಾಲ್ ರೆಡ್ಡಿ ಹೇಳಿದ್ದಾರೆ. ಇದು ಕೈಗಾರಿಕೋದ್ಯಮಿಗಳನ್ನು ನಿರಾಸೆಗೆ ತಳ್ಳುತ್ತದೆ. "ಭೂಮಿಯನ್ನು ಮೊದಲು ಅದರ ಮೌಲ್ಯಕ್ಕೆ ಸರಿಯಾಗಿ ಹಂಚಲಾಗುತ್ತದೆ ಮತ್ತು ನಂತರ, ವರ್ಷಗಳಲ್ಲಿ, ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಸೌಲಭ್ಯಗಳನ್ನು ಒದಗಿಸಿದ ನಂತರ, ಅವರು ಹೆಚ್ಚುವರಿ ಅಭಿವೃದ್ಧಿ ಶುಲ್ಕವನ್ನು ವಿಧಿಸುತ್ತಾರೆ, ಅದು ಸಾಕಷ್ಟು ಹೆಚ್ಚಾಗಿರುತ್ತೆ. ಬ್ಯಾಂಕ್ ಸಾಲದಲ್ಲಿ ಭೂಮಿ ತೆಗೆದುಕೊಳ್ಳುವವರು ಇಂತಹ ಶುಲ್ಕಗಳಿಂದ ಬಳಲುತ್ತಿದ್ದಾರೆ ಎಂದು ಬಿ ವಿ ಗೋಪಾಲ್ ರೆಡ್ಡಿ ವಿವರಿಸಿದ್ದಾರೆ.
(ಮಾಹಿತಿ ಕೃಪೆ: ಡಿಕ್ಕನ್ ಹೆರಾಲ್ಡ್)












Click it and Unblock the Notifications