ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಂದಾಯ ಭವನಕ್ಕೆ ಕೊರೊನಾ; ಕೆಎಟಿ ಕಲಾಪ ಬಂದ್

|
Google Oneindia Kannada News

ಬೆಂಗಳೂರು, ಜೂನ್ 25 : ಬೆಂಗಳೂರಿನ ಕಂದಾಯ ಭವನದಲ್ಲಿನ ಇಬ್ಬರು ಅಧಿಕಾರಿಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ 2 ದಿನದ ಕಲಾಪಗಳನ್ನು ಮುಂದೂಡಿ ಆದೇಶ ಹೊರಡಿಸಿದೆ.

ಕಂದಾಯ ಭವನದ 6 ಮತ್ತು 7ನೇ ಮಹಡಿಯಲ್ಲಿ ಕೆಎಟಿ ಪೀಠವಿದೆ. ಜೂನ್ 26ರ ಶುಕ್ರವಾರ ಮತ್ತು ಜೂನ್ 27ರ ಶನಿವಾರ ನ್ಯಾಯಮಂಡಳಿಯಲ್ಲಿ ಯಾವುದೇ ಕಲಾಪ ನಡೆಯುವುದಿಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಬೆಂಗಳೂರು ಲಾಕ್‌ಡೌನ್? ಅಥವಾ ಸೀಲ್‌ಡೌನ್? ಸಚಿವರ ಸ್ಪಷ್ಟನೆಬೆಂಗಳೂರು ಲಾಕ್‌ಡೌನ್? ಅಥವಾ ಸೀಲ್‌ಡೌನ್? ಸಚಿವರ ಸ್ಪಷ್ಟನೆ

KAT Suspended Functioning On June 26 And 27

ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಗಟ್ಟಲು ಎರಡು ದಿನದ ಕಲಾಪವನ್ನು ಮುಂದೂಡಲಾಗಿದೆ ಎಂದು ಕೆಎಟಿ ರಿಜಿಸ್ಟ್ರಾರ್ ಆದೇಶದಲ್ಲಿ ತಿಳಿಸಿದ್ದಾರೆ. ಶುಕ್ರವಾರ ವಿಚಾರಣೆಗೆ ನಿಗದಿಯಾಗಿದ್ದ ಪ್ರಕರಣಗಳನ್ನು ಜೂನ್ 29ರಂದು ವಿಚಾರಣೆ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ.

ಬೆಂಗಳೂರು ಲಾಕ್‌ಡೌನ್‌? ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸ್ಪಷ್ಟನೆ ಬೆಂಗಳೂರು ಲಾಕ್‌ಡೌನ್‌? ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸ್ಪಷ್ಟನೆ

ಕೆಎಟಿ ಪ್ರಧಾನ ಪೀಠದಲ್ಲಿ ಕಾರ್ಯ ನಿರ್ವಹಣೆ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಬೆಂಗಳೂರು ಬಿಟ್ಟು ತೆರಳದಂತೆ ಸೂಚನೆ ನೀಡಲಾಗಿದೆ. ಆದೇಶ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕರ್ನಾಟಕದಲ್ಲಿ ಹೊಸದಾಗಿ 442 ಕೊರೊನಾ ಸೋಂಕಿತರು ಪತ್ತೆ ಕರ್ನಾಟಕದಲ್ಲಿ ಹೊಸದಾಗಿ 442 ಕೊರೊನಾ ಸೋಂಕಿತರು ಪತ್ತೆ

ಕಂದಾಯ ಭವನದ ಕಟ್ಟಡವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಬೇಕಾಗಿದೆ. ಆದ್ದರಿಂದ 1 ಮತ್ತು 2ನೇ ಮಹಡಿಯಲ್ಲಿರುವ ಕಂದಾಯ ಇಲಾಖೆಯ ಕಚೇರಿಯನ್ನು ಮುಚ್ಚಲಾಗಿದೆ. ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯವನ್ನು ಬಂದ್ ಮಾಡಲಾಗಿದೆ.

ಬೆಂಗಳೂರು ನಗರದಲ್ಲಿ ಗುರುವಾರ 113 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 1791ಕ್ಕೆ ಏರಿಕೆಯಾಗಿದೆ.

English summary
Karnataka administrative tribunal (KAT) suspended functioning June 26 and 27, 2020 after 2 officials of Kandaya Bhavan found positive for Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X