ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದ್ವಿಪಕ್ಷೀಯ ಸಹಕಾರ: ಕರ್ನಾಟಕ ಮತ್ತು ಇಂಗ್ಲೆಂಡ್ ನಡುವೆ ಒಡಂಬಡಿಕೆಗೆ ಸಹಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 17: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದ್ವಿಪಕ್ಷೀಯ ಸಹಕಾರಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ರಾಜ್ಯ ಸರ್ಕಾರ ಮತ್ತು ಬ್ರಿಟಿಷ್ ಸರ್ಕಾರದ ನಡುವೆ ಇಂದು ಸಹಿ ಮಾಡಲಾಯಿತು.

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಾಯಕತ್ವ ಬೆಳವಣಿಗೆಗೆ ಸಂಬಂಧಿಸಿದಂತೆ ಮೊಟ್ಟಮೊದಲ ಬಾರಿಗೆ ಮೂರು ವರ್ಷಗಳ ಅವಧಿಯ ಒಪ್ಪಂದಕ್ಕೆ ಎರಡೂ ಸರ್ಕಾರಗಳು ಸಹಿ ಮಾಡಿವೆ ಎಂದರು.

ಭಾರತ ಸರ್ಕಾರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಿರುವ ಫಲಿತಾಂಶಗಳನ್ನು ಸಾಧಿಸಲು ಬ್ರಿಟಿಷ್ ಕೌನ್ಸಿಲ್ ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ನಡುವೆ ಸಹಿ ಮಾಡಿರುವ ಈ ಒಪ್ಪಂದವು ಸಹಾಯಕವಾಗಲಿದೆ.

Karnataka govt and British Council sign MoU to further bilateral cooperation in higher education

ಸಹಕಾರ , ವಾಣಿಜ್ಯ ಮತ್ತು ವ್ಯಾಪಾರ , ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ರಕ್ಷಣಾ ಮತ್ತು ಸಂಸ್ಕೃತಿ ಮುಂತಾದ ಹಲವು ಕ್ಷೇತ್ರಗಳಿಗೆ ಭಾರತ ಮತ್ತು ಬ್ರಿಟಿಷ್ ನಡುವಿನ ಸಂಬಂಧ ವ್ಯಾಪಿಸಿದೆ. ಕರ್ನಾಟಕ ಸರ್ಕಾರದ ಗ್ಲೋಬಲ್ ಇನ್ನೋವೇಷನ್ ಅಲಯನ್ಸ್ ಕಾರ್ಯಕ್ರಮವು ವಿಶ್ವದಾದ್ಯಂತ ಎಲ್ಲಾ ರಾಷ್ಟ್ರಗಳೊಂದಿಗೆ ನಾವೀನ್ಯತಾ ಪಾಲುದಾರಿಕೆಯನ್ನು ಹೆಚ್ಚಿಸುವ ಮೂಲಕ ಕರ್ನಾಟಕವನ್ನು ಮುಂಚೂಣಿಯಲ್ಲಿರುವ ತಂತ್ರಜ್ಞಾನ ಹಬ್ ಎಂಬ ಜಾಗತಿಕ ಕೀರ್ತಿಗೆ ಪಾತ್ರವಾಗಿಸಿದೆ.

ಇನ್ನು ಯು.ಕೆ ಕರ್ನಾಟಕದ ಬಹುಮುಖ್ಯ ಜಿ.ಐ.ಎ ಪಾಲುದಾರನಾಗಿದ್ದು, 2017-18 ರಲ್ಲಿ ಶೇ. 38ರಷ್ಟು ಹೂಡಿಕೆಯನ್ನು ಭಾರತದಲ್ಲಿ ಬ್ರಿಟಿಷ್ ಸರ್ಕಾರ ಮಾಡಿದೆ.

Karnataka govt and British Council sign MoU to further bilateral cooperation in higher education

ಟೆಕ್ ಹಬ್, ಟೆಕ್ ಕ್ಲಸ್ಟರ್ಸ್ ಸ್ಥಾಪನೆ ಹಾಗೂ ಗೋ ಗ್ಲೋಬಲ್ ನಂತಹ ಕಾರ್ಯಕ್ರಮಗಳು ಭಾರತದಿಂದ ನಾವೀನ್ಯತಾ ಸ್ಟಾರ್ಟ್‍ಅಪ್‍ಗಳನ್ನು ಯು.ಕೆಗೆ ತಲುಪಿಸಲು ಸಾಧ್ಯವಾಗಿಸಿರುವುದು ಸ್ವಾಗತಾರ್ಹ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವಥ್ ನಾರಾಯಣ್ ಮಾತನಾಡಿ, ಶಿಕ್ಷಣದಲ್ಲಿ ಮಹತ್ವದ ಬದಲಾವಣೆಯನ್ನು ತರಲು ಭಾರತ ಸನ್ನದ್ಧವಾಗಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯು ಇದಕ್ಕೆ ಪೂರಕವಾದ ಅವಕಾಶವನ್ನು ಕಲ್ಪಿಸಲಿದೆ ಎಂದರು. ಶಿಕ್ಷಣ ನೀತಿಯನ್ನು ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ಮುಂಚೂಣಿಯಲ್ಲಿದ್ದು, ಬ್ರಿಟಿಷ್ ಕೌನ್ಸಿಲ್ ಮೂಲಕ ಯುಕೆ ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗಿನ ಸಹಯೋಗ ಸಮಯೋಚಿತವಾಗಿದೆ ಎಂದರು. ಯೋಜಿತ ಕ್ರಮಗಳ ಮೂಲಕ ಉನ್ನತ ಶಿಕ್ಷಣದ ಪಾಲುದಾರರಿಗೆ ಹೆಚ್ಚಿನ ಲಾಭವನ್ನು ಈ ಸಹಯೋಗ ಮಾಡಿಕೊಡಲಿದೆ ಎಂದು ಅಭಿಪ್ರಾಯಪಟ್ಟರು.

Recommended Video

Australia ಬ್ಯಾಟ್ಸ್ಮನ್‌ಗಳನ್ನು ಕಟ್ಟಿ ಹಾಕಿದ Team India ಬೌಲರ್ಸ್ | Oneindia Kannada

ಯುಕೆ ವಿದೇಶಾಂಗ, ಕಾಮನ್ ವೆಲ್ತ್ ಮತ್ತು ಅಭಿವೃದ್ಧಿ ವ್ಯವಹಾರಗಳ ಸಚಿವ ಡಾಮಿನಿಕ್ ರಾಬ್, ಬ್ರಿಟಿಷ್ ಕೌನ್ಸಿಲ್ ಅಧಿಕಾರಿಗಳು, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

English summary
The Government of karnataka and British council today signed a memorandum of understanding in bengaluru to further bilateral cooperation in higher education.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X