ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 14 ವರ್ಷದಲ್ಲಿ 25 ಕೋಟಿ ಪ್ರಯಾಣಿಕರು
ಬೆಂಗಳೂರು, ಜೂ. 30: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಆರಂಭವಾದ ವರ್ಷ 2008ರಿಂದ 2022ರ ಜೂನ್ ಕೊನೆಯ ವಾರಾಂತ್ಯದ ವೇಳೆಗೆ ಒಟ್ಟು 250 ಮಿಲಿಯನ್ (25 ಕೋಟಿ) ಪ್ರಯಾಣಿಕರಿಗೆ ಸೇವೆ ನೀಡಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣ (ಕೆಐಎಎಲ್)ದಿಂದ ಕಳೆದ 14ವರ್ಷದಲ್ಲಿ ಎರಡು ಮಿಲಿಯನ್ ನಷ್ಟು ವಾಯ ಸಂಚಾರ (ವಿಮಾನ ಹಾರಾಟ) ಆಗಿದ್ದು, ಇದರಡಿ ಪ್ರಯಾಣಿಸಿದವರ ಸಂಖ್ಯೆ ಒಟ್ಟು 25 ಕೋಟಿ ಆಗಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಜತೆಯಾಗಿ ಅತ್ಯಧಿಕ ಪ್ರಯಾಣಿಕರಿಗೆ ಸೇವೆ ನೀಡಿರುವ ದಕ್ಷಿಣ ಭಾರತದಲ್ಲೇ ಅತಿ ವೇಗವಾಗಿ ಸಾಧನೆ ಮಾಡಿದ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಕೆಐಎಎಲ್ ಪಾತ್ರವಾಗಿದೆ.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣದಿಂದ ಇತರೆಡೆಗೆ ಹೊಸ ಮಾರ್ಗಗಳ ಸೇರ್ಪಡೆ ಮಾಡಲಾಗಿದೆ. ಈಗಾಗಲೇ ಅಸ್ಥಿತ್ವದಲ್ಲಿರುವ ಮಾರ್ಗಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಈ ಕಾರಣದಿಂದ ವೇಗವಾಗಿ ಇಷ್ಟೊಂದು ಪ್ರಮಾಣದ ಪ್ರಯಾಣಿಕರಿಗೆ ಸೇವೆ ಕಲ್ಪಿಸಲು ಸಾಧ್ಯವಾಗಿದೆ ಎಂದು ಕೆಐಎ ಮೂಲಗಳು ತಿಳಿಸಿವೆ.

14ವರ್ಷದ ಹಿಂದೆ ಆರಂಭ
ಬೆಂಗಳೂರು ಹೃದಯ ಭಾಗದಿಂದ ಅಂದಾಜು 30ಕಿ.ಮೀ. ದೂರದಲ್ಲಿರುವ ದೇವನಹಳ್ಳಿಯಲ್ಲಿ 2018ರ ಮೇ 23 ರಾಜ್ಯದ ಮೊದಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಕೆಐಎಲ್ ತನ್ನ ಸೇವೆ ಆರಂಭಿಸಿತು. ಇದಾದ ಬಳಿಕ ವಿಮಾನ ನಿಲ್ದಾಣಕ್ಕೆ ಮತ್ತು ಬೆಂಗಳೂರಿನ ಮೆಜೆಸ್ಟಿಕ್ ಹಾಗೂ ಇನ್ನಿತರ ಭಾಗಗಳಲ್ಲಿ ಬಿಎಂಟಿಸಿ, ಹವಾ ನಿಯಂತ್ರಿತ ಬಸ್‌ಗಳು ಸಹ ಓಡಾಡಲು ಆರಂಭಿಸಿದವು. ಈಗಲೂ ಹತ್ತು ನಿಮಿಷಕ್ಕೆ ಒಂದರಂತೆ ಬಸ್‌ಗಳು ಏರ್ಪೋರ್ಟ್ ಗೆ ಸಂಚರಿಸುತ್ತವೆ. ಆ ಮಟ್ಟಿನಲ್ಲಿ ಪ್ರಯಾಣಿಕರು ಕೆಐಎ ಸೇವೆ ಪಡೆಯುತ್ತಿವೆ ಎನ್ನಬಹುದು.

ನಿಧಾನ ಕಾಲದಲ್ಲೂ ವೇಗದ ಸಾಧನೆ:
ಭಾರತ ಮತ್ತು ರಾಜ್ಯ ರಾಜಧಾನಿ ಬೆಂಗಳೂರಿಗೆ ಕೋವಿಡ್ ಒಕ್ಕರಿಸದ ಬಳಿಕ ಕೆಲವು ದಿನ ಅಂತಾರಾಷ್ಟ್ರೀಯ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಕೋವಿಡ್ ಪಿಡುಗಿನ ನಿಧಾನಗತಿಯ ಅವಧಿಯಲ್ಲಿ ಸಹ ಸುಮಾರು ಕೋಟಿಗಟ್ಟಲೆ ಜನರು ವಿಮಾನಯಾನ ಮಾಡಿದ್ದಾರೆ.
ಹೀಗೆ ನಿಧಾನಗತಿಯಲ್ಲಿ ಕೆಐಎ ಸಾಗಿದರೂ ಐತಿಹಾಸಿಕ ದಾಖಲೆ ಬರೆದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣ ವೇಗವಾಗಿ ಬೆಳೆಯುತ್ತಿದೆ ಎನ್ನುವುದಕ್ಕೆ ಇದೆ ಸಾಕ್ಷಿಯಾಗಿದೆ. 2018ರ ಒಂದು ವರ್ಷದಲ್ಲಿ 3.23 ಕೋಟಿ ಹಾಗೂ 2019ರಲ್ಲಿ 3.36 ಕೋಟಿ ಪ್ರಯಾಣಿಕರಿಗೆ ಕೆಐಎ ತನ್ನ ಸೇವೆ ನೀಡಿತ್ತು.

ಎಕ್ಸಪ್ರೆಸ್ ಕಾರ್ಗೋ ಟರ್ಮಿನಲ್ ಪರಿಚಯ:
ಖಾಸಗಿ ವಿಮಾನ ನಿಲ್ದಾಣ ಆಯೋಜಕರಿಗೆ ವಾರ್ಷಿಕ ಶೇ.25ರಷ್ಟು ಸರಕು ನಿರ್ವಹಿಸಲು ನೆರವಾಗುವಂತೆ ಪ್ರಥಮ ಭಾರಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣದಲ್ಲಿ ಮೀಸಲಾದ ಎಕ್ಸಪ್ರೆಸ್ ಕಾರ್ಗೋ ಟರ್ಮಿನಲ್ ಪರಿಚಯಿಸಲಾಯಿತು. ಇದು ಖಾಸಗಿ ವಿಮಾನ ನಿಲ್ದಾಣ ಆಯೋಜಕರನ್ನು ಸೆಳೆಯುವಲ್ಲಿ ಸಫಲವಾಯಿತು. ಇದರ ಜತೆಗೆ ತನ್ನದೇ ಉತ್ತಮ ಸೇವೆಗಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೂ ಕೆಐಎ ಪಾತ್ರವಾಗಿದೆ.

ಕೋರಿಯರ್ ಸೇವೆ, ಸರಕು ಸಾಗಾಣೆ ವೇಗ ಹೆಚ್ಚಳ
ಏರ್ಪೋರ್ಟ್ ಆಯೋಜಕರಾದ ಬಿಐಎಎಲ್ ಸಂಸ್ಥೆಯು ಎರಡು ಲಕ್ಷ ಚದರ ಅಡಿಯಲ್ಲಿ ಎಕ್ಸಪ್ರೆಸ್ ಕೊರಿಯರ್ ಸಂಸ್ಥೆಗಳಾದ ಡಿಎಚ್ಎಲ್ ಎಕ್ಸಪ್ರೆಸ್ ಮತ್ತು ಫೆಡ್ ಎಕ್ಸ್ ಅನ್ನು ಅಭಿವೃದ್ಧಿ ಪಡಿಸಲಿದೆ. ಎಕ್ಸಪ್ರೆಸ್ ಇಂಡಸ್ಟ್ರಿ ಕೌನ್ಸಿಲ್ ಆಫ್ ಇಂಡಿಯಾವು ಕೊರಿಯರ್ ಕಂಪನಿಗಳಿಗೆ ಈಗಾಗಲೇ ಸದೃಢ ಸೇವೆ ಒದಗಿಸುತ್ತಿದೆ. ಕೋರಿಯರ್ ಸಾಮಾನ್ಯ ಬಳಕೆದಾರರ ಎಕ್ಸಪ್ರೆಸ್ ಟರ್ಮಿನಲ್ ಅನ್ನು ನಿರ್ವಹಿಸುತ್ತಿದೆ. ರಾಜಧಾನಿಯಲ್ಲಿ ಈ ಸಂಸ್ಥೆ ಇಕಾಮರ್ಸ್‌ಗೆ ಉತ್ತೇಜನ ನೀಡುತ್ತಿದೆ.
ಮುಖ್ಯವಾಗಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇತ್ತೀಚೆಗೆ ತನ್ನ ಸರಕು ಸಾಗಾಣಿಕೆ ವ್ಯವಸ್ಥೆಯ ವೇಗ ಹೆಚ್ಚಿಸಿಕೊಂಡಿದೆ. ಹೀಗಾಗಿಯೇ ಏರ್ಪೋರ್ಟ್ ಅನ್ನು ಭಾರತದ ಸರಕು ಸಾಗಾಣೆಯಲ್ಲಿ ಭಾರತದ ಮೊದಲ ಮೆಟ್ರೋ ನಿಲ್ದಾಣ ಎಂದು ಕರೆಯಲಾಗುತ್ತದೆ ಎಂದು ತಿಳಿದು ಬಂದಿದೆ.
Recommended Video
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ












Click it and Unblock the Notifications