ಕೆಂಪೇಗೌಡ ಬಡಾವಣೆ: ನಿವೇಶನ ಹಂಚಿಕೆ ಪ್ರಕ್ರಿಯೆ ಮತ್ತಷ್ಟು ವಿಳಂಬ
ಬೆಂಗಳೂರು, ಜೂನ್ 4: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಂಪೇಗೌಡ ಬಡಾವಣೆ ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ವಿಳಂಬವಾಗಿತ್ತು. ಇದೀಗ ಪ್ರಕ್ರಿಯೆ ಮತ್ತಷಚ್ಟು ವಿಳಭವಾಗುತ್ತಿದ್ದು, ನಾಗರಿಕರು ಮತ್ತಷ್ಟು ದಿನ ಕಾಯುವಂತಾಗಿದೆ.
ವಿಧಾನಸಭೆ ಫಲಿತಾಂಶದ ಬಳಿಕ ಮೇ ತಿಂಗಳಾಂತ್ಯಕ್ಕೆ ಬಿಡುಗಡೆ ಮಾಡುವ ಭರವಸೆ ದೊರೆತಿದ್ದರೂ, ಈಗ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಕಾರಣಕ್ಕೆ ಮುಂದೂಡಲಾಗಿದೆ.
ಆರ್‌ಆರ್ ನಗರ ಹಾಗೂ ಜಯನಗರ ಕ್ಷೇತ್ರದ ಚುನಾವಣೆ ಕಾರಣ ನೀತಿ ಸಂಹಿತೆ ಅನ್ವಯ ಕುರಿತು ಪ್ರಾಧಿಕಾರವು ಚುನಾವಣಾ ಆಯೋಗದ ಮೊರೆ ಹೋಗಿತ್ತು. ಇದಕ್ಕೆ ಯಾವುದೇ ಸಮಜಾಯಿಷಿ ಬಾರದ ಕಾರಣ ಬಿಡಿಎ ಆಯ್ಕೆ ಪಟ್ಟಿ ಪ್ರಕಟಿಸಲು ಹಿಂದೇಟು ಹಾಕುವಂತಾಗಿದೆ. ಇನ್ನೊಂದೆಡೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರೂ, ಸಚಿವರ ಪ್ರಮಾಣ ಹಾಗೂ ಖಾತೆ ಹಂಚಿಕೆಯಾಗಿಲ್ಲ. ಜೂ.6ರಂದು ನೂತನ ಮಂತ್ರಿಗಳು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಆ ಬಳಿಕ ಬೆಂಗಳೂರು ನಗರಾಭಿವೃದ್ಧಿ ಸಚಿವರು ಇಲಾಖೆ ಪರಾಮರ್ಶೆ ಕೈಗೊಳ್ಳುವ ವೇಳೆ ಬಿಡಿಎ ಯೋಜನೆಗಳಿಗೆ ಚಾಲನೆ ದೊರೆಯಲಿದೆ ಎಂದು ಎನ್ನಲಾಗಿದೆ. ಇನ್ನು ಒಂದು ತಿಂಗಳ ಕಾಲ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಪ್ರಕ್ರಿಯೆ ನಡೆಯುವುದಿಲ್ಲ ಎಂದು ಎನ್ನುಲಾಗಿದೆ.












Click it and Unblock the Notifications