ಏರ್‌ಪೋರ್ಟ್ ಮೆಟ್ರೋ ಮಾರ್ಗದಲ್ಲಿ ಕಸ್ತೂರಿನಗರ ಕೈಬಿಟ್ಟ ಬಿಎಂಆರ್‌ಸಿಎಲ್
ಬೆಂಗಳೂರು, ಏ.2: ಬೆಂಗಳೂರು ಮೆಟ್ರೋ ನಿಗಮವು ಕೆಂಪೇಗೌಡ ಏರ್‌ಪೋರ್ಟ್‌ಗೆ ನಿರ್ಮಿಸುತ್ತಿರುವ ಎರಡನೇ ಹಂತದ ಮೆಟ್ರೋ ಮಾರ್ಗದಿಂದ ಕಸ್ತೂರಿನಗರ ನಿಲ್ದಾಣವನ್ನು ಕೈಬಿಟ್ಟಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬಿಎಂಆರ್‌ಸಿಎಲ್ ಮೂಲಗಳ ಪ್ರಕಾರ ಏರ್‌ಪೋರ್ಟ್ ಮಾರ್ಗದಲ್ಲಿ 17 ನಿಲ್ದಾಣವನ್ನು ಗುರುತಿಸಲಾಗಿದೆ. ಒಟ್ಟು 33.4 ಕಿ.ಮೀ ವ್ಯಾಪ್ತಿಯಲ್ಲಿ 17 ನಿಲ್ದಾಣಗಳು ಬರಲಿವೆ. ಕೆಆರ್ ಪುರಂನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಧ್ಯೆ ಕೆಆರ್ ಪುರಂ, ಚನ್ನಸಂದ್ರ, ಹೊರಮಾವು, ಕಲ್ಯಾಣನಗರ, ಎಚ್‌ಆರ್‌ಬಿಆರ್ ಲೇಔಟ್, ಎಚ್‌ಬಿಆರ್ ಲೇಔಟ್, ನಾಗವಾರ, ವೀರಣ್ಣ ಪಾಳ್ಯ, ಕೆಂಪಾಪುರ ಕ್ರಾಸ್, ಹೆಬ್ಬಾಳ, ಕೊಡಿಗೇಹಳ್ಳಿ, ಜಕ್ಕೂರು, ಕೋಗಿಲು ಕ್ರಾಸ್, ಪೆರಿಫೆರಲ್ ರಿಂಗ್ ರಸ್ತೆ, ಟ್ರಂಪೆಟ್ ಇಂಟರ್ ಸೆಕ್ಷನ್ ಹಾಗೂ ಕೆಐಎದಲ್ಲಿ ಎರಡು ನಿಲ್ದಾಣಗಳು ಬರಲಿವೆ.
ಏರ್‌ಪೋರ್ಟ್‌ನಲ್ಲಿ ಬರುವ ಎರಡು ನಿಲ್ದಾಣಗಳು ಸುರಂಗ ಮಾರ್ಗಗಳಾಗಿರುತ್ತವೆ. ಬಿಎಂಆರ್‌ಸಿಎಲ್ ಮೂಲಗಳ ಪ್ರಕಾರ ಕಸ್ತೂರಿನಗರ ನಿಲ್ದಾಣವನ್ನು ಕೈಬಿಟ್ಟಿದೆ. ಮೆಟ್ರೋ ನಿಲ್ದಾಣ ನಿರ್ಮಿಸಲು ಜಾಗದ ಕೊರತೆ ಇರುವ ಕಾರಣ ನಿರ್ಮಾಣ ಯೋಜನೆ ಕೈಬಿಡಲಾಗಿದೆ. ಚನ್ನಸಂದ್ರ, ಹೊರಮಾವು, ಕಲ್ಯಾಣನಗರದಲ್ಲಿ ಇನ್ನೂ ಭೂಮಿ ಖರೀದಿಸಬೇಕಿದೆ.

ಮೊದಲು ಏರ್‌ಪೋರ್ಟ್ ಮಾರ್ಗ ನಾಗವಾರದಿಂದ ಆರಂಭವಾಗಿ ರಾಮಕೃಷ್ಣಹೆಗಡೆ ನಗರ ಹಾಗೂ ಜಕ್ಕೂರು ತಲುಪುತ್ತಿತ್ತು ಆದರೆ ಬೆಂಗಳೂರು ಮಂಗಳೂರು ತೈಲದ ಪೈಫ್‌ಲೈನ್ ಇರುವ ಕಾರಣ ಆ ಮಾರ್ಗದಲ್ಲಿ ಮೆಟ್ರೋ ನಿರ್ಮಾಣ ಬೇಡ ಎನ್ನುವ ನಿರ್ಧಾರಕ್ಕೆ ಬರಲಾಯಿತು.












Click it and Unblock the Notifications