ಉತ್ತಮ ಆಡಳಿತ ಕರ್ನಾಟಕ ನಂ.4: ಪಬ್ಲಿಕ್‌ ಅಫೇರ್ಸ್‌ ಸೆಂಟರ್‌ ವರದಿ

ಬೆಂಗಳೂರು, ಜು.23: ಉತ್ತಮ ಆಡಳಿತ ನೀಡುತ್ತಿರುವ ರಾಜ್ಯಗಳ ಪಟ್ಟಿಯೊಂದನ್ನು ಬೆಂಗಳೂರು ಮೂಲದ ಪಬ್ಲಿಕ್‌ ಅಫೇರ್ಸ್‌ ಸೆಂಟರ್‌ ಬಿಡುಗಡೆ ಮಾಡಿದೆ.

ಈ ವರದಿ ಪ್ರಕಾರ ಕರ್ನಾಟಕವು 4 ನೇ ಸ್ಥಾನದಲ್ಲಿದೆ, 2017ರಲ್ಲಿ 5 ನೇ ಸ್ಥಾನವನ್ನು ಪಡೆದಿತ್ತು, ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕ 2018ರಲ್ಲಿ ಉತ್ತಮ ಆಡಳಿತ ವಿಭಾಗದಲ್ಲಿ ಕರ್ನಾಟಕಕ್ಕೆ ನಾಲ್ಕನೇ ಸ್ಥಾನ ಲಭಿಸಿದೆ. ರಾಜ್ಯಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಮಾನದಂಡವಾಗಿ ಇರಿಸಿಕೊಂಡು ಈ ಸಮೀಕ್ಷೆ ಕೈಗೊಳ್ಳಲಾಗಿದೆ.

ಇನ್ನು ಸಿಪಿಎಂ ಆಡಳಿತ ಕೇರಳ ಸರ್ಕಾರವು ಉತ್ತಮ ಆಡಳಿತದಲ್ಲಿ ಮೊದಲ ಸ್ಥಾನ ಪಡೆದ ಕೀರ್ತಿಗೆ ಪಾತ್ರವಾಗಿದೆ. ತಮಿಳುನಾಡು ದ್ವಿತೀಯ, ತೆಲಂಗಾಣ ತೃತೀಯ ಹಾಗೂ ಗುಜರಾತ್‌ ಐದನೇ ಸ್ಥಾನ ಪಡೆದಿದೆ. ಇದೇ ವೇಳೆ ಬಿಜೆಪಿ ಅಳ್ವಿಕೆಯ ಮಧ್ಯಪ್ರದೇಶ, ಜಾರ್ಖಂಡ ಹಾಗೂ ಬಿಹಾರಗಳು ಕಳಪೆ ಸಾಧನೆ ಪ್ರದರ್ಶಿಸಿದ್ದು, ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ.

Kerala tops in governance, Karnataka fourth: Report

2016ರನೇ ಇಸವಿಯಿಂದಲೇ ಪಬ್ಲಿಕ್‌ ಅಫೇರ್ಸ್‌ ಸೆಂಟರ್‌, ಈ ಸ್ಥಾನಮಾನಗಳನ್ನು ಹಂಚಿಕೆ ಮಾಡುತ್ತಿದೆ. ಸಣ್ಣ ರಾಜ್ಯ- ಹಿಮಾಚಲ ನಂಬರ್‌ 1: ಇನ್ನು ಉತ್ತಮ ಆಡಳಿತದ ಸಣ್ಣ ರಾಜ್ಯಗಳನ್ನು ಪ್ರತ್ಯೇಕವಾಗಿ ಸಮೀಕ್ಷೆಗೆ ಒಳಡಪಿಸಲಾಗಿದೆ. ಹಿಮಾಚಲ ಪ್ರದೇಶ , ಗೋವಾ, ಮಿಜೋರಂ, ಸಿಕ್ಕಿಂ ಹಾಗೂ ತ್ರಿಪುರಾ ಟಾಪ್‌ 5 ರಾಜ್ಯಗಳಾಗಿ ಹೊರಹೊಮ್ಮಿದೆ. ನಾಗಾಲ್ಯಾಂಡ್‌ ಮಣಿಪುರ ಹಾಗೂ ಮೇಘಾಲಯ ಕಟ್ಟ ಕಡೆಯ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+