Bengaluru-Mysuru Expressway: ಹೈಕೋರ್ಟ್‌ನಲ್ಲಿ ಟೋಲ್ ಸಮಸ್ಯೆ ಸ್ವಯಂಪ್ರೇರಿತ ವಿಚಾರಣೆ, 3 ವಾರದಲ್ಲಿ ಉತ್ತರಿಸುವಂತೆ HC ಸೂಚನೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಂಡ ನೂತನ ಬೆಂಗಳೂರು ಮೈಸೂರು ದಶಪಥ ರಸ್ತೆಯಲ್ಲಿನ ಸಮಸ್ಯೆಗಳ ವಿಚಾರ ಕರ್ನಾಟಕ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದೆ.

ಬೆಂಗಳೂರು, ಮಾರ್ಚ್ 15: ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಂಡ ನೂತನ ಬೆಂಗಳೂರು ಮೈಸೂರು ದಶಪಥ ರಸ್ತೆಯಲ್ಲಿನ ಸಮಸ್ಯೆಗಳ ವಿಚಾರ ಕರ್ನಾಟಕ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದೆ.

ಈ ದಶಪಥ ಹೆದ್ದಾರಿಯಲ್ಲಿನ ಟೋಲ್ ಶುಲ್ಕ ಸಂಗ್ರಹಣೆ ಆರಂಭದ ಸುತ್ತ ಉಂಟಾದ ವಿವಿಧ ಸಮಸ್ಯೆಗಳ ಕುರಿತಾಗಿ ಕರ್ನಾಟಕ ಹೈಕೋರ್ಟ್ ಸ್ವಯಂ ಪ್ರೇರಿತ ವಿಚಾರಣೆ ನಡೆಸಿದೆ (ಸೂಮೋಟೊ). ಈ ಸಮಸ್ಯೆಗಳ ಬಗ್ಗೆ ಮೂರು ವಾರದಲ್ಲಿ ಉತ್ತರಿಸುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಸೂಚನೆ ನೀಡಿದೆ.

Karnataka High Court Takes Suo Motu cognisance toll collection issue Bengaluru Mysuru expressway

ಬುಧವಾರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠವು ಈ ಸಮಸ್ಯೆಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿತು. ವಿವಿಧ ದಿನಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳು ನೂತನ ದಶಪಥ ಹೆದ್ದಾರಿಯಲ್ಲಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತವೆ. ಅಲ್ಲದೇ ಪ್ರಯಾಣಿಕರು ಹೇಳುತ್ತಿರುವ ಸಮಸ್ಯೆಗಳು ಮತ್ತು ಎಕ್ಸ್‌ಪ್ರೆಸ್‌ವೇಯಲ್ಲಿನ ಟೋಲ್ ಬೂತ್‌ಗಳ ಪರಿಸ್ಥಿತಿಯನ್ನು ಎತ್ತಿ ತೋರಿಸಿವೆ ಎಂದು ಅಭಿಪ್ರಾಯಪಟ್ಟಿತು.

ಬೆಂಗಳೂರು ಮತ್ತು ಕನಕಪುರ ನಡುವಿನ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್) ವಿಸ್ತರಣೆಯ ನಡೆಯುತ್ತಿರುವ ಕಾಮಗಾರಿಯಲ್ಲಿ ಸರಿಯಾದ ಸೂಚನಾ ಫಲಕ ಅಳವಡಿಸಿಲ್ಲ. ಇಲ್ಲಿ ಸುರಕ್ಷತಾ ಕ್ರಮಗಳ ಕೊರತೆ ಇದೆ ಎಂದು 2022 ರಲ್ಲಿ ಸಲ್ಲಿಸಲಾದ ಪಿಐಎಲ್ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈಗಿನ ಸಮಸ್ಯೆಗಳ ಪೀಠ ಗಂಭೀರವಾಗಿ ಪರಿಗಣಿಸಿದೆ.

ಎಕ್ಸ್‌ಪ್ರೆಸ್‌ವೇ ನಲ್ಲಿ ಟೋಲ್ ಶುಲ್ಕ ಸಂಗ್ರಹ ಕುರಿತು ಪತ್ರಿಕೆಗಳು ಸಾಲು ಸಾಲು ಪತ್ರಿಕಾ ವರದಿಗಳು ಬಿತ್ತರವಾಗಿವೆ. ಎಕ್ಸ್‌ಪ್ರೆಸ್‌ವೇ ಸ್ಟ್ರೆಚ್ ಸಂಪೂರ್ಣ ನಿರ್ಮಾಣ ಕಾರ್ಯ ಪೂರ್ಣಗೊಳಿಸದೆ ಟೋಲ್ ಸಂಗ್ರಹ ಪ್ರಾರಂಭಿಸಲಾಗಿದೆ ಎಂಬುದನ್ನು ವರದಿ ಮೂಲಕ ಗಮನಿಸಿರುವುದಾಗಿ ನ್ಯಾಯಪೀಠ ಹೇಳಿದೆ. ತಡೆಗೋಡೆ ಅಸಮರ್ಪಕ ಕಾರ್ಯ ನಿರ್ವಹಣೆಯು ಟೋಲ್ ಬೂತ್‌ಗಳಲ್ಲಿ ಹಾದು ಹೋಗುವ ವಾಹನಗಳಿಗೆ ಸಣ್ಣ ಹಾನಿ ಉಂಟುಮಾಡುತ್ತದೆ. ಇನ್ನೂ ಸ್ವಯಂಚಾಲಿತ ಫಾಸ್ಟ್ಯಾಗ್ ಸ್ಕ್ಯಾನರ್‌ಗಳಲ್ಲಿನ ತಾಂತ್ರಿಕ ದೋಷದಿಂದ ಟೋಲ್ ಗೇಟ್ ಸಿಬ್ಬಂದಿಯುನ್ನು ಮ್ಯಾನುವಲ್ ಸ್ಕ್ಯಾನರ್‌ ಬಳಸುವಂತೆ ಒತ್ತಾಯ ಕೇಳಿ ಬಂದಿದೆ.

Karnataka High Court Takes Suo Motu cognisance toll collection issue Bengaluru Mysuru expressway

ಫಾಸ್ಟ್ಯಾಗ್ ವ್ಯವಸ್ಥೆಯಲ್ಲಿನ ದೋಷದಿಂದಾಗಿ ಹಲವಾರು ಪ್ರಯಾಣಿಕರು ಸರ್ವೀಸ್ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಇದರಿಂದ ಸಂಚಾರ ದಟ್ಟಣೆ ಉಂಟಾಗಿ ಹೆಚ್ಚು ಸಮಯ ಕಳೆಯಬೇಕಾಗಿದೆ ಇಂತಹ ಅನೇಕ ಸಮಸ್ಯೆ ಕುರಿತು ಪತ್ರಿಕೆಗಳು ವರದಿ ಮಾಡಿವೆ.

ರಾಷ್ಟ್ರೀಯ ಹೆದ್ದಾರಿಗಳ ಬಳಕೆದಾರರ ಶುಲ್ಕ (ಟೋಲ್ ಶುಲ್ಕ) ಸಂಗ್ರಹಿಸುವ ಮೊದಲು ನಿಯಮಗಳಡಿ ಸಾರ್ವಜನಿಕವಾಗಿ ತಿಳಿಸಬೇಕು. ಅದರೊಂದಿಗೆ ವಿವಿಧ ಪೂರ್ವಾಪೇಕ್ಷಿತ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆದರೆ ಇಲ್ಲಿ ಹಾಗೇ ಆಗಿಲ್ಲ ಎಂಬುದು ಎದ್ದು ಕಾಣುತ್ತದೆ. ಈ ಎಲ್ಲ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪರಿಗಣಿಸಬೇಕಾಗಿದೆ ಎಂದು ಹೇಳಿದ ನ್ಯಾಯಪೀಠ ವಿಚಾರಣೆಯನ್ನು ಏಪ್ರಿಲ್ ಎರಡನೇ ವಾರಕ್ಕೆ ಮುಂದೂಡಿತು.

ಬೆಂಗಳೂರು-ಕನಕಪುರ ಮಾರ್ಗವನ್ನು ವಿಸ್ತರಿಸುವ ಕುರಿತು, ಹೆದ್ದಾರಿ ಪ್ರಾಧಿಕಾರ ಮಾಡಿದ ಹಕ್ಕುಗಳನ್ನು ಪರಿಶೀಲನೆ ಕುರಿತಾಗಿ ನ್ಯಾಯವಾದಿ ಶಿವಪ್ರಸಾದ್ ಶಾಂತನಗೌಡರ್ ಅವರನ್ನು ನ್ಯಾಯಾಲಯದ ಆಯುಕ್ತರನ್ನಾಗಿ ಪೀಠವು ನೇಮಿಸಿತು.

ಗುತ್ತಿಗೆದಾರರ ಬದಲಾವಣೆಯಿಂದ ಕೆಲವು ಸಮಸ್ಯೆಗಳಿವೆ. ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ಹಿಂದಿನ ಸಂಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು. ಹೊಸ ಗುತ್ತಿಗೆದಾರರು ಯೋಜನೆಯನ್ನು ವಹಿಸಿಕೊಂಡಿದ್ದಾರೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಹೆದ್ದಾರಿ ಪ್ರಾಧಿಕಾರ ಕೋರ್ಟ್‌ಗೆ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+