ಬಳಕೆಯಾದ ಅಡುಗೆ ಎಣ್ಣೆ ಸಂಗ್ರಹಕ್ಕೆ ವಿಶೇಷ ಆ್ಯಪ್: ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ

ಬೆಂಗಳೂರು, ಅಕ್ಟೋಬರ್ 11: ಅಡುಗೆ ಎಣ್ಣೆಯ ಅಪಾಯಕಾರಿ ಹಾಗೂ ಅಸುರಕ್ಷಿತ ಮರುಬಳಕೆಗೆ ಕಡಿವಾಣ ಹಾಕಿ, ಜನಸಾಮಾನ್ಯರ ಆರೋಗ್ಯ ರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅತ್ಯಂತ ಪ್ರಮುಖ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. ಹೋಟೆಲ್‌ಗಳು ಮತ್ತು ಮನೆಗಳಲ್ಲಿ ಒಮ್ಮೆ ಬಳಸಿ ವ್ಯರ್ಥವಾಗುವ ಎಣ್ಣೆಯನ್ನು ವೈಜ್ಞಾನಿಕವಾಗಿ ಸಂಗ್ರಹಿಸಲು ವಿಶೇಷ ಮೊಬೈಲ್ ಅಪ್ಲಿಕೇಶನ್ ರೂಪಿಸಲಾಗುತ್ತಿದ್ದು, ಮೊದಲ ಹಂತದಲ್ಲಿ ಬೆಂಗಳೂರು ಹಾಗೂ ಮಂಗಳೂರು ನಗರಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಹೋಟೆಲ್‌ಗಳು ಮತ್ತು ಉಪಹಾರ ಗೃಹಗಳಲ್ಲಿ ಕರಿದ ಎಣ್ಣೆಯನ್ನು ದಲ್ಲಾಳಿಗಳು ಹಾಗೂ ಮಧ್ಯವರ್ತಿಗಳಿಗೆ ಕಡಿಮೆ ದರಕ್ಕೆ ಮಾರಾಟ ಮಾಡಲಾಗುತ್ತಿತ್ತು. ಈ ರೀತಿ ಸಂಗ್ರಹವಾದ ಕಳಪೆ ಹಾಗೂ ಅಪಾಯಕಾರಿ ಎಣ್ಣೆಯು ಮತ್ತೆ ಅಕ್ರಮವಾಗಿ ಮಾರುಕಟ್ಟೆಗೆ ತಲುಪಿ, ಸಾರ್ವಜನಿಕರಿಗೆ ಮಾರಾಟವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಲು ತಂತ್ರಜ್ಞಾನ ಆಧಾರಿತ ಯೋಜನೆಯ ಮೊರೆ ಹೋಗಿದೆ.

Karnataka Used Cooking Oil Collection App Bengaluru Mangaluru to Get Pilot Project Know details

ಹೊಸ ಯೋಜನೆಯ ಪ್ರಮುಖ ಅಂಶಗಳು

* ನಗರಗಳಲ್ಲಿ ಪ್ರತಿದಿನ ಮನೆ-ಮನೆಯಿಂದ ಒಣ ಹಾಗೂ ಹಸಿ ಕಸ ಸಂಗ್ರಹಿಸುವ ಮಾದರಿಯಲ್ಲೇ, ಬಳಕೆಯಾದ ಅಡುಗೆ ಎಣ್ಣೆಯನ್ನು ನೇರವಾಗಿ ಮನೆ ಹಾಗೂ ಹೋಟೆಲ್‌ಗಳಿಂದಲೇ ಸಂಗ್ರಹಿಸುವ ವ್ಯವಸ್ಥೆ ಜಾರಿಯಾಗಲಿದೆ.

* ಆ್ಯಪ್ ಆಧಾರಿತ ನಿರ್ವಹಣೆ: ಎಣ್ಣೆ ಸಂಗ್ರಹಣೆ, ಲೊಕೇಶನ್ ಹಾಗೂ ಪೂರೈಕೆಯ ಸಂಪೂರ್ಣ ಪ್ರಕ್ರಿಯೆಯನ್ನು ಹೊಸ ಮೊಬೈಲ್ ಆ್ಯಪ್ ಮೂಲಕ ನಿಯಂತ್ರಿಸಲಾಗುತ್ತದೆ.

* ಯೋಜನೆ ಅನುಷ್ಠಾನದ ಕುರಿತು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮೂರು ಸುತ್ತಿನ ಸಭೆಗಳು ಪೂರ್ಣಗೊಂಡಿದ್ದು, ಅಂತಿಮ ರೂಪುರೇಷೆ ಸಿದ್ಧಗೊಂಡ ತಕ್ಷಣ ಪ್ರಾಯೋಗಿಕ ಜಾರಿಗೆ ಚಾಲನೆ ಸಿಗಲಿದೆ.

ಅತಿಯಾದ ಎಣ್ಣೆ, ಸಕ್ಕರೆ, ಉಪ್ಪಿನ ಬಳಕೆಯಿಂದಾಗುವ ಸಮಸ್ಯೆಗಳು

ಆಹಾರದಲ್ಲಿ ಉಪ್ಪು, ಸಕ್ಕರೆ ಹಾಗೂ ಎಣ್ಣೆಯ ಅತಿಯಾದ ಬಳಕೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಜನರ ಆರೋಗ್ಯ ತೀವ್ರವಾಗಿ ಹದಗೆಡುತ್ತಿದೆ. ಇದು ಹೃದಯ ಸಂಬಂಧಿ ಕಾಯಿಲೆ, ರಕ್ತದೊತ್ತಡ ಹಾಗೂ ಇತರೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತಿದ್ದು, ಸಾಮಾನ್ಯ ಕುಟುಂಬಗಳು ಬೃಹತ್ ಪ್ರಮಾಣದ ಆಸ್ಪತ್ರೆ ವೆಚ್ಚ ಮತ್ತು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿವೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರವು, ಕಳಪೆ ಅಡುಗೆ ಎಣ್ಣೆಯ ಮರುಬಳಕೆಯನ್ನು ತಡೆಯುವ ಮೂಲಕ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಕಟ್ಟುನಿಟ್ಟಿನ ಹಾಗೂ ಜನಪರ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಇದು ಜಾರಿಗೆ ಬಂದರೆ ಕಳಪೆ ಗುಣಮಟ್ಟದ ಎಣ್ಣೆಗೆ ಕಡಿವಾಣ ಬಿದ್ದಂತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+