Get Updates
Get notified of breaking news, exclusive insights, and must-see stories!

Bengaluru South: 8 ಕ್ಷೇತ್ರಗಳಿಂದ ಕಾಂಗ್ರೆಸ್‌-ಬಿಜೆಪಿಯಿಂದ ಘಟಾನುಗಟಿ ನಾಯಕರ ಸ್ಪರ್ಧೆ, ಯಾರು? ಯಾವ ಕ್ಷೇತ್ರ? ಪಟ್ಟಿ ನೋಡಿ

ಬೆಂಗಳೂರು, ಏಪ್ರಿಲ್ 14: ಕರ್ನಾಟಕ ರಾಜ್ಯ ವಿಧಾನಸಭಾ ಉಚನಾವಣೆಗೆ ದಿನಗಣನೆ ಆರಂಭವಾಗಿದ್ದು, ಎಲ್ಲ ಪಕ್ಷಗಳು ಪ್ರಚಾರ ಕಾರ್ಯ ಆರಂಭಿಸಿವೆ. ವಿವಿಧ ಪಕ್ಷಗಳ ಅಭ್ಯರ್ಥಿಗಳು ಗುರುವಾರದಿಂದ ನಾಮಪತ್ರಗಳನ್ನು ಸಲ್ಲಿಸುತ್ತಿದ್ದಾರೆ. ಬೃಹತ್ ಬೆಂಗಳೂರು ನಗರ ಜಿಲ್ಲೆಯಲ್ಲಿನ ಈ 08 ವಿಧಾನಸಭಾ ಕ್ಷೇತ್ರಗಳಲ್ಲಿ ಘಟಾನುಘಟಿಗಳೆ ಸ್ಪರ್ಧೆಗೆ ಇಳಿದಿದ್ದಾರೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿದ್ದು, ಅದರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ವ್ಯಾಪ್ತಿಯಲ್ಲಿ ಒಟ್ಟು 08 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಇಲ್ಲಿ ಚುನಾವಣಾ ಕಾವು ದಿನೇ ದಿನೆ ಹೆಚ್ಚುತ್ತಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್‌ ಆದ್ಮಿ ಪಕ್ಷದಿಂದ ಪ್ರಬಲ ನಾಯಕರು ಅಖಾಡಕ್ಕೆ ಇಳಿದಿದ್ದಾರೆ.

Karnataka Polls 2023 : Bengaluru South Assembly Constituencies Party-wise Candidates Know names

ಬೆಂಗಳೂರು ದಕ್ಷಿಣ ಲೋಕಸಭಾ ವ್ಯಾಪ್ತಿಯಲ್ಲಿನ ಎಂಟು ಕ್ಷೇತ್ರಗಳೆಂದರೆ ''ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ, ಗೋವಿಂದರಾಜನಗರ, ವಿಜಯನಗರ, ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಬಡಾವಣೆ, ಜಯನಗರ ಹಾಗೂ ಬೊಮ್ಮನಹಳ್ಳಿ'' ವಿಧಾನಸಭಾ ಕ್ಷೇತ್ರಗಳು.

ಎಲ್ಲ ರಾಜಕೀಯ ಪಕ್ಷಗಳಿಗೂ ಉತ್ತರ ಕರ್ನಾಟಕ, ಕರಾವಳಿ, ಕಲ್ಯಾಣ ಕರ್ನಾಟಕ, ಹಳೆ ಮೈಸೂರು ಭಾಗದ ಕ್ಷೇತ್ರಗಳ ಜೊತೆ ಜೊತೆಗೆ ಬೆಂಗಳೂರಿನ ಕ್ಷೇತ್ರಗಳು ಪ್ರತಿಷ್ಠೆಯ ಕಣವಾಗಿದೆ. ಇಲ್ಲಿ ಗೆಲ್ಲಲೇಬೇಕೆಂದು ಪಣ ತೊಟ್ಟಿವೆ. ಟಿಕೆಟ್ ಪಡೆದದ್ದೆ ತಡ ಅಭ್ಯರ್ಥಿಗಳು ಅಬ್ಬರ ಪ್ರಚಾರ ಆರಂಭಿಸಿದ್ದಾರೆ.

ಹಾಗಾದರೆ ಯಾರು ಯಾವ ಕ್ಷೇತ್ರಳಿಂದ ಸ್ಪರ್ಧಿಸುತ್ತಿದ್ದಾರೆ. ಇದರಲ್ಲಿ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳು ಯಾರು? ಯಾರ ಮುಂದೆ ಸೆಣಸಲಿದ್ದಾರೆ ಎಂಬ ಪಟ್ಟಿ ನಿಮ್ಮ ಮುಂದಿದೆ. ಇದರಲ್ಲಿ ಒಂದೆರಡು ವಿಧಾನಸಭಾ ಕ್ಷೇತ್ರಗಳಿಗೆ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಅಭ್ಯರ್ಥಿ ಘೋಷಣೆ ಬಾಕಿ ಇದೆ.

Karnataka Polls 2023 : Bengaluru South Assembly Constituencies Party-wise Candidates Know names

ಈ ಎಂಟು ಕ್ಷೇತ್ರಗಳ ವಿವಿಧ ಪಕ್ಷಗಳಿಂದ ಕಣಕ್ಕಿಳಿದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ಕ್ಷೇತ್ರ ಬಿಜೆಪಿ ಕಾಂಗ್ರೆಸ್ ಎಎಪಿ ಜೆಡಿಎಸ್
ವಿಜಯನಗರ ಎಚ್‌.ರವೀಂದ್ರ ಪ್ರಿಯಾಕೃಷ್ಣ ಡಾ ರಮೇಶ್‌ ಬೆಲ್ಲಂಕೊಂಡ
ಚಿಕ್ಕಪೇಟೆ ಉದಯ ಗರುಡಾಚಾರ್ ಬ್ರಿಜೇಶ್‌ ಕಾಳಪ್ಪ
ಬಸವನಗುಡಿ ರವಿಸುಬ್ರಹ್ಮಣ್ಯ ಯುಬಿ ವೆಂಕಟೇಶ್ ಅರಮನೆ ಶಂಕರ್
ಪದ್ಮನಾಭನಗರ ವಿ.ರಘುನಾಥ್ ನಾಯ್ಡು ಅಜಯ್‌ ಗೌಡ
ಬಿಟಿಎಂ ಬಡಾವಣೆ ಶ್ರೀಧರ್ ರೆಡ್ಡಿ ರಾಮಲಿಂಗಾರೆಡ್ಡಿ ಶ್ರೀನಿವಾಸ್‌ ರೆಡ್ಡಿ
ಜಯನಗರ ಸಿ.ಕೆ.ರಾಮಮೂರ್ತಿ ಸೌಮ್ಯಾರೆಡ್ಡಿ ಮಹಾಲಕ್ಷ್ಮೀ
ಬೊಮ್ಮನಹಳ್ಳಿ ಸತೀಶ್ ರೆಡ್ಡಿ ಸೀತಾರಾಮ್‌ ಗುಂಡಪ್ಪ
ಗೋವಿಂದರಾಜನಗರ ಪ್ರಿಯಾಕೃಷ್ಣ ಆರ್‌.ಪ್ರಕಾಶ್

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+