ಸದನದಲ್ಲಿ ಸ್ಪೀಕರ್ ಅವರೇ ಸುಪ್ರೀಂ: ಸಿದ್ದರಾಮಯ್ಯ

Recommended Video

      Karnataka Crisis : ಸದನ ಹೇಗೆ ನಡೆಸೋದು ಸ್ಪೀಕರ್‍ಗೆ ತಿಳಿದಿರತ್ತೆ

      ಬೆಂಗಳೂರು, ಜುಲೈ 19: ಸದನ ಹೇಗೆ ನಡೆಸಬೇಕು ಎನ್ನುವುದು ಸ್ಪೀಕರ್ ಅವರಿಗೆ ತಿಳಿದಿರುತ್ತದೆ. ಅದು ಅವರ ಅಧಿಕಾರ ವ್ಯಾಪ್ತಿಯಲ್ಲಿರುತ್ತದೆ ಎಂದು ಸಮನ್ವಯ ಸಮಿತಿ ನಾಯಕ ಸಿದ್ದರಾಮಯ್ಯ ಹೇಳಿದರು.

      ವಿಧಾನಸಭೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ಸದನದಲ್ಲಿ ಸ್ಪೀಕರ್ ಅವರೇ ಸುಪ್ರೀಂ ಆಗಿರುತ್ತಾರೆ. ಸದನ ಹೇಗೆ ನಡೆಯಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ ಎಂದರು.

      Photos : ಸದನದಲ್ಲಿ ಗದ್ದಲ, ಅಹೋರಾತ್ರಿ ಧರಣಿ, ಮಾರ್ನಿಂಗ್ ವಾಕ್

      ವಿಶ್ವಾಸ ಮತದ ಕುರಿತಂತೆ ಸದನದಲ್ಲಿ ಇನ್ನೂ ಚರ್ಚೆ ನಡೆಯುತ್ತಿದೆ. ವಿಶ್ವಾಸಮತ ಪ್ರಕ್ರಿಯೆ ಆರಂಭವಾದ ಬಳಿಕ ರಾಜ್ಯಪಾಲರು ಮಧ್ಯಪ್ರವೇಶ ಮಾಡುವಂತಿಲ್ಲ. ಕ್ರಿಯಾಲೋಪದ ಮೇಲೆ ಇನ್ನೂ ರೂಲಿಂಗ್ ನೀಡಿಲ್ಲ. ಚರ್ಚೆ ಮುಗಿದ ಬಳಿಕ ರೂಲಿಂಗ್ ಮಾಡಲು ನಮಗೆ ಅವಕಾಶ ನೀಡುತ್ತಾರೆ ಎಂದು ತಿಳಿಸಿದರು.

      Karnataka political crisis siddaramaiah speaker is supreme in assembly

      'ಬಿಜೆಪಿಯವರು ಹಣ ನೀಡಿದ್ದರು ಎಂಬ ಬಗ್ಗೆ ನಾನು ಹೇಳಿದ್ದಾ ಅಥವಾ ಶ್ರೀನಿವಾಸಗೌಡ ಹೇಳಿದ್ದಾ? ಶ್ರೀನಿವಾಸಗೌಡ ಅವರು ಬಿಜೆಪಿ ಮುಖಂಡರ ಹೆಸರು ಸಮೇತ ಹೇಳಿದ್ದಾರೆ. ವ್ಯಾಪಾರ ಮಾಡಿ ಶಾಸಕರನ್ನು ಮುಂಬೈಗೆ ಕಳುಹಿಸಿರುವ ಬಿಜೆಪಿಯವರು ಆತುರದಲ್ಲಿದ್ದಾರೆ ಎಂದು ಟೀಕಿಸಿದರು.

      ಚರ್ಚೆ ಇನ್ನೂ ಮುಗಿದಿಲ್ಲ. 20 ಶಾಸಕರು ಇದರಲ್ಲಿ ಭಾಗವಹಿಸಬೇಕಿದೆ. ಇದು ಇಂದು ಮುಗಿಯುತ್ತದೆ ಎಂದು ನನಗೆ ಅನಿಸುತ್ತಿಲ್ಲ. ಸೋಮವಾರವೂ ಇದು ಮುಂದುವರಿಯಬಹುದು ಎಂದು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+