ಕಾವೇರಿ ವಿವಾದ: ಕೇಂದ್ರದ ವಿರುದ್ಧ ತೊಡೆತಟ್ಟಲಿದೆ ರಾಜ್ಯ ಸರ್ಕಾರ

Recommended Video

      ಕಾವೇರಿ ವಿಚಾರವಾಗಿ ಕೇಂದ್ರದ ವಿರುದ್ಧ ತೊಡೆತಟ್ಟಲಿದೆ ರಾಜ್ಯ ಸರ್ಕಾರ | Oneindia Kannada

      ಬೆಂಗಳೂರು, ಜೂನ್ 26: ಕೇಂದ್ರವು, ಕರ್ನಾಟಕದ ಪ್ರತಿನಿಧಿಗೆ ಸ್ಥಾನ ಇಲ್ಲದ ಕಾವೇರಿ ನೀರು ನಿಯಂತ್ರಣ ಸಮಿತಿ ರಚಿಸಿದ ಬೆನ್ನಲ್ಲೆ ಸಭೆ ನಡೆಸಿದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಜಲ ಸಚಿವರು ಕಾವೇರಿ ವಿವಾದದ ಬಗ್ಗೆ ಚರ್ಚಿಸಲು ಸರ್ವ ಪಕ್ಷ ಸಭೆ ನಡೆಸಲು ತೀರ್ಮಾನಿಸಿದ್ದಾರೆ.

      ನಿನ್ನೆ ವಿಧಾನಸೌಧದಲ್ಲಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ್ ಮತ್ತು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಅಧಿಕಾರಗಳೊಂದಿಗೆ ಸಭೆ ಮಾಡಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ಕುರಿತು ಸರ್ಕಾರ ತೆಗೆದುಕೊಳ್ಳುವ ನಿರ್ಣಯದ ಬಗ್ಗೆ ಸರ್ವಪಕ್ಷ ಸಭೆ ಕರೆಯಬೇಕೆಂಬ ತೀರ್ಮಾನಕ್ಕೆ ಬಂದರು.

      ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು, ಕಾವೇರಿ ವಿವಾದದಲ್ಲಿ ಕೇಂದ್ರವು ಕರ್ನಾಟಕದ ಹಿತವನ್ನು ಕಡೆಗಣಿಸಿದೆ ಹಾಗಾಗಿ ಕಾನೂನು ಹೋರಾಟದ ಜೊತೆಗೆ ಮುಂದಿನ ಆಯ್ಕೆಗಳ ಬಗ್ಗೆ ಚರ್ಚಿಸಲು 3-4 ದಿನಗಳ ಒಳಗಾಗಿ ಸರ್ವ ಪಕ್ಷ ಸಭೆ ಕರೆಯುತ್ತೇವೆ' ಎಂದರು.

      karnataka government will call all party meeting to discuss cauvery issue

      ಕಾವೇರಿ ವಿವಾದದ ಬಗ್ಗೆ ಜೂನ್ 18ರಂದೇ ಮುಖ್ಯಮಂತ್ರಿ ಅವರು ಪ್ರಧಾನಿ ಅವರಿಗೆ ಪತ್ರ ಬರೆದಿದ್ದರು ,ಕರೆದು ಮಾತನಾಡುವ ಭರವಸೆಯನ್ನೂ ನೀಡಿದ್ದರು ಆದರೆ ಹಠಾತ್ತನೆ ಕಾವೇರಿ ನೀರು ನಿಯಂತ್ರಣ ಸಮಿತಿ ರಚಿಸಲಾಗಿದೆ ಎಂದರು.

      ಕಾವೇರಿ ನೀರು ನಿಯಂತ್ರಣ ಸಮಿತಿ ಬಗ್ಗೆ ಆತಂಕ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್ ಅವರು, ಒಂಬತ್ತು ಸದಸ್ಯರು ಹೊಂದಿದ ಸಮಿತಿಯನ್ನು ಕೇಂದ್ರ ರಚಿಸಿದೆ ಇದರಲ್ಲಿ ಆರು ಸದಸ್ಯರು ಇದ್ದರೂ ಸಹ ಸಭೆಗೆ ಕೋರಂ ದೊರಕಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

      ಪ್ರಾಧಿಕಾರ ರಚಿಸುವಂತೆ ಕೋರ್ಟ್ ಆದೇಶ ನೀಡಿದ್ದರೂ ಸಹ, ಈ ಬಗ್ಗೆ ಸಂಸತ್‌ನಲ್ಲಿ ಚರ್ಚಿಸಬೇಕಿತ್ತು ಆದರೆ ಚರ್ಚಿಸದೇ ನಿರ್ಣಯ ತೆಗೆದುಕೊಳ್ಳಲಾಗಿದೆ ಹಾಗಾಗಿ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.

      ವಿರೋಧ ಪಕ್ಷಗಳು ಏನೇ ಟೀಕೆ ಮಾಡಿದರೂ ಸಹ ಕಾವೇರಿ ವಿಷಯದಲ್ಲಿ ರಾಜ್ಯದ ಹಿತ ಕಾಪಾಡಲು ನಾವು ಏನೆಲ್ಲಾ ಪ್ರಯತ್ನ ಮಾಡಬೇಕೋ ಅದನ್ನು ಮಾಡದೇ ಇರೆವು ಎಂದು ಅವರು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+