ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಕೇರಳ ಪ್ರವಾಸೋದ್ಯಮ ಪ್ರಚಾರ ಅಭಿಯಾನ

|
Google Oneindia Kannada News

ಬೆಂಗಳೂರು, ಮಾರ್ಚ್ 03, 2020: ಸ್ಥಳೀಯ ಮಾರ್ಕೆಟಿಂಗ್ ಅಭಿಯಾನಗಳ ಮೊದಲ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಕೇರಳ ಟೂರಿಸಂ ತನ್ನ ದ್ವಿತೀಯ ಹಂತಕ್ಕೆ ಚಾಲನೆ ನೀಡಿದ್ದು ಭಾರತದ ಹತ್ತು ನಗರಗಳಲ್ಲಿ ಪಾಲುದಾರಿಕೆಯ ಸಭೆಗಳನ್ನು ಆಯೋಜಿಸಲಿದೆ, ಭಾರತದಾದ್ಯಂತ ಹಲವಾರು ಪ್ರವಾಸೋದ್ಯಮ ವ್ಯಾಪಾರ ಮೇಳಗಳಲ್ಲಿ ಭಾಗವಹಿಸಿ ರಾಜ್ಯದ ಸಾಂಪ್ರದಾಯಿಕ ಕಲಾ ಮಾದರಿಗಳು ಹಾಗೂ ಆಕರ್ಷಕ ಉತ್ಪನ್ನಗಳನ್ನು ಪ್ರವಾಸಿಗರಿಗೆ ಮೆಚ್ಚುಗೆಯಾಗುವಂತೆ ಪ್ರದರ್ಶಿಸಲಿದೆ.

ಈ ರಾಷ್ಟ್ರೀಯ ಸಹಯೋಗಗಳ ದ್ವಿತೀಯ ಹಂತ ಜನವರಿ 2020ರಲ್ಲಿ ಪ್ರಾರಂಭವಾಯಿತು ಮತ್ತು ಮಾರ್ಚ್ 2020ರವರೆಗೆ ನಡೆಯಲಿದೆ. ಹೈದರಾಬಾದ್, ವಿಶಾಖಪಟ್ಟಣ, ಕೊಲ್ಕತಾ ಮತ್ತು ಗೌಹಾಟಿಗಳಲ್ಲಿ ಈ ಜನವರಿ ತಿಂಗಳಲ್ಲಿ ಗಮನಾರ್ಹ ಭಾಗವಹಿಸುವಿಕೆಯ ನಂತರ ಅಮೃತಸರ, ಚಂಡೀಗಢ, ದೆಹಲಿ ಮತ್ತು ಜೈಪುರಗಳಲ್ಲಿ ಫೆಬ್ರವರಿ ತಿಂಗಳಲ್ಲಿ ಭಾಗವಹಿಸಲಿದ್ದು ಕೇರಳ ಟೂರಿಸಂ ಅಧಿಕಾರಿಗಳು ಈಗ ಬೆಂಗಳೂರಿನಲ್ಲಿರಲು ಬಹಳ ಸಂತೋಷಗೊಂಡಿದ್ದಾರೆ ಮತ್ತು ಚೆನ್ನೈನಲ್ಲಿ(ಮಾರ್ಚ್ 05, 2020) ನಂತರ ಈ ಸಹಯೋಗದ ಸಭೆ ನಡೆಯಲಿರುವುದನ್ನು ಎದುರು ನೋಡುತ್ತಿದ್ದಾರೆ.

ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್, ಈ ಸಭೆಗಳು ಮುಂದಿನ ಹಬ್ಬದ ಋತುವಿನೊಂದಿಗೆ ಹೊಂದಿಕೊಂಡಿದ್ದು ಈ ನಗರಗಳಲ್ಲಿ ಪ್ರವಾಸೋದ್ಯಮ ವಹಿವಾಟಿಗೆ ಅವಕಾಶಗಳನ್ನು ಸೃಷ್ಟಿಸಲಿದ್ದು ಕೇರಳದ ಪ್ರವಾಸೋದ್ಯಮ ಸಂಸ್ಥೆಗಳೊಂದಿಗೆ ಸಂವಹ ನಡೆಸಲು ಅವಕಾಶ ಕಲ್ಪಿಸುತ್ತವೆ. ಕೇರಳದಲ್ಲಿ 2019ರಲ್ಲಿ ಸ್ಥಳೀಯ ಪ್ರವಾಸಿಗರ ಸಂಖ್ಯೆ ಹಿಂದಿನ ವರ್ಷಕ್ಕಿಂತ ಹೆಚ್ಚಾಗಿದೆ.

ಕೇರಳ ಟ್ರಾವೆಲ್ ಮಾರ್ಟ್

ಕೇರಳ ಟ್ರಾವೆಲ್ ಮಾರ್ಟ್

ಕೇರಳ ಟ್ರಾವೆಲ್ ಮಾರ್ಟ್(ಕೆಟಿಎಂ)ನ 11ನೇ ಆವೃತ್ತಿ ಸೆಪ್ಟೆಂಬರ್ 24, 2020ರಂದು ಪ್ರಾರಂಭಗೊಳ್ಳಲಿದೆ ಎಂದು ಪ್ರಕಟಿಸಿದರು. ಈ ಕಾರ್ಯಕ್ರಮ ವಿಲ್ಲಿಂಗ್ಡನ್ ದ್ವೀಪದ ಕೊಚ್ಚಿನ್ ಪೋರ್ಟ್ ಟ್ರಸ್ಟ್‍ನ ಸಾಗರ ಮತ್ತು ಸಮುದ್ರಿಕಾ ಕನ್ವೆನ್ಷನ್ ಸೆಂಟರ್‍ಗಳಲ್ಲಿ 25-27ರಂದು ನಡೆಯಲಿದೆ. ಇದು ಜಾಗತಿಕ ಕೊಳ್ಳುಗರು, ಚಾಂಪಿಯನ್ಸ್ ಬೋಟ್ ಲೀಗ್(ಸಿಬಿಎಲ್)ಗೆ ಹೊಸ ಮಾರುಕಟ್ಟೆಗಳ ಆವಿಷ್ಕಾರ, ಸಾಹಸ ಪ್ರವಾಸೋದ್ಯಮ ಮತ್ತು ಸಭೆಗಳು, ಪ್ರೋತ್ಸಾಹಕಗಳು, ಸಮ್ಮೇಳನಗಳು ಮತ್ತು ಪ್ರದರ್ಶನ(ಎಂಐಸಿಇ)ಗಳಿಗೆ ಗಮನ ನೀಡಲಿದೆ.

ಪ್ರವಾಸೋದ್ಯಮ ಕಾರ್ಯದರ್ಶಿ ಶ್ರೀಮತಿ ರಾಣಿ

ಪ್ರವಾಸೋದ್ಯಮ ಕಾರ್ಯದರ್ಶಿ ಶ್ರೀಮತಿ ರಾಣಿ

ಪ್ರವಾಸೋದ್ಯಮ ಕಾರ್ಯದರ್ಶಿ ಶ್ರೀಮತಿ ರಾಣಿ ಜಾರ್ಜ್ ಸ್ಥಳೀಯ ಪ್ರವಾಸಿಗರ ಸಂಖ್ಯೆಯ ಹೆಚ್ಚಳವು ಶಕ್ತಿಯುತ ಉತ್ತೇಜಕಾರಕ ಅಭಿಯಾನಗಳು ಜನರೊಂದಿಗೆ ತಕ್ಷಣಕ್ಕೆ ಸಂಪರ್ಕಿಸುತ್ತವೆ ಎನ್ನುವುದರ ಮರು ದೃಢೀಕರಣವಾಗಿದೆ. "ಭಾರತದ ಮೂಲೆ ಮೂಲೆಯ ಪ್ರವಾಸಿಗರು ಈ ರಾಜ್ಯವು ಶ್ರೀಮಂತ ಪರಂಪರೆ ಮಾತ್ರವಲ್ಲದೆ ಆಕರ್ಷಕ ಅಲ್ಲದೆ ಅದರಲ್ಲಿಯೂ ವಿಶು, ತ್ರಿಶೂರ್ ಪೂರಂ ಮತ್ತು ಇತರೆ ಹಬ್ಬಗಳು ಸರತಿಯಲ್ಲಿದ್ದು ಸ್ವಾಗತಿಸುವ ತಾಣವಾಗಿದೆ ಎಂದು ಕಂಡುಕೊಂಡಿದ್ದಾರೆ" ಎಂದರು.

ಕೇರಳ ಆಯೋಜಿಸುವ ನಿಶಾಗಂಧಿ ಉತ್ಸವ, ಜನವರಿ 20ರಿಂದ 26ರವರೆಗೆ ತಿರುವನಂತಪುರಂನ ಹೃದಯ ಭಾಗದಲ್ಲಿರುವ ಹಚ್ಚ ಹಸಿರಿನ ಕನಕಕ್ಕುನ್ನು ಅರಮನೆಯ ನಿಶಾಗಂಧಿ ಸಭಾಂಗಣದಲ್ಲಿ ಏಳು ದಿನಗಳ ಸಾಂಸ್ಕೃತಿಕ ಉತ್ಸವವಾಗಿದೆ.

ಒಡಿಸ್ಸಿ, ಕಥಕ್, ಭರತನಾಟ್ಯಂ ಪ್ರದರ್ಶನ

ಒಡಿಸ್ಸಿ, ಕಥಕ್, ಭರತನಾಟ್ಯಂ ಪ್ರದರ್ಶನ

ಶ್ರೀಮತಿ ಜಾರ್ಜ್, "ಕಲಾಪ್ರೇಮಿಗಳಿಗೆ ಭಾರತದಿಂದ ಉತ್ತಮ ಹಾಗೂ ಉದಯೋನ್ಮುಖ ಪ್ರತಿಭೆಗಳನ್ನು ಕಾಣಲು ಮತ್ತು ಶ್ರೇಷ್ಠರ ಮಾಂತ್ರಿಕ ಪ್ರದರ್ಶನಗಳನ್ನು ಕಾಣಲು ಅತ್ಯುತ್ತಮ ಸಂದರ್ಭವಾಗಿದೆ. ಒಡಿಸ್ಸಿ, ಕಥಕ್, ಭರತನಾಟ್ಯಂ ಮಣಿಪುರಿ, ಮೋಹಿನಿಯಾಟ್ಟಂ, ಛೌ ಮತ್ತು ಕೂಚಿಪುಡಿಗಳು ಈ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಕೆಲ ನೃತ್ಯ ಪ್ರಕಾರಗಳು" ಎಂದರು.

ಪ್ರವಾಸೋದ್ಯಮ ನಿರ್ದೇಶಕ ಪಿ.ಬಾಲ ಕಿರಣ್, ಕೇರಳ ಸ್ಥಳೀಯ ಪ್ರವಾಸಿಗರಿಗೆ ಸೂಕ್ತವಾಗುವ ಹಲವು ಉತ್ಪನ್ನಗಳು ಮತ್ತು ಅನುಭವಗಳನ್ನು ಸೇರ್ಪಡೆ ಮಾಡಿದೆ ಮತ್ತು ರಾಜ್ಯವನ್ನು 365-ದಿನದ ತಾಣವಾಗಿಸಲಿದೆ ಎಂದರು.

ಜನಪ್ರಿಯ ಆಕರ್ಷಣೆ ಜಟಾಯು ಅರ್ಥ್ ಸೆಂಟರ್

ಜನಪ್ರಿಯ ಆಕರ್ಷಣೆ ಜಟಾಯು ಅರ್ಥ್ ಸೆಂಟರ್

ಮತ್ತೊಂದು ಜನಪ್ರಿಯ ಆಕರ್ಷಣೆ ಜಟಾಯು ಅರ್ಥ್ ಸೆಂಟರ್, ಇದರಲ್ಲಿ ಜಟಾಯುವಿನ ಬೃಹತ್ ಪ್ರತಿಮೆ ಇದ್ದು ಇದು 200 ಅಡಿ ಉದ್ದ ಮತ್ತು 150 ಅಡಿ ಅಗಲ ಮತ್ತು 70 ಅಡಿ ಎತ್ತರವಿದ್ದು ವಿಶ್ವದ ಅತ್ಯಂತ ದೊಡ್ಡ ಕಾರ್ಯ ನಿರ್ವಹಿಸುವ ಪಕ್ಷಿಯ ಶಿಲ್ಪವಾಗಿಸಿದೆ. ಈ ತಾಣವನ್ನು ಸುಲಭವಾಗಿ ತಲುಪಬಹುದಾಗಿದ್ದು ಇದು ದಕ್ಷಿಣ ಕೇರಳದ ಕೇಂದ್ರದಲ್ಲಿದೆ" ಎಂದರು.

ಪ್ರವಾಸೋದ್ಯಮವನ್ನು ಸುಸ್ಥಿರ ಉದ್ಯಮವನ್ನಾಗಿಸುವಲ್ಲಿ ರೆಸ್ಪಾನ್ಸಿಬಲ್ ಟೂರಿಸಂ ಮಿಷನ್ ವಿಲೇಜ್ ಲೈಫ್ ಎಕ್ಸ್ ಪೀರಿಯೆನ್ಸ್ ಪರಿಚಯಿಸಿದೆ. ಈ ಪ್ರತ್ಯೇಕವಾಗಿ ರೂಪಿಸಿದ ಅನುಭವಗಳಲ್ಲಿ ಬ್ಯಾಕ್‍ವಾಟರ್ ಕ್ರೂಸ್‍ಗಳು, ಶಾಂತ ದೋಣಿ ಪ್ರಯಾಣ, ಥ್ರಿಲ್ಲಿಂಗ್ ಆದ ಕ್ಯಾನೋ ಕ್ರೂಸ್ ಮತ್ತು ಹಚ್ಚ ಹಸಿರು ಹಾಗೂ ಭತ್ತದ ಗದ್ದೆಗಳಲ್ಲಿ ನಿಶ್ಯಬ್ದದ ನಡೆದಾಟ ಹೊಂದಿವೆ. ಕೊಟ್ಟಾಯಂ ಜಿಲ್ಲೆಯಲ್ಲಿರುವ ಪುಟ್ಟ ಪ್ರದೇಶ ಕುಮಾರಕೊಮ್, ಭಾರತದ ಮೊದಲ ಆರ್.ಟಿ. ತಾಣವಾಗಿದೆ. ಬರೀ ಪ್ರದೇಶಗಳನ್ನು ಭೇಟಿ ನೀಡುವುದಲ್ಲದೆ ಜನರು ಆರ್.ಟಿ.ಮಿಷನ್‍ನ ಅಂತಃಸ್ಸತ್ವವನ್ನು ದೇವರ ಸ್ವಂತ ನಾಡಲ್ಲಿ ಅನುಭವ ಪಡೆಯಬಹುದು.

ಜನಪ್ರಿಯ ಆಕರ್ಷಣೆ ಜಟಾಯು ಅರ್ಥ್ ಸೆಂಟರ್

ಜನಪ್ರಿಯ ಆಕರ್ಷಣೆ ಜಟಾಯು ಅರ್ಥ್ ಸೆಂಟರ್

25 ವಸ್ತು ಸಂಗ್ರಹಾಲಯ: ಮುಜಿರಿಸ್ ಹೆರಿಟೇಜ್ ಪ್ರಾಜೆಕ್ಟ್, ಇತಿಹಾಸ ಪ್ರಿಯರಿಗೆ ಪ್ರಾಚೀನ ಯುಗಕ್ಕೆ ಕೊಂಡೊಯ್ಯುವ ಭರವಸೆ ನೀಡುತ್ತಿದ್ದು ಇದು ಭಾರತದಲ್ಲಿ ಅತ್ಯಂತ ಗಮನಾರ್ಹ ಪರಂಪರೆಯ ಸಂರಕ್ಷಣೆಯ ಯೋಜನೆಯಾಗಿದೆ. ಕ್ರಿಸ್ತಪೂರ್ವ ಒಂದನೇ ಶತಮಾನದಲ್ಲಿ ಅರಬ್ಬರು, ರೋಮನ್ನರು, ಈಜಿಪ್ಷಿಯನ್ನರು ಭೇಟಿ ಕೊಡುತ್ತಿದ್ದ ಸದಾ ಚಟುವಟಿಕೆಯಿಂದ ಇದ್ದ ಬಂದರು ಪ್ರದೇಶದ ಇತಿಹಾಸವನ್ನು 25 ವಸ್ತು ಸಂಗ್ರಹಾಲಯಗಳಲ್ಲಿ ಸಂರಕ್ಷಿಸಲಾಗಿದೆ.

ಕೊಚ್ಚಿ-ಮುಜಿರಿಸ್ ಬೈಯೆನ್ನೇಲ್ ಕೊಚ್ಚಿ ಬೈಯೆನ್ನೇಲ್ ಫೌಂಡೇಷನ್‍ನ ಉಪಕ್ರಮವಾಗಿದ್ದು ಕೇರಳ ಸರ್ಕಾರದ ಬೆಂಬಲ ಪಡೆದಿದೆ. ಇದು ಭಾರತದ ಅತ್ಯಂತ ದೊಡ್ಡ ಕಲಾ ಪ್ರದರ್ಶನವಾಗಿದೆ ಮತ್ತು ಏಷ್ಯಾದ ಅತ್ಯಂತ ಗಮನಾರ್ಹ ಸಮಕಾಲೀನ ಕಲಾ ಉತ್ಸವವಾಗಿದ್ದು ಡಿಸೆಂಬರ್ 12, 2020ರಂದು ಪ್ರಾರಂಭವಾಗಿದೆ.

2000 ವರ್ಷ ಹಳೆಯ ಸಮುದ್ರದ ಸಂಪರ್ಕಗಳು ಹಾಗೂ 30 ದೇಶಗಳ ಸಾಂಸ್ಕೃತಿಕ ಹಾಗೂ ತಿನಿಸಿನ ಪರಂಪರೆಯನ್ನು ಮತ್ತೆ ತಂದಿರುವ ಸ್ಪೈಸ್ ರೂಟ್ ಪ್ರಾಜೆಕ್ಟ್ ಮತ್ತೊಂದು ಕೊಡುಗೆಯಾಗಿದೆ. ಇದರ ಪ್ರಮುಖ ಉದ್ದೇಶ ಸುಸ್ಥಿರವಾಗಿ ಆವಿಷ್ಕಾರಗೊಳ್ಳದ ತಾಣಗಳನ್ನು ಸ್ಥಳೀಯ ಸಮುದಾಯದ ಸಕ್ರಿಯ ತೊಡಗಿಕೊಳ್ಳುವಿಕೆಯೊಂದಿಗೆ ಅನ್ವೇಷಿಸುವುದಾಗಿದೆ.

ಉತ್ರಲಿಕವು ಪೂರಂ ಉತ್ಸವ

ಉತ್ರಲಿಕವು ಪೂರಂ ಉತ್ಸವ

ಉತ್ರಲಿಕವು ಪೂರಂ ಫೆಬ್ರವರಿಯಲ್ಲಿ ನಡೆಯುವ ಎಂಟು ದಿನಗಳ ಕೇರಳದ ಸಾಂಸ್ಕೃತಿಕ ರಾಜಧಾನಿ `ತ್ರಿಶೂರು'ನಲ್ಲಿ ನಡೆಯುವ ಸಂಭ್ರಮವಾಗಿದೆ. ಇದು ಸಾಂಪ್ರದಾಯಿಕ ಉಡುಗೆಯಲ್ಲಿ 21 ಆನೆಗಳು ರಾತ್ರಿ ಮತ್ತು ಹಗಲು ಮೆರವಣಿಗೆಯಿಂದ ಎಲ್ಲರನ್ನೂ ಸೆಳೆಯುತ್ತದೆ. ಪಂಚವಾದ್ಯಂ ಮತ್ತು ಪಂಡಿಮೇಳಂನ ಸಂಗೀತ ಈ ಮೆರವಣಿಗೆಗೆ ಲಯ ಒದಗಿಸುತ್ತವೆ. ಈ ಉತ್ಸವವು ಭೇಟಿ ನೀಡುವವರಿಗೆ ಕೇರಳದ ದೇವಾಲಯ ಮತ್ತು ಜಾನಪದ ಕಲಾ ಪ್ರಕಾರಗಳನ್ನು ಆನಂದಿಸಲು ಅವಕಾಶ ನೀಡುತ್ತವೆ.

ತ್ರಿಶೂರು ಪೂರಂ ಕೇರಳದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಅಂತಃಸ್ಸತ್ವವನ್ನು ಒಗ್ಗೂಡಿಸುವ ಅದ್ಭುತ ನೋಟವಾಗಿದ್ದು ಮೇ ತಿಂಗಳಲ್ಲಿ ಅಲಂಕಾರ ಮಾಡಿದ ಆನೆಗಳು, ಆಕರ್ಷಕ ಛತ್ರಿಗಳು ಮತ್ತು ತಾಳವಾದ್ಯಗಳೊಂದಿಗೆ ಅದ್ಧೂರಿಯಾಗಿ ಸಂಭ್ರಮಿಸಲಾಗುತ್ತದೆ.

ಇದು ಎಲ್ಲ ಪೂರಂಗಳ ತಾಯಿಯಾಗಿದ್ದು 10 ದೇವಾಲಯಗಳು ಭಾಗವಹಿಸುತ್ತವೆ(ಪರಮೆಕ್ಕವು, ತಿರುವಂಬಾಡಿ, ಕನಿಮಂಗಲಂ, ಕರಮುಕು, ಲಲೂರ್, ಚೂರಕೊಟ್ಟುಕರ, ಪನಮುಕ್ಕಂಪಲ್ಲಿ, ಅಯ್ಯನಹೊಳೆ, ಚೆಂಬಕ್ಕವು, ನೆಯ್ಥಿಕಲವು). ಮತ್ತೊಂದು ಮಹತ್ತರ ಆಕರ್ಷಣೆ ಇಳಂಜಿತಾರಾ ಮೇಳಂ ಇದು ಸಾಂಪ್ರದಾಯಿಕ ಸಾಧನಗಳಾದ ಚೆಂಡ, ಕುರುಂಕುಳಲ್, ಕೊಂಬು ಮತ್ತು ಎಲಥಲಂ ಒಳಗೊಂಡ ಸಾಂಪ್ರದಾಯಿಕ ಸಾಧನಗಳ ಸಂಗೀತ ಕಾರ್ಯಕ್ರಮದಲ್ಲಿ 250ಕ್ಕೂ ಹೆಚ್ಚು ಕಲಾವಿದರು ಭಾಗವಹಿಸುತ್ತಾರೆ. ಫೈನಲ್ ಅನ್ನು ಅದ್ಧೂರಿಯಾದ ಬಾಣ ಬಿರುಸುಗಳೊಂದಿಗೆ ಆಚರಿಸಲಾಗುತ್ತದೆ.

English summary
Kerala Tourism kicked-off the second phase in all earnestness, with a string of Partnership Meets being organized in Ten Indian Cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X