ರಾಜ್ಯ ಸರ್ಕಾರದ ವಿರುದ್ಧ ಕೇಂದ್ರಕ್ಕೆ ರಾಜ್ಯಪಾಲರ ವರದಿ

ಬೆಂಗಳೂರು, ಜುಲೈ 20: ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿ, ವಿಶ್ವಾಸಮತ ಯಾಚನೆಗೆ ಎರಡು ಬಾರಿ ಗುಡುವು ನೀಡಿದ್ದರೂ ಅದನ್ನು ಕಡೆಗಣಿಸಿರುವುದು ಮುಂತಾದ ವಿಚಾರಗಳ ಕುರಿತು ರಾಜ್ಯಪಾಲ ವಜೂಭಾಯಿ ವಾಲಾ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ತಾವು ನೀಡಿದ್ದ ಎರಡನೆಯ ಗಡುವನ್ನು ಕೂಡ ಉಲ್ಲಂಘಿಸಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆಯನ್ನು ಮುಂದಕ್ಕೆ ಹಾಕಿದ್ದರಿಂದ ಶುಕ್ರವಾರ ರಾತ್ರಿಯೇ ರಾಜ್ಯಪಾಲರು ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ರವಾನಿಸಿದ್ದಾರೆ.

ರಾಜ್ಯ ರಾಜಕೀಯದ ಸಂಪೂರ್ಣ ವಿವರಗಳನ್ನು ಅವರು ವರದಿಯಲ್ಲಿ ತಿಳಿಸಿದ್ದಾರೆ. ರಾಜ್ಯ ಗೃಹ ಕಾರ್ಯದರ್ಶಿ, ರಾಜ್ಯ ವಿಧಾನಸಭೆ ಕಾರ್ಯದರ್ಶಿ ಮತ್ತು ವಿಶೇಷಾಧಿಕಾರಿಗಳು ನೀಡಿರುವ ಒಟ್ಟಾರೆ ರಾಜಕೀಯ ಸ್ಥಿತಿಗತಿಗಳು, ಬೆಳವಣಿಗೆಗಳ ಕುರಿತಾದ ವರದಿಗಳನ್ನು ಪರಿಶೀಲಿಸಿ ರಾಜ್ಯಪಾಲರು ವರದಿ ಸಿದ್ಧಪಡಿಸಿದ್ದಾರೆ.

Karnataka political crisis governor report to union home ministry

ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಇದೆ. ವಿಶ್ವಾಸಮತ ಯಾಚನೆ ಮಾಡುವಂತೆ ಎರಡು ಬಾರಿ ಸೂಚನೆ ನೀಡಿದ್ದರೂ ಅದನ್ನು ಮುಖ್ಯಮಂತ್ರಿ ಪಾಲಿಸಿಲ್ಲ. ಕೆಲವು ಶಾಸಕರು ಮತ್ತು ಸಚಿವರು ತಮ್ಮ ಕೈಗೆ ಖುದ್ದಾಗಿ ರಾಜೀನಾಮೆ ಪತ್ರವನ್ನು ನೀಡಿ ಹೋಗಿದ್ದಾರೆ. ಹೀಗಾಗಿ ರಾಜ್ಯದಲ್ಲಿನ ಸರ್ಕಾರಕ್ಕೆ ಈಗ ಬಹುಮತವಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ರಾಜ್ಯಪಾಲರ ವರದಿಯನ್ನು ಪರಿಶೀಲಿಸಲಿರುವ ಕೇಂದ್ರ ಗೃಹ ಇಲಾಖೆ ಸೋಮವಾರದವರೆಗೂ ಕಾದು ನೋಡಲಿದೆ. ಸೋಮವಾರದ ಬೆಳವಣಿಗೆಗಳ ಬಳಿಕ ಮತ್ತೊಂದು ವರದಿ ತರಿಸಿಕೊಳ್ಳಲಿದೆ. ಸರ್ಕಾರ ವಿಶ್ವಾಸಮತ ಯಾಚನೆಗೆ ಮುಂದಾಗದೆ ಇದ್ದರೆ ಮುಂದಿನ ಕ್ರಮಕ್ಕೆ ಮುಂದಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+