ಬೆಂಗಳೂರು: ಜು.10ರ ಪ್ರಮುಖ ರಾಜಕೀಯ ವಿದ್ಯಮಾನಗಳು
ಬೆಂಗಳೂರು, ಜು.10: ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಸಂಸ್ಥಾಪಕರು ಮತ್ತು ಹಾಲಿ ನಿರ್ದೇಶಕ ಡಾ. ಎಲ್. ಶಿವಲಿಂಗಯ್ಯನವರ 'ನುಡಿ ನಮನ', ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿರಿಯ ಸಾಹಿತಿ ಡಾ. ಕೋ. ಚೆನ್ನಬಸಪ್ಪ ಅವರ 'ಜನ್ಮಶತಾಬ್ದಿ ಸಮಾರಂಭ, ಕಾರ್ಯಕ್ರಮ ಸಹಿತ ನಗರದಲ್ಲಿ ಇಂದಿನ (10-07-2022) ವಿದ್ಯಾಮಾನಗಳು, ರಾಜಕೀಯ ನಾಯಕರ ಕಾರ್ಯಕ್ರಮ ಕುರಿತು ಇಲ್ಲಿ ತಿಳಿದುಕೊಳ್ಳಿ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಳಗ್ಗೆ 11: ನಿವೃತ್ತ ಎಂಜಿನಿಯರ್ ಇನ್ ಚೀಫ್, ವಿಶೇಷ ಕಾರ್ಯದರ್ಶಿ ಕರ್ನಾಟಕ ಸರ್ಕಾರ ಹಾಗೂ ಆನಂದ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಸಂಸ್ಥಾಪಕರು ಮತ್ತು ಹಾಲಿ ನಿರ್ದೇಶಕ ಡಾ.ಎಲ್. ಶಿವಲಿಂಗಯ್ಯನವರ 'ನುಡಿ ನಮನ' ಕಾರ್ಯಕ್ರಮ, ಸ್ಥಳ: ಅಂಬೇಡ್ಕರ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ, ನಾಗರಬಾವಿ ರಸ್ತೆ, ಬೆಂಗಳೂರು.
ಬಿಜೆಪಿ
ಬೆಳಗ್ಗೆ 10.30: ಬಿಜೆಪಿ ಅಸಂಘಟಿತ ಕಾರ್ಮಿಕರ ಪ್ರಕೋಷ್ಠದ ರಾಜ್ಯ ಕಾರ್ಯಕಾರಿಣಿ ಸಭೆ, ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ಭಾಗಿ, ಬಿಜೆಪಿ ಕಾರ್ಯಾಲಯ, ಜಗನ್ನಾಥ ಭವನ, ಮಲ್ಲೇಶ್ವರಂ.

ಕಾಂಗ್ರೆಸ್
ಬೆಳಗ್ಗೆ 9.30: ಬಕ್ರೀದ್ ಹಬ್ಬ- ಪ್ರಾರ್ಥನಾ ಸಭೆಯಲ್ಲಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಭಾಗಿ, ಸ್ಥಳ: ಈದ್ಗಾ ಮೈದಾನ, ಚಾಮರಾಜಪೇಟೆ, ಬೆಂಗಳೂರು.
ಜನ್ಮಶತಾಬ್ದಿ ಸಮಾರಂಭ
ಬೆಳಗ್ಗೆ 10.30: ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿರಿಯ ಸಾಹಿತಿ ನಾಡೋಜ ಡಾ. ಕೋ. ಚೆನ್ನಬಸಪ್ಪ ಅವರ ಜನ್ಮಶತಾಬ್ದಿ ಸಮಾರಂಭ, ಸುಪ್ರೀಂಕೋರ್ಟ್ ವಿಶ್ರಾಂತ ನ್ಯಾ. ಶಿವರಾಜ ವಿ.ಪಾಟೀಲ್, ರಾಜ್ಯ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ. ಬಿ. ಎಲ್. ಶಂಕರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ಹಾಗೂ ಇನ್ನಿತರರು ಭಾಗಿ, ಸ್ಥಳ : ಮಹಾದೇವ.












Click it and Unblock the Notifications