• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಮ್ಮು ಕಾಶ್ಮೀರದ ಇತಿಹಾಸ ನೆನಪಿಸಬೇಕಿದೆ, ಆಧುನಿಕ ಜಮ್ಮು ಕಾಶ್ಮೀರ ಹೇಗಾಯಿತು?

|

ನವದೆಹಲಿ, ಆಗಸ್ಟ್ 6: ಜಮ್ಮು ಕಾಶ್ಮೀರದ ಇತಿಹಾಸ ನೆನಪಿಸಬೇಕಿದೆ, ಆಧುನಿಕ ಜಮ್ಮು ಕಾಶ್ಮೀರ ಹೇಗಾಯಿತು ಗೊತ್ತೇ ಎಂದು ಕಾಂಗ್ರೆಸ್ ಮುಖಂಡ ಮನೀಷ್ ತಿವಾರಿ ಲೋಕಸಭೆಯಲ್ಲಿ ಮಾತು ಆರಂಭಿಸಿದರು.

1846ರಲ್ಲಿ ಬ್ರಿಟಿಷ್ -ದಿಲೀಪ್ ಸಿಂಗ್ ನಡುವೆ ಯುದ್ಧ ನಡೆದ ಬಳಿಕ 1940ರಲ್ಲಿ ಲಾಹೋರ್ ಮಾತುಕತೆ, ಬಿಯಾಸ್-ಸಿಂಧೂ ನದಿ ದಡ ಬ್ರಿಟಿಷರಿಗೆ ಕೊಡಬೇಕೆಂದು ಮಾತುಕತೆ ನಡೆದಿತ್ತುಎಂದು ತಿಳಿಸಿದರು.

370 ವಿಧಿ ರದ್ದತಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿಸಿದ್ದಾರೆ, ಜಮ್ಮು ಕಾಶ್ಮೀರದಲ್ಲಿ ವಿಧನಸಭೆ ಈಗಿಲ್ಲ ಇಂತಹ ಪರಿಸ್ಥಿತಿಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಾಶ್ಮೀರದ ಜನರನ್ನು ಬದಿಗಿಟ್ಟು ನಿರ್ಧಾರ ತೆಗೆದುಕೊಳ್ಳಲಾಗಿದೆ. ಸ್ಥಳೀಯರನ್ನು ಕತ್ತಲಲ್ಲಿ ಇಡಲಾಗಿದೆ ಎಂದು ದೂರಿದರು.

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜನಾದೇಶವಿಲ್ಲದೆ ಒಂದು ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾದದ್ದು ಎಂದು ಕಾಂಗ್ರೆಸ್ ಸಂಸದ ಮನೀಷ್ ತಿವಾರಿ ಅಭಿಪ್ರಾಯಪಟ್ಟರು.

ಕಳೆದ 70 ವರ್ಷಗಳಲ್ಲಿ ಕೇಂದ್ರಾಡಳಿತ ಪ್ರದೇಶವನ್ನು ರಾಜ್ಯವನ್ನಾಗಿ ಮಾಡಿದ್ದನ್ನು ನೋಡಿದ್ದೆವು ಆದರೆ ಮೊದಲ ಬಾರಿಗೆ ರಾಜ್ಯವನ್ನು ಕೇಂದ್ರಾಳಿತ ಪ್ರದೇಶವನ್ನಾಗಿ ಮಾಡಲಾಗಿದೆ. ಇದಕ್ಕಿಂತ ದೊಡ್ಡ ಆಘಾತವಿಲ್ಲ ಎಂದು ಕಾಂಗ್ರೆಸ್‌ ಸಂಸದ ಮನೀಶ್ ತಿವಾರಿ ಹೇಳಿದ್ದಾರೆ.

ಮೊದಲ ಬಾರಿಗೆ ರಾಜ್ಯವೊಂದು ಆಡಳಿತ ಪ್ರದೇಶವಾಗುವುದನ್ನು ನೋಡುತ್ತಿದ್ದೇವೆ ಇದಕ್ಕಿಂತ ದೊಡ್ಡ ಆಘಾತ ಬೇರೆ ಬೇಕೆ, ಇದು ಉತ್ತಮ ಬೆಳವಣಿಗೆಯಲ್ಲ ಎಂದಿದ್ದಾರೆ.

ಅಮಿತ್ ಶಾ ಅವರು ಜುನಾಗಢ, ಹೈದರಾಬಾದ್‌ ಬಗ್ಗೆ ಮಾತನಾಡಬೇಕು, ಜುನಾಗಢದ 99 ಶೇ. ಜನರು ಭಾರತದ ಜೊತೆ ಹೋಗೋದಾಗಿ ಬಯಸಿದ್ದರು, ಇದರ ವಿರುದ್ಧ ಪಾಕಿಸ್ತಾನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ದೂರು ನೀಡಿತ್ತು ಎಂದು ವಿವರಿಸಿದರು.

ನೀವೇ ನಿರ್ಧಾರ ಕೈಗೊಳ್ಳಿ ಎಂದು ಸಂಸತ್‌ಗೆ ಹೇಳಲಾಗುತ್ತದೆ, ಸಂವಿಧಾನಸ ದ ಮೂರನೇ ವಿಧಿ ಪ್ರಕಾರ ಹಸ್ತಕ್ಷೇಪ ಮಾಡುವಂತಿಲ್ಲ, ಸಂವಿಧಾನದ ಮೂರನೇ ವಿಧಿ ವಿಂಗಡಣೆ ಮಾಡಲಾಗಿದೆ. ರಾಷ್ಟ್ರಪತಿ ಆಳ್ವಿಕೆ ಮೂಲಕ ಜಮ್ಮು ಕಾಶ್ಮೀರ ಇಬ್ಭಾಗ ಮಾಡಲಾಗಿದೆ ಎಂದು ಹೇಳಿದರು.

English summary
Kashmir Is a Union Territory That Is Fatal To Democracy, Making a state a union territory without a mandate in a democratic country is fatal to democracy says Manish Tiwari .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X