ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಜ್ ಯಾತ್ರೆಗೆ ರಾಜ್ಯದ 6701 ಮಂದಿ ಆಯ್ಕೆ: ಜಮೀರ್ ಅಹ್ಮದ್

|
Google Oneindia Kannada News

ಬೆಂಗಳೂರು, ಜನವರಿ 17: ಪ್ರಸಕ್ತ ಸಾಲಿನ ಹಜ್ ಯಾತ್ರೆಗೆ ಭಾರತೀಯ ಹಜ್ ಸಮಿತಿಯು ರಾಜ್ಯದಿಂದ 6701 ಜನರನ್ನು ಆಯ್ಕೆ ಮಾಡಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

ಸೌದಿ ಅರೆಬಿಯಾ ಸರ್ಕಾರವು 1,23,900 ಮಂದಿಯ ಕೋಟಾವನ್ನು ಭಾರತ ಹಜ್ ಸಮಿತಿಗೆ ನೀಡಿತ್ತು. ಸಮಿತಿಯು ಪ್ರತಿ ರಾಜ್ಯಗಳಿಗೆ ಜನಸಂಖ್ಯೆ ಆಧರಿಸಿ ಕೋಟಾ ವಿಂಗಡಿಸಿತ್ತು. ಅದರಂತೆ ರಾಜ್ಯದಿಂದ 6701 ಜನರನ್ನು ಈ ಬಾರಿ ಯಾತ್ರೆಗೆ ಕಳುಜಹಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ವೈರಲ್ ಆಯ್ತು ಹಿಂದೂ ಯುವತಿ‌, ಮುಸ್ಲಿಂ ಯುವಕನ ಪ್ರೇಮ ವಿವಾಹದ ಲಗ್ನ ಪತ್ರಿಕೆ ವೈರಲ್ ಆಯ್ತು ಹಿಂದೂ ಯುವತಿ‌, ಮುಸ್ಲಿಂ ಯುವಕನ ಪ್ರೇಮ ವಿವಾಹದ ಲಗ್ನ ಪತ್ರಿಕೆ

ರಾಜ್ಯದ ಹಜ್ ಸಮಿತಿಗೆ ಈ ಬಾರಿ 13,995 ಅರ್ಜಿಗಳು ಬಂದಿದ್ದವು. ಅದರಲ್ಲಿ 7298 ಪುರುಷರ ಮತ್ತು 6685 ಮಹಿಳೆಯರ ಅರ್ಜಿಗಳು ಹಾಗೂ 12 ಮಕ್ಕಳು ಅರ್ಜಿ ಸಲ್ಲಿಸಿದ್ದರು ಎಂದು ಜಮೀರ್ ಹೇಳಿದರು.

Karnatakas 6701 people selected for this year Hujj tour

70 ವರ್ಷ ಮೇಲ್ಪಟ್ಟ ಮೀಸಲಾತಿ ವರ್ಗದಲ್ಲಿ 794 ಜನರು, ಮತ್ತು 45 ವರ್ಷ ಮೀರಿದ ಮಹಿಳೆಯರ ವಿಭಾಗದಲ್ಲಿ 23 ಅರ್ಜಿಗಳು ಸಲ್ಲಿಕೆ ಆಗಿದ್ದವು, ಅವರನ್ನು ನೇರವಾಗಿ ಆಯ್ಕೆ ಮಾಡಲಾಗಿದೆ. ಪೂರ್ಣ ಪ್ರಕ್ರಿಯೆಯು ಆನ್‌ಲೈನ್ ಮೂಲಕ ನಡೆಯುತ್ತಿದ್ದು, ಇದರಲ್ಲಿ ಯಾರದೇ ಹಸ್ತಕ್ಷೇಪವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ತ್ರಿವಳಿ ತಲಾಖ್ ಜೆಡಿಯುನಿಂದ ಅಪಸ್ವರ, ರಾಜ್ಯಸಭೆಯಲ್ಲಿ ಮಸೂದೆ ಡೌಟು ತ್ರಿವಳಿ ತಲಾಖ್ ಜೆಡಿಯುನಿಂದ ಅಪಸ್ವರ, ರಾಜ್ಯಸಭೆಯಲ್ಲಿ ಮಸೂದೆ ಡೌಟು

ರಾಜ್ಯದ ಹಜ್ ಸಮಿತಿ ಅಧ್ಯಕ್ಷ ರೋಷನ್ ಬೇಗ್ ಮಾತನಾಡಿ, ದೇಶದಲ್ಲಿ ಉತ್ತಮ ಹಜ್ ಶಿಬಿರವನ್ನು ರಾಜ್ಯದಲ್ಲಿ ನಡೆಸಲಾಗುತ್ತಿದೆ. ಯಾತ್ರಿಗಳಿಗೆ ಪೂರ್ಣ ತರಬೇತಿ, ಮಾರ್ಗದರ್ಶನ ನೀಡಲಾಗುತ್ತದೆ. ಅವರ ಸುರಕ್ಷತೆಗೂ ಒತ್ತು ನೀಡಲಾಗುತ್ತಿದೆ ಎಂದು ಅವರು ಹೇಳಿದರು.

English summary
Minority development minister Zameer Ahmed told that, Karnataka's 6701 people selected for this year Hujj holi tour. Totall 13,995 applications were recived but 6701 were selected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X