KEA ಪರೀಕ್ಷೆಯಲ್ಲೂ ಅಕ್ರಮ: ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಭವಿಷ್ಯದ ಜೊತೆ ಚೆಲ್ಲಾಟ: ತನಿಖೆಗೆ ಜೆಡಿಎಸ್ ಆಗ್ರಹ

ಬೆಂಗಳೂರು: ಕೆಪಿಎಸ್‌ ಸಿ ನೇಮಕಾತಿ ಅಕ್ರಮ, ಭ್ರಷ್ಟಾಚಾರ ಬೆನ್ನಲ್ಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿ ಗ್ರಾಮ ಆಡಳಿತಾಧಿಕಾರಿ (VAO) ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ. ರಾಜ್ಯ ಸರ್ಕಾರ ನಾಡಿನ ಯುವಜನತೆಯ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವುದಕ್ಕೆ ಇದೇ ಸಾಕ್ಷಿ ಎಂದಿರುವ ಜೆಡಿಎಸ್, ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹಿಸಿದೆ.

ಕೆಇಎ ನೇಮಕಾತಿ ಕುರಿತು ಟ್ವಿಟ್ ಮಾಡಿರುವ ಜೆಡಿಎಸ್ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನೇಮಕಾತಿ ಅಕ್ರಮವೊಂದು ಕಾಯಕವಾಗಿದೆ. ಕರ್ನಾಟಕ ಲೋಕಸೇವಾ ಆಯೋಗ (KPSC) ಹಗರಣದ ಬಳಿಕ ಕೆಇಎ (KEA) ನಡೆಸುವ ಪರೀಕ್ಷೆಗಳು ಅಕ್ರಮ ಹಾಗೂ ಭ್ರಷ್ಟಾಚಾರದ ಕೂಪವಾಗಿರುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ದೂರಿದೆ.

Karnataka VAO Exam Scam 2026

VAO ಪರೀಕ್ಷೆಯಲ್ಲಿ ಅಕ್ರಮ

ಕೇವಲ 15 ದಿನಗಳ ಅಂತರದಲ್ಲಿ ಎಂತಹ ಪವಾಡ ನಡೆದಿದೆ ನೋಡಿ! ಕೆಎಸ್ಆರ್'ಪಿ ಪೊಲೀಸ್ ಕಾನ್‌ಸ್ಟೇಬಲ್ (PC) ಪರೀಕ್ಷೆಯಲ್ಲಿ ಕೇವಲ 25 ಅಂಕ ಪಡೆದಿದ್ದ ಅಭ್ಯರ್ಥಿಯೊಬ್ಬ, ಗ್ರಾಮ ಆಡಳಿತಾಧಿಕಾರಿ (VAO) ಪರೀಕ್ಷೆಯಲ್ಲಿ ಬರೋಬ್ಬರಿ 151.25 ಅಂಕ ಪಡೆದು ಪ್ರಥಮ ಶ್ರೇಣಿ ಪಡೆದಿದ್ದಾನೆ. ಇದರ ಅರ್ಥವೇನು? ಈ ರೀತಿಯಲ್ಲಿ ಅಂಕಗಳು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಆ ಅಭ್ಯರ್ಥಿಯು ದ್ವಿತೀಯ ಪಿಯುಸಿಯಲ್ಲಿ ಕೇವಲ ಶೇ.49 ಅಂಕ ಪಡೆದ ಅಭ್ಯರ್ಥಿಗೆ ಈ ಮಟ್ಟದ ಸಾಧನೆ ಮಾಡಲು ಹೇಗೆ ಸಾಧ್ಯವಾಯಿತು?. ಅಲ್ಲದೇ ಪೊಲೀಸ್ ಪರೀಕ್ಷೆಯಲ್ಲಿ ಕೇವಲ 12 ಅಂಕ ಪಡೆದಿದ್ದ ಇನ್ನೊಬ್ಬ ಅಭ್ಯರ್ಥಿ ವಿಎಒ ಪರೀಕ್ಷೆಯಲ್ಲಿ 118 ಅಂಕ ಪಡೆದಿದ್ದಾನೆ ಎಂದರೆ, ಈ ವ್ಯವಸ್ಥೆಯಲ್ಲಿನ ಲೋಪ ಎಷ್ಟರಮಟ್ಟಿಗಿದೆ? ಎಂಬುದು ಅರ್ಥವಾಗುತ್ತದೆ ಎಂದು ದೂರಿದೆ.

ಹಿಂಬಾಗಿಲಿನ ಮೂಲಕ ಪರೀಕ್ಷಾ ಅಕ್ರಮ!

ಇನ್ನೂ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದೆಯೇ, ಓಎಂಆರ್ (OMR) ಉತ್ತರ ಪತ್ರಿಕೆ ಬದಲಾವಣೆಯಾಗಿದೆಯೇ ಅಥವಾ ದಾಖಲೆಗಳ ಮ್ಯಾನಿಪ್ಯುಲೇಷನ್ ಆಗಿದೆಯೇ? ಎಂಬ ಸತ್ಯ ಗೊತ್ತಾಗಬೇಕು. ರಾಜ್ಯದ ಲಕ್ಷಾಂತರ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಸರ್ಕಾರಿ ನೌಕರಿಗಾಗಿ ಹಗಲಿರುಳು ಕಷ್ಟಪಟ್ಟು ಓದುತ್ತಿದ್ದರೆ, ಹಿಂಬಾಗಿಲಿನ ಮೂಲಕ ಇಂತಹ ಅಕ್ರಮಗಳಿಗೆ ಕೈಜೋಡಿಸಿದವರು ಯಾರು? ಪ್ರಾಮಾಣಿಕ ಅಭ್ಯರ್ಥಿಗಳಿಗೆ ಆಗುತ್ತಿರುವ ಈ ಘೋರ ಅನ್ಯಾಯವನ್ನು
ಜೆಡಿಎಸ್ ತೀವ್ರವಾಗಿ ಖಂಡಿಸಲಿದೆ.

ರಾಜ್ಯ ಸರ್ಕಾರ ಹಾಗೂ ಸಂಬಂಧಿಸಿದಂತೆ ಇಲಾಖೆ, ಅಧಿಕಾರಿಗಳು ಈ ಕೂಡಲೇ ವಿಎಒ (VAO) ಪರೀಕ್ಷೆಯ ಸಂಪೂರ್ಣ ಪ್ರಕ್ರಿಯೆಯ ಬಗ್ಗೆ ಉನ್ನತ ಮಟ್ಟದ ಹಾಗೂ ನಿಷ್ಪಕ್ಷಪಾತ ತನಿಖೆಯಾಗಬೇಕು. ಅಕ್ರಮ ಎಸಗಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಮಟ್ಟಹಾಕಿ, ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಜೆಡಿಎಸ್ ಒತ್ತಾಯಿಸಿದೆ.

ಏನಿದು ಪ್ರಕರಣ..

ಇದೇ ಅಕ್ಟೋಬರ್‌ನಲ್ಲಿ ಗ್ರಾಮ ಆಡಳಿತಾಧಿಕಾರಿ ಪರೀಕ್ಷೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿತ್ತು. ಬಳಿಕ ಕೀ ಉತ್ತರ, ತಾತ್ಕಾಲಿಕ ಫಲಿತಾಂಶ ಬಿಡುಗಡೆ ಮಾಡಿ, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. 1994ರಲ್ಲಿ ಜನ್ಮದಾಖಲೆ ಇರುವ ಹಾವೇರಿ ಅಭ್ಯರ್ಥಿಯೊಬ್ಬರು 2026ರಲ್ಲಿ ಪಿಯುಸಿ ಪರೀಕ್ಷೆಯನ್ನು ಕನಿಷ್ಠ ಅಂಕಗಳಲ್ಲಿ ಉತ್ತೀರ್ಣವಾಗಿದ್ದಾನೆ. ಇತ್ತೀಚೆಗೆ ನಡೆದ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿಯಲ್ಲಿ ಉತ್ತೀರ್ಣವಾಗುವಷ್ಟು ಅಂಕ ಪಡೆಯದವನು VAO ಪರೀಕ್ಷೆಯಲ್ಲಿ ಯಾವುದೇ ತಪ್ಪುಗಳನ್ನು ಮಾಡದೇ ಹಾವೇರಿಗೆ ಪ್ರಥಮ ಸ್ಥಾನ ಬರುವಂತೆ ಅಂಕ ಪಡೆದಿದ್ದು ಹೇಗೆ? ಇದು ಅನೇಕ ಅಭ್ಯರ್ಥಿಗಳು, ವಿದ್ಯಾರ್ಥಿಗಳ ಅನುಮಾನಕ್ಕೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+