ಬೆಂಗಳೂರು: ಜು.7ರ ಪ್ರಮುಖ ರಾಜಕೀಯ ವಿದ್ಯಮಾನಗಳು

ಬೆಂಗಳೂರು, ಜು.7: ವಿವಿಧ ಅಭಿವೃದ್ಧಿ ಪ್ರಾಧಿಕಾರಿಗಳ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಲಿದ್ದಾರೆ. ರಾಜ್ಯ ಆರೋಗ್ಯ ಇಲಾಖೆ, ವೈದ್ಯಕೀಯ ಗುತ್ತಿಗೆ ನೌಕರರಿಂದ 'ಬೆಂಗಳೂರು ಚಲೋ' ಪ್ರತಿಭಟನೆ ಸಹಿತ ಇಂದಿನ (07-07-2022) ನಗರದಲ್ಲಿರುವ ವಿದ್ಯಾಮಾನಗಳು, ರಾಜಕೀಯ ನಾಯಕರ ಕಾರ್ಯಕ್ರಮ ಕುರಿತು ಇಲ್ಲಿ ತಿಳಿದುಕೊಳ್ಳಿ..

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ:

ಬೆಳಗ್ಗೆ 9.30: ಭಾರತೀಯ ವಿದ್ಯುತ್ ಕೈಗಾರಿಕೆಗಳ ಸಂಘ ಆಯೋಜಿಸಿರುವ 11ನೇ ಸ್ಟಾರ್ಟೇಜಿಕ್ ಎಲೆಕ್ಟ್ರಾನಿಕ್ಸ್ ಸಮ್ಮಿಟ್ (ಎಸ್‌ಇಎಸ್‌2022), ಸ್ಥಳ: ಹೋಟೆಲ್ ಲಲಿತ್ ಅಶೋಕ್, ಕುಮಾರಕೃಪಾ ರಸ್ತೆ, ಬೆಂಗಳೂರು.

ಬೆಳಗ್ಗೆ 10.45 : ಕೋರಿಯಾ ದೇಶದ ರಾಯಭಾರಿ ಎಚ್.ಇ. ಚಾಂಗ್ ಜಿ ಬೊಕ್ ಜತೆ ಚರ್ಚೆ, ಸ್ಥಳ: ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣ, ಬೆಂಗಳೂರು.

ಬೆಳಗ್ಗೆ 11ರಿಂದ : ಕೈಗಾರಿಕೆಗಳ ಕಾರಿಡಾರ್ ಯೋಜನೆ ಕುರಿತು ಅಪೆಕ್ಸ್ ಮಾನಿಟರಿಂಗ್ ಅಥಾರಿಟಿ ಜತೆ ಮೊದಲ ಸಭೆ, ಸ್ಥಳ: ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣ, ಬೆಂಗಳೂರು.

Karnataka Political News & Developments June 7th Political Parties News and Updates

ಮಧ್ಯಾಹ್ನ 12.30: ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ ಜತೆ ಸಭೆ, ಸ್ಥಳ: ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣ, ಬೆಂಗಳೂರು.

ಮಧ್ಯಾಹ್ನ 1.30: ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಸಭೆ, ಸ್ಥಳ: ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣ, ಬೆಂಗಳೂರು.

ಮಧ್ಯಾಹ್ನ 3.30: ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ ಜತೆ ಸಭೆ, ಸ್ಥಳ: ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣ, ಬೆಂಗಳೂರು.

ಸಂಜೆ 4.15: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಸಭೆ, ಸ್ಥಳ: ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣ, ಬೆಂಗಳೂರು.

ಸಂಜೆ 5: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಜತೆ ಸಭೆ, ಸ್ಥಳ: ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣ, ಬೆಂಗಳೂರು.

ಬಿಜೆಪಿ

ಬೆಳಗ್ಗೆ 11: ಬೇಡಿಕೆಗಳ ಬಗ್ಗೆ ಚರ್ಚಿಸಲು ಹೊರ ಗುತ್ತಿಗೆ ನೌಕರರು ಹಾಗೂ ಎನ್‌ಎಚ್ಎಂ ಅಡಿ ಸೇವೆಯಲ್ಲಿರುವ ಗುತ್ತಿಗೆ ಸಿಬ್ಬಂದಿ ಜತೆ ಸಭೆ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಭಾಗಿ, ಸ್ಥಳ: ಮೂರನೇ ಮಹಡಿ, ಸಚಿವರ ಕೊಠಡಿ 339, ವಿಧಾನಸೌಧ, ಬೆಂಗಳೂರು.

ಬೆಳಗ್ಗೆ 10.30: ಶ್ರೀ ಯದುಗಿರಿ ಯತಿರಾಜ ಮಠದಲ್ಲಿ ಶಾಂತಿಮೂರ್ತಿ ಆಚಾರ್ಯ ಶ್ರೀ ರಾಮಾನುಜರ ಪ್ರತಿಮೆ ಸ್ಥಾಪನೆ, ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥ್ ನಾರಾಯಣ್ ಭಾಗಿ, ಸ್ಥಳ: ಶೂರ್ಯಾರ್ ಮಂದಿರ, ಶ್ರೀನಗರ ಲೇಹ್ ನಗರ ರಸ್ತೆ, ಪಾಂಟ್ ಆಸ್ಪತ್ರೆ ಮುಂಭಾಗ, ಗುಜಾರ್‌ವಾನ್ ಮೊಹಲ್ಲಾ, ಸೋನ್‌ವಾರ್ ಬಾಗ್, ಶ್ರೀನಗರ, ಜಮ್ಮುಮತ್ತು ಕಾಶ್ಮೀರ.

ಬೆಳಗ್ಗೆ 8.30: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಂತರಪಾಳ್ಯದಲ್ಲಿ ನಿರ್ಮಿಸಲಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕನಕಭವನ, ಚಂದ್ರಲೇಔಟ್ ಪ್ರಾಥಮಿಕ ಆರೋಗ್ಯ ಕೇಂದ್ರ, ಸ್ಪೆಕ್ಟ್ರಮ್ ಬೀದಿ ದೀಪಗಳ ಕಂಟ್ರೋಲ್ ರೂಮ್, ಎಂ.ಸಿ.ಬಡಾವಣೆ ಆಸ್ಪತ್ರೆ ಹಾಗೂ ಅಗ್ರಹಾರ ದಾಸರಹಳ್ಳಿ ಆಸ್ಪತ್ರೆ ಕಾಮಗಾರಿಗಳ ಸ್ಥಳ ಪರಿವೀಕ್ಷಣೆ, ವಸತಿ ಸಚಿವ ವಿ.ಸೋಮಣ್ಣ ಭಾಗಿ, ಸ್ಥಳ: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಪಂತರಪಾಳ್ಯ, ಚಂದ್ರಾಲೇಔಟ್, ಎಂ.ಸಿ.ಬಡಾವಣೆ, ಅಗ್ರಹಾರ ದಾಸರಹಳ್ಳಿ, ಬೆಂಗಳೂರು.

ಪ್ರತಿಭಟನೆ

ಬೆಳಗ್ಗೆ 11: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ-ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಬೆಂಗಳೂರು ಚಲೋ', ಸ್ಥಳ: ಸ್ವಾತಂತ್ರ್ಯ ಉದ್ಯಾನವನ, ಬೆಂಗಳೂರು.

Recommended Video

      ಚಿರಂಜೀವಿ‌ ಹೆಸರು ಬದಲಾಯಿಸುವುದರಿಂದ ಹಣೆಬರಹ ಬದಲಾಗುತ್ತಾ? ನೆಟ್ಟಿಗರ ಕಾಮೆಂಟ್ ಏನು? | OneIndia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+