ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿಕ್ಷಕರ ಅರ್ಹತಾ ಪರೀಕ್ಷೆ(TET)ಗೆ ಅರ್ಜಿ ಆಹ್ವಾನ- ಇಲ್ಲಿದೆ ಸಂಪೂರ್ಣ ಮಾಹಿತಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 02: ಶಿಕ್ಷಕರಾಗಲು ಬಯಸಿರುವ ಅಭ್ಯರ್ಥಿಗಳಿಗೆ ಸಂತಸದ ಸುದ್ದಿ. ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ (Karnataka Teacher eligibility test) ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ.

ಒಂದರಿಂದ 5ನೇ ತರಗತಿ ಶಿಕ್ಷಕರಾಗಲು ಟಿಇಟಿಗೆ ಅರ್ಜಿ ಸಲ್ಲಿಸುವವರು ಪಿಯುಸಿ ಹಾಗೂ ಡಿಇಡಿ ಉತ್ತೀರ್ಣರಾಗಿರಬೇಕು. 6 ರಿಂದ 8ನೇ ತರಗತಿಗೆ ಶಿಕ್ಷಕರಾಗಲು ಅರ್ಜಿ ಸಲ್ಲಿಸುವವರು ಪದವಿ ಮತ್ತು ಬಿಇಡಿ ಅಥವಾ ಪಾಸಾಗಿರಬೇಕು. ಕೊನೆಯ ವರ್ಷಗಳ ಡಿಇಡಿ, ಬಿಇಡಿ/ಬಿಎಸ್ಸಿ ಬಿಇಡಿ ಪರೀಕ್ಷೆಗೆ ಹಾಜರಾಗಿ ಫಲಿತಾಂಶ ನಿರೀಕ್ಷೆಯಲ್ಲಿರುವವರೂ ಸಹ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲಿಚ್ಛಿಸುವವರು ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಸೆಪ್ಟೆಂಬರ್ ತಿಂಗಳು 30 ಆಗಿದ್ದು, ಆನ್ ಲೈನ್ ಮೂಲಕವೇ ನಿಗದಿಪಡಿಸಿದ ಶುಲ್ಕ ಪಾವತಿಸಬೇಕು. ನವೆಂಬರ್ 06 ರಂದು ಬೆಳಗ್ಗೆ 9.00 ರಿಂದ 12ರವರೆಗೆ ಮತ್ತು ಮಧ್ಯಾಹ್ನ 1.30 ರಿಂದ 4 ರವರೆಗೆ ಪರೀಕ್ಷೆಗಳು ನಡೆಯಲಿವೆ. ಪತ್ರಿಕೆ 150 ಅಂಕಗಳನ್ನು ಹೊಂದಿರುತ್ತದೆ. ಪ್ರವೇಶ ಪತ್ರಗಳನ್ನು ಅಕ್ಟೋಬರ್ 21 ರಿಂದ ಆನ್ ಲೈನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಜೀವಿತಾವಧಿಗೆ ಮಾನ್ಯತೆ ಲಭ್ಯವಾಗಲಿದೆ

ಜೀವಿತಾವಧಿಗೆ ಮಾನ್ಯತೆ ಲಭ್ಯವಾಗಲಿದೆ

ಶಿಕ್ಷಕರಾಗಲು ಬಯಸುವ ಶಿಕ್ಷಕರು ಅರ್ಹತೆಯನ್ನು ಹೊಂದಿರಬೇಕಾಗುತ್ತದೆ. ರಾಷ್ಟ್ರೀಯ ಶಿಕ್ಷಣ ಶಿಕ್ಷಕರ ಪರಿಷತ್ (NCTE) 1 ರಿಂದ 8ನೇ ತರಗತಿಗೆ ಶಿಕ್ಷಕರಾಗಿ ನೇಮಕವಾಗಲು ಕನಿಷ್ಠ ಅರ್ಹತೆಯನ್ನು ನಿಗಧಿ ಪಡಿಸಿದೆ. NCTE ನಿಗದಿಪಡಿಸಿರುವ ಮಾರ್ಗಸೂಚಿ ಅನ್ವಯ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (ಟಿಇಟಿ) ನಿಗದಿಪಡಿಸಲಾಗುತ್ತದೆ. ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಮಾಣ ಪತ್ರ ಜೀವಾತಾವಧಿಯವರಿಗೆ ಮಾನ್ಯತೆ ಹೊಂದಿರುತ್ತದೆ. ಒಮ್ಮೆ ಅರ್ಹತೆ ಪಡೆದವರು ಮತ್ತೆ ಮತ್ತೆ ಪರೀಕ್ಷೆ ಬರೆಯುವ ಅವಶ್ಯಕತೆಯಿಲ್ಲ. ಒಂದು ವೇಳೆ ಹೆಚ್ಚು ಅಂಕ ಪಡೆಯಲಿಚ್ಛಿಸುವ ಅಭ್ಯರ್ಥಿಗಳು ಮಾತ್ರ ಮತ್ತೆ ಪರೀಕ್ಷೆ ಬರೆಯಬಹುದಾಗಿದೆ.

ಅರ್ಜಿ ಸಲ್ಲಿಸುವಾಗ ಎಚ್ಚರಾ

ಅರ್ಜಿ ಸಲ್ಲಿಸುವಾಗ ಎಚ್ಚರಾ

ಟಿಇಟಿಗೆ ಅರ್ಜಿಯನ್ನು ಹಾಕಲು ಬಯಸುವವರು http://www.schooleducation.kar.nic.in ವೆಬ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಭ್ಯರ್ಥಿಯು ಇತ್ತೀಚಿನ ಭಾವಚಿತ್ರ, ಮತ್ತು ಸಹಿ ಅಪ್ಲೋಡ್ ಮಾಡಬೇಕು. ಅಂಗವಿಕಲ ಕೋಟಾದಡಿ ವಿನಾಯಿತಿ ಬಯಸಿದಲ್ಲಿ ಪಿಎಚ್ ಪ್ರಮಾಣದಪತ್ರ ಅಪ್ಲೋಡ್ ಮಾಡಬೇಕು. ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರಹೊಂದಿರಬೇಕು.

ಆನ್‌ಲೈನ್‌ ನಲ್ಲಿ ಪರೀಕ್ಷಾ ಶುಲ್ಕ

ಆನ್‌ಲೈನ್‌ ನಲ್ಲಿ ಪರೀಕ್ಷಾ ಶುಲ್ಕ

ಶುಲ್ಕ- ಸಾಮಾನ್ಯವರ್ಗ, 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ ಪತ್ರಿಕೆ 1 ಕ್ಕೆ 700 ರೂಪಾಯಿ ಪತ್ರಿಕೆ 1 ಹಾಗೂ ಪತ್ರಿಕೆ 2 ಕ್ಕೆ ಸೇರಿ 1000 ರೂಪಾಯಿ ಪಾವತಿಸಬೇಕು. ಪಜಾ,ಪ.ವರ್ಗ, ದವರಿಗೆ ಪತ್ರಿಕೆ -1ಕ್ಕೆ 350 ರೂಪಾಯಿ ಪತ್ರಿಕೆ 1 ಮತ್ತು 2 ಸೇರಿ 500 ರೂಪಾಯಿ ಇರುತ್ತದೆ. ಎಲ್ಲಾ ಬ್ಯಾಂಕುಗಳಲ್ಲಿ ಇಂಟರ್ನೆಟ್ ಬ್ಯಾಂಕಿಂಗ್, ಡೆಬಿಟ್ ಅಥವಾ ಕ್ರೇಡಿಟ್ ಕಾರ್ಡ್ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರವೇಶ ಪತ್ರ ಡೌನ್‌ಲೋಡ್‌ ಹೇಗೆ?

ಪ್ರವೇಶ ಪತ್ರ ಡೌನ್‌ಲೋಡ್‌ ಹೇಗೆ?

ಶಿಕ್ಷಕರ ಅರ್ಹತಾ ಪರೀಕ್ಷೆಯ ಅರ್ಜಿಯನ್ನು ವೆಬ್‌ ಸೈಟ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸೆಪ್ಟೆಂಬರ್ 30ಕ್ಕೆ ಅರ್ಜಿಯನ್ನು ಸಲ್ಲಿಸಲು ಕಡೆಯದಿನಾಂಕವನ್ನು ನಿಗಧಿ ಮಾಡಲಾಗಿದೆ. ಇನ್ನು ಅಕ್ಟೋಬರ್ 21ರ ಬಳಿಕ ವೆಬ್‌ಸೈಟ್ ನಲ್ಲಿ ಅರ್ಹತಾ ಪ್ರಮಾಣ ಪತ್ರವನ್ನು ಆನ್ಲೈನ್ ಮೂಲಕ ನೋಂದಣಿ ಸಂಖ್ಯೆ ಹಾಗೂ ಜನ್ಮದಿನಾಂಕ ನಮೂದಿಸಿ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ನವೆಂಬರ್ 6ಕ್ಕೆ ಪರೀಕ್ಷೆಯನ್ನು ನಿಗದಿ ಮಾಡಲಾಗಿದದ್ದು. ಬೆಳಗ್ಗೆ ಮತ್ತು ಮಧ್ಯಾಹ್ನ ಪರೀಕ್ಷೆಯು ನಡೆಯಲಿವೆ.

ಶಿಕ್ಷಕರಾಗಲು ಬಯಸುವವರು ಈ ಪರೀಕ್ಷೆಯನ್ನು ಉತ್ತೀರ್ಣರಾಗಲೇ ಬೇಕಾಗಿದೆ. ಮತ್ತೊಮ್ಮೆ 15 ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಶಿಕ್ಷಣ ಸಚಿವರು ತಿಳಿಸಿರುವುದರಿಂದ ಭಾವಿ ಶಿಕ್ಷಕರ ಪಾಲಿಗೆ ಟಿಇಟಿ ಬಹಳಷ್ಟು ಮಹತ್ವದ್ದಾಗಿದೆ.

English summary
Good news for the candidates who want to become teachers. Applications are invited for the Karnataka Teacher Eligibility Test. September 30 is the last day to apply, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X