ಕಾಂಗ್ರೆಸ್‌ನವರೇ ರಾಜ್ಯ ಅಭಿವೃದ್ಧಿ ಆಗಿಲ್ಲವೆಂದು ಒಪ್ಪಿಕೊಂಡಿದ್ದಾರೆ: ಸಿಎಂಗೆ ಆರ್.ಅಶೋಕ್ ಗುನ್ನ

ಬೆಂಗಳೂರು, ನವೆಂಬರ್ 01: ಕರ್ನಾಟಕದಲ್ಲಿ ಗ್ಯಾರೆಂಟಿ ಯೋಜನೆಗಳು ಸರಿಯೋ ತಪ್ಪೋ ಎಂಬ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಇದರ ಮೇಲೆ ಟೀಕಿಸಿದ್ದ ಸಿದ್ದರಾಮಯ್ಯ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ಅವರು, ಕಾಂಗ್ರೆಸ್ ಪಕ್ಷ ನಾಯಕರು ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡಿದ್ದನ್ನೇ ವಿವರಿಸಿದ್ದಾರೆ. ಕೇಂದ್ರ ಸರ್ಕಾರದ ಸಾಲಕ್ಕೂ ರಾಜ್ಯದಲ್ಲಿ ನೀವು ಮಾಡಿರುವ ಸಾಲಕ್ಕೂ ವ್ಯತ್ಯಾಸವಿದೆ ಎಂದು ಸಿಎಂಗೆ ಟಾಂಗ್ ಕೊಟ್ಟಿದ್ದಾರೆ.

ಗ್ಯಾರೆಂಟಿ ಯೋಜನೆಗಳಿಂದಾಗಿ ರಾಜ್ಯಕ್ಕೆ ಅಭಿವೃದ್ಧಿ ಒದಗಿಸಲಾಗಿಲ್ಲ ಎಂದಿರುವ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಗ್ಯಾರೆಂಟಿ ಯೋಜನೆಗಳಿಂದ ರಾಜ್ಯ ಅಭಿವೃದ್ಧಿ, ಬೆಳವಣಿಗೆ ಸ್ಥಗಿತಗೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಗಳನ್ನು ಆರ್.ಅಶೋಕ್ ಅವರು ಶುಕ್ರವಾರ ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ.

Karnataka govt Which Implemented Guarantee Scheme has Failed to Develop all Fronts R Ashok

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರವು ಮೂಲಸೌಕರ್ಯಗಳನ್ನು ನಿರ್ಮಿಸಲು ಮತ್ತು ಕ್ಯಾಪೆಕ್ಸ್‌ನಲ್ಲಿ ಅಗಾಧವಾಗಿ ಖರ್ಚು ಮಾಡಲು ಗಮನ ಹರಿಸುತ್ತಿದೆ. ಕೇಂದ್ರ ಬಜೆಟ್ 2024-25 ರಲ್ಲಿ ಬಂಡವಾಳ ವೆಚ್ಚವನ್ನು ಶೇಕಡಾ 11ರಷ್ಟರಿಂದ ₹11.11 ಲಕ್ಷ ಕೋಟಿಗೆ ಏರಿಕೆ ಮಾಡಿದೆ.ಅಂದರೆ ಜಿಡಿಪಿ 3.4 ರಷ್ಟು ಎಂದು ತಿಳಿಸಿದರು.

ಇನ್ನೂ ಕರ್ನಾಟಕದಲ್ಲಿ ನಿಮ್ಮ ಹಣಕಾಸು ನಿರ್ವಹಣೆಗೆ ನೋಡುವುದಾದರೆ, 2023-24ರಲ್ಲಿ ರಾಜ್ಯದ ಬಜೆಟ್ ಗಾತ್ರ 3.17 ಲಕ್ಷ ಕೋಟಿ ರೂ.ನಿಂದ 2024-25ರಲ್ಲಿ3.71 ಲಕ್ಷ ಕೋಟಿ ರೂ.ಗೆ ಹೆಚ್ಚಾಗಿದೆ. ಅಂದರೆ ಒಟ್ಟು ಸುಮಾರು 54,000 ಕೋಟಿಯಷ್ಟು ಏರಿಕೆ ಆಗಿದೆ. ಸಾಲವು ಸಹ 25,000 ಕೋಟಿ ರೂ.ಗಳಷ್ಟು ಏರಿಕೆ ಕಂಡಿದೆ.

ಇನ್ನೂ ರಾಜ್ಯದಲ್ಲಿ 2023-24ರಲ್ಲಿ 54 ಸಾವಿರ ಕೋಟಿಯಿಂದ ಬಂಡವಾಳ ಹೂಡಿಕೆಯು 2024-25ರಲ್ಲಿ 55 ಸಾವಿರ ಕೋಟಿಗೆ ಅಂದರೆ ಕೇವಲ ರೂ.1,000 ಕೋಟಿಗಳಷ್ಟು ಏರಿಕೆ ಕಂಡಿದೆ. ಸಾಲ ಹೆಚ್ಚುವ ಜೊತೆಗೆ ಬಜೆಟ್ ಗಾತ್ರವು ಹೆಚ್ಚತೊಡಗಿದೆ. ಆದರೆ ಬಂಡವಾಳದ ದರ ಏರಿಕೆ ಅದೇ ಸಮಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿಲ್ಲ? ಇಳಿಕೆ ಏಕಾಗಿದೆ ಎಂದು ಸಿದ್ದರಾಮಯ್ಯರನ್ನು ಅವರು ಪ್ರಶ್ನಿಸಿದ್ದಾರೆ.

ಸಾಲದ ಹಣ ಎಲ್ಲಿ ಹೋಗುತ್ತಿದೆ? ಬಜೆಟ್ ಗಾತ್ರವು ವಿಸ್ತರಿಸುತ್ತಿರುವಾಗ, ಹೆಚ್ಚುವರಿ ಹಣ ಏನಾಗುತ್ತಿದೆ. ನಮ್ಮ ಎಲ್ಲ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಉತ್ತರಿವಿದೆಯೆ? ಎಂದು ತಿವಿದರು.

ಕಾಂಗ್ರೆಸ್ ನಾಯಕರೇ ಒಪ್ಪಿಕೊಂಡಿದ್ದಾರೆ...!

ಕರ್ನಾಟಕದ ಆರ್ಥಿಕ ಪರಿಸ್ಥಿತಿಯನ್ನು ಗಮನಿಸುವುದಾದರೆ, ಬಿಜೆಪಿ ಹೇಳುತ್ತಿರುವುದನ್ನು ಬಿಟ್ಟು ಬಿಡಿ. ರಾಜ್ಯದ ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೆಳವಣಿಗೆ ಸ್ಥಗಿತಗೊಂಡಿದೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಹಣ ಹುಡುಕುವುದು ಸುಲಭವಲ್ಲ ಎಂದು ನಿಮ್ಮ ಸ್ವಂತ ಹಣಕಾಸು ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಅವರು ಸಾರ್ವಜನಿಕವಾಗಿ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಹ ಈ ವರ್ಷ ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದರು ಎಂಬುದನ್ನು ಸಿಎಂ ಗಮನಕ್ಕೆ ತಂದರು.

ಕರ್ನಾಟಕ ರಾಜ್ಯ ಕಾಂಗ್ರೆಸ್‌ ಸರ್ಕಾರ ರಾಜ್ಯದ ಪ್ರತಿ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡದೇ ದಯನೀಯವಾಗಿ ವಿಫಲವಾಗಿದ್ದಾರೆ. ಇದೊಂದು ರಾಜ್ಯಕ್ಕೆ ಶಾಪವಾಗಿ ಪರಿಣಮಿಸಿದೆ ಎಂದು ಲೇವಡಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+