ಬೆಂಗಳೂರು: 16,000 ಕೋಟಿ ವೆಚ್ಚದ 3ನೇ ಹಂತದ ಮೆಟ್ರೋ ಡಿಪಿಆರ್‌ಗೆ ಸರ್ಕಾರ ಒಪ್ಪಿಗೆ
ಬೆಂಗಳೂರು, ಸೆಪ್ಟಂಬರ್ 16: ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) 3ನೇ ಹಂತದ ಕಾಮಗಾರಿಯ ಸಂಪೂರ್ಣ ಯೋಜನಾ ವರದಿ(ಡಿಪಿಆರ್)ಯನ್ನು ಸೋಮವಾರ ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಇದೀಗ ಸರ್ಕಾರ ಈ ಕಾಮಗಾರಿ ಆರಂಭಕ್ಕೆ ಒಪ್ಪಿಗೆ ಸೂಚಿಸಿದೆ.
44.65 ಕಿಮೀ ಉದ್ದದ ಈ ಮೆಟ್ರೋ 3ನೇ ಹಂತದ ನಿರ್ಮಾಣ ಯೋಜನೆಯು ಆರು ಇಂಟರ್‌ಚೇಂಜ್ ಪಾಯಿಂಟ್ ಹೊಂದಿದೆ. ಈ ಮೊದಲು ಯೋಜನೆ ಪೂರ್ಣಗೊಳ್ಳಲು 13,000 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಯೋಜನೆಯು 2028 ರಲ್ಲಿ ಪೂರ್ಣಗೊಳ್ಳಲಿದ್ದು, ಆ ವೇಳೆಗೆ ಅಂದಾಜು ವೆಚ್ಚ ನಿರೀಕ್ಷೆಗಿಂತ ಅಂದರೆ ಒಟ್ಟು 16,333 ಕೋಟಿ ರೂ.ಗೆ ಹೆಚ್ಚಾಗಬಹುದು. ಇದು ಕಾರ್ಯಾರಂಭಗೊಂಡೆ ನಿತ್ಯ ಸುಮಾರು 4ಲಕ್ಷಕ್ಕೂ ಹೆಚ್ಚು ಮಂದಿ ಪ್ರಯಾಣಿಸಲಿದ್ದಾರೆ ಎಂದು ಬಿಎಂಆರ್‌ಸಿಎಲ್ ಅಂದಾಜಿಸಿದೆ.
ಈ ಮೆಟ್ರೋ ಮಾರ್ಗದಲ್ಲಿ 31 ನಿಲ್ದಾಣ
ಈ ಎಲಿವೆಟೆಡ್ ಯೋಜನೆಯಡಿ ಒಟ್ಟು 31 ನಿಲ್ದಾಣಗಳು ಬರಲಿವೆ. ಜೆಪಿ ನಗರ 4ನೇ ಹಂತದ ಕೆಂಪಾಪುರವರೆಗೆ 32.15 ಕಿ.ಮೀ ವರೆಗೆ ಒಂದು ಕಾರಿಡಾರ್ ನಿರ್ಮಾಣವಾದರೆ ಮತ್ತೊಂದು ಮಾಗಡಿ ರಸ್ತೆಯಲ್ಲಿ ಹೊಸಹಳ್ಳಿಯಿಂದ ಕಡಬಗೆರೆವರೆಗೆ 12.5 ಕಿ.ಮೀ.ಗೆ ಕಾರಿಡಾರ್ ಎಲೆಎತ್ತಲಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.

ಯೋಜನೆ ನಿರ್ಮಾಣಕ್ಕೆ ಉಂಟಾಗಬಹುದಾದ ಬಿಬಿಎಂಪಿ ವ್ಯಾಪ್ತಿಯ ಎರಡು ಮೇಲ್ಸೇತುವೆ ಕುರಿತು ಸಮಸ್ಯೆ ಬಗೆಹರಿದಿದೆ. ಈ ಮೊಲದು ಬಿಬಿಎಂಪಿ ಎರಡು ಸ್ಥಳಗಳಲ್ಲಿ ಮೇಲ್ಸೇತುವೆ ನಿರ್ಮಿಸಲು ಯೋಜಿಸಿದ್ದು, ಆದರೆ ಕಾಮಗಾರಿ ಆರಂಭವಾಗಿರಲಿಲ್ಲ. ಹೀಗಾಗಿ ಬಿಬಿಎಂಪಿ ಉದ್ದೇಶಿತ ಕನಕಪುರ ರಸ್ತೆ ಮತ್ತು ಸಾರಕ್ಕಿ ಜಂಕ್ಷನ್ ನಡುವಿನ 1.36 ಕಿ.ಮೀ.ಉದ್ದದ ಮತ್ತು ಕಾಮಾಕ್ಯ ಇಟ್ಟಮಡುವಿನಿಂದ ಹೊಸಕೆರೆಹಳ್ಳಿ ನಡುವಿನ 1.56 ಕಿ.ಮೀ. ಉದ್ದದ ಫ್ಲೈಓವರ್‌ಗಳನ್ನು ಬಿಎಂಆರ್‌ಸಿಎಲ್ ಸಂಸ್ಥೆಯೇ ನಿರ್ಮಿಸಿ ಕೊಡಲು ಒಪ್ಪಿಕೊಂಡಿದೆ.
270 ಕೋಟಿ ರೂ.ಕೊಡಲಿರುವ ಬಿಬಿಎಂಪಿ
ಭವಿಷ್ಯದ ದೃಷ್ಟಿಯಿಂದ ಬಿಬಿಎಂಪಿಯ ಎರಡು ಮೇಲ್ಸೇತುವೆ ನಿರ್ಮಾಣಕ್ಕೆ ಒಪ್ಪಿಕೊಂಡಿರುವ ಬಿಎಂಆರ್‌ಸಿಎಲ್‌ಗೆ ಕಾಮಗಾರಿಗಾಗಿ ಬಿಬಿಎಂಪಿ ಒಟ್ಟು 270 ಕೋಟಿ ಹಣ ಹಸ್ತಾಂತರಿಸಲು ಒಪ್ಪಿಕೊಂಡಿದೆ. ನೆಲದಿಂದ ಒಂದು ಹಂತದಲ್ಲಿ ಮೇಲ್ಸೇತುವೆ ಹಾಗೂ ಎರಡನೇ ಹಂತದಲ್ಲಿ ಮೆಟ್ರೋ ಮಾರ್ಗ ಬರುವಂತೆ ಬಿಎಂಪಿಆರ್‌ಸಿಎಲ್ ಯೋಜನೆ ರೂಪಿಸುತ್ತಿದೆ. 2022 ರ ದರಗಳ ಪ್ರಕಾರ ಯೋಜನೆಗೆ ಪ್ರಸ್ತುತ ಅಂದಾಜು 13,185 ಕೋಟಿ ರೂ. ಆಗಬಹುದು ಎಂದು ಅವರು ತಿಳಿಸಿದ್ದಾರೆ.

ಜೆಪಿ ನಗರ ನಾಲ್ಕನೆ ಹಂತದ ನಿಲ್ದಾಣದಲ್ಲಿ ಮತ್ತು ಕೆಂಪಾಪುರದಲ್ಲಿ ಎರಡು ಮೆಟ್ರೋ ಮಾರ್ಗಗಳು ಸಂಧಿಸುತ್ತವೆ. ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ತಂಡ ವಾರದ ಹಿಂದೆ ಬೆಂಗಳೂರಿಗೆ ಭೇಟಿ ನೀಡಿ ಮೆಟ್ರೋ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದೆ.
ಏರ್‌ಪೋರ್ಟ್ ಲೈನ್‌ಗೆ (ಕೆ.ಆರ್.ಪುರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ) 500 ಮಿಲಿಯನ್ ಡಾಲರ್ ಒದಗಿಸಲು ಬ್ಯಾಂಕ್ ಒಪ್ಪಂದ ಮಾಡಿಕೊಂಡಿತ್ತು. ಸದ್ಯ ಕಾಮಗಾರಿ ಆರಂಭಕ್ಕೆಂದು ಈಗಾಗಲೇ 80 ಮಿಲಿಯನ್ ಡಾಲರ್ ಪಡೆದಿದ್ದೇವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications