KSRTC Loss: ಶಕ್ತಿ ಯೋಜನೆಯಿಂದ ನಿಗಮಗಳಿಗೆ ನಷ್ಟ ವಿಚಾರ, ಸಾರಿಗೆ ಸಚಿವರು ಏನಂದ್ರು?
ಬೆಂಗಳೂರು, ಜುಲೈ ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರೆಂಟಿಯಾದ ಶಕ್ತಿ ಯೋಜನೆಯಿಂದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನಲ್ಲಿ ವಾರ್ಷಿಕವಾಗಿ 20 ಲಕ್ಷ ಹೆಚ್ಚು ಪ್ರಯಾಣಿಕರನ್ನು ಕರೆತಂದಿದೆ ಮತ್ತು ಗಮನಾರ್ಹವಾದ ಅಭಿಮಾನವನ್ನು ಸೃಷ್ಟಿಸಿದೆ ಎಂದು ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಹೇಳಿದ್ದಾರೆ.
ಬಸ್ ಟಿಕೆಟ್ ದರ ಏರಿಕೆ ಮಾಡಬೇಕು ಹಾಗೂ ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳಿಗೆ ನಷ್ಟವಾಗುತ್ತಿದೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅವರು ನಮ್ಮ ಮುಂದೆ ಯಾವುದೇ ಬಸ್ ಟಿಕೆಟ್, ಪ್ರಯಾಣದ ದರ ಏರಿಕೆ ಪ್ರಸ್ತಾವನೆ ಇಲ್ಲ ಎಂದರು. ಇದಾಗಿ ಕೆಲ ಸಮಯದ ಬಳಿಕ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಏರಿಕೆ ಪ್ರಸ್ತಾವನೆಯಲ್ಲಿ ಸರ್ಕಾರಕ್ಕೆ ಸಲ್ಲಿಸಲಾಯಿತು.

ಸದ್ಯ ಬಸ್ ಪ್ರಯಾಣ ದರ ಏರಿಕೆ ಯಾವುದನ್ನೂ ಅನುಮೋದಿಸಲಾಗಿಲ್ಲ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಐದು ಭರವಸೆಗಳಲ್ಲಿ ಶಕ್ತಿ ಯೋಜನೆ ಸಹ ಒಂದು. ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಇದರಿಂದ ಯಾವುದೇ ನಷ್ಟ KSRTC, NWKRTC ಸೇರಿದಂತೆ ಯಾವ ಸಾರಿಗೆ ಸಂಸ್ಥೆಗೆ ಆಗಿಲ್ಲ. ಇಂಧನ ಬೆಲೆ ಏರಿಕೆಯಿಂದ ಹೊರೆ ಆಗಿದೆ ಎಂದು ಹೇಳಿದರು.
ಯೋಜನೆಯಿಂದಲ್ಲ ಇಂಧನ ಬೆಲೆ ಏರಿಕೆಯಿಂದ ನಷ್ಟ
ನಾವು 20 ಲಕ್ಷ ಪ್ರಯಾಣಿಕರು ಸಾರ್ವಜನಿಕ ಸಾರಿಗೆ ಬಳಸುತ್ತಿದ್ದಾರೆ. ಹೀಗಿದ್ದಾಗ ಶಕ್ತಿ ಯೋಜನೆ ಯಾಕೆ ದೂಷಿಸುತ್ತೀರಿ. ಎಷ್ಟೋ ಜನರಿಗೆ ಯೋಜನೆಯಿಂದ ಅನುಕೂಲವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ನಷ್ಟವಾಗುತ್ತಿದೆ. ಹೊರತು ಶಕ್ತಿ ಯೋಜನೆಯಿಂದಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನೌಕರರ ವೇತನ ಹೆಚ್ಚಳ, ಕೇಂದ್ರ ಪರಿಹಾರ ನೀಡಿಲ್ಲ
ಸಾರಿಗೆ ನೌಕರರ ಮಾಸಿಕ ಸಂಬಳ ಹೆಚ್ಚಾಗಿದೆ. ಕರ್ನಾಟಕವು ಕೇಂದ್ರ ಸರ್ಕಾರಕ್ಕೆ 4.5 ಲಕ್ಷ ಕೋಟಿ ರೂಪಾಯಿ ತೆರಿಗೆ ಪಾವತಿಸುತ್ತದೆ. ನಮ್ಮ ತೆರಿಗೆ ಪಾವತಿಯು ರಾಜ್ಯದ ಹಣಕಾಸು ಬಜೆಟ್‌ಗಿಂತ ಹೆಚ್ಚಾಗಿದೆ. ಆದರೆ ಕೇಂದ್ರವು ನಮಗೆ ಯಾವುದೇ ಪರಿಹಾರ ನೀಡುತ್ತಿದೆಯೇ ಎಂದು ರೆಡ್ಡಿ ಪ್ರಶ್ನಿಸಿದರು.

ಸಚಿವರು ಹಂಚಿಕೊಂಡ ಮಾಹಿತಿಯ ಪ್ರಕಾರ, ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲು ಮತ್ತು ಶಕ್ತಿ ಯೋಜನೆ (ಜೂನ್ 2022-ಮೇ 2023) ಪರಿಚಯಿಸುವ ಮೊದಲು ಸಂಚಾರ ಆದಾಯವು ರೂ.3,401.54 ಕೋಟಿ ಆದಾಯ ಇತ್ತು. ಶಕ್ತಿ ಯೋಜನೆ ಬಂದ ಬಳಿಕ ರೂ. 4,594.23 ಕೋಟಿ (ಜೂನ್ 2023 ರಿಂದ ಮೇ 2024) ರೂ. ಸಂಗ್ರಹವಾಗಿದೆ ಎಂದು ಅವರು ಸರ್ಕಾರದ ನಡೆ ಸಮರ್ಥಿಸಿಕೊಂಡರು.
ಇನ್ನೂ 1,000 ಕೋಟಿ ರೂ. ಮರುಪಾವತಿ ಮತ್ತು ಮೋಟಾರು ವಾಹನ ಕಾಯ್ದೆಯಡಿ ನಾವು ಪಡೆದಿರುವ 700 ಕೋಟಿ ರೂ. ವಿನಾಯಿತಿ ಸ್ವೀಕರಿಸಬೇಕಾಗಿದೆ. ಇದೆಲ್ಲವೂ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಅವರು ವಿವರಿಸಿದರು.
ಬಸ್ ಪ್ರಯಾಣ ದರ ಏರಿಕೆಗೆ ಮನವಿ
ರಾಜ್ಯ ಸಾರಿಗೆ ಇಲಾಖೆಯು ಆರ್ಥಿಕ ನಷ್ಟಕ್ಕೆ ತುತ್ತಾಗಿದೆ. ಈ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ದರವನ್ನು ಶೇ.15-20ರಷ್ಟು ಹೆಚ್ಚಿಸುವಂತೆ ಕರ್ನಾಟಕ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಹೆಚ್ಚುತ್ತಿರುವ ಇಂಧನ ಬೆಲೆಗಳು, ಬಿಡಿಭಾಗಗಳ ದರ ಹೆಚ್ಚಳ ಮತ್ತು ಸುಮಾರು ಒಂದು ದಶಕದಿಂದ ಪ್ರಯಾಣ ದರವನ್ನು ಬದಲಾಯಿಸದೆ ನೌಕರರ ಸಂಬಳದಿಂದಾಗಿ ಈ ನಷ್ಟಗಳು ಉಂಟಾಗಿವೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಅವರು ಮಾಹಿತಿ ನೀಡಿದರು.
ಉದಾಹರಣೆಗೆ ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ (ಬಿಎಂಟಿಸಿ) ಕಳೆದ 10 ವರ್ಷಗಳಿಂದ ಟಿಕೆಟ್ ದರ ಒಂದೇ ರೀತಿ ಇತ್ತು. ಅದೇ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC). 5 ವರ್ಷಗಳಿಂದ ಪ್ರಯಾಣ ದರ ಏರಿಕೆ ಮಾಡಿಲ್ಲ. ಹಣದುಬ್ಬರ ಮತ್ತು ಇತರ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದರು.
ವರ್ಷವಾರು KSRTC ಆದಾಯದ ವಿವರ
ಇನ್ನೂ KSRTC ಅಧ್ಯಕ್ಷರು, ಶಕ್ತಿ ಯೋಜನೆಯು ಕಳೆದ ಮೂರು ತಿಂಗಳಲ್ಲಿ 295 ಕೋಟಿ ರೂ.ಗಳ ನಷ್ಟ ಎದುರಿಸಿದೆ. ಆದ್ದರಿಂದ ಟಿಕೆಟ್ ಬೆಲೆ ಏರಿಕೆ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
KSRTC ಅಧಿಕಾರಿಗಳ ಪ್ರಕಾರ, ನಿಗಮದ ಆದಾಯವು 2016 ರಲ್ಲಿ 2,738 ಕೋಟಿ ರೂ., 2017 ರಲ್ಲಿ 2,975 ಕೋಟಿ ರೂ., 2018 ರಲ್ಲಿ 3,131 ಕೋಟಿ ರೂ., 2019 ರಲ್ಲಿ 3,182 ಕೋಟಿ ರೂ. 2021 ರಲ್ಲಿ 2,037 ಕೋಟಿ, ಮತ್ತು 2022 ರಲ್ಲಿ 3,349 ಕೋಟಿ ರೂ ಹಾಗೂ 2023-24ರಲ್ಲಿ ಕೆಎಸ್‌ಆರ್‌ಟಿಸಿ ಆದಾಯದಲ್ಲಿ 1,193 ಕೋಟಿ ರೂ.ಗಳಷ್ಟು ಏರಿಕೆ ಸಾಧಿಸಿದೆ ಎಂದು ತಿಳಿಸಿದ್ದಾರೆ.












Click it and Unblock the Notifications