ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಕ್ಕಿನ ಸೇತುವೆ ಯೋಜನೆ ಬಗ್ಗೆ ಶುಕ್ರವಾರ ಕೋರ್ಟ್ ಗೆ ಸರಕಾರ ನೀಡಬೇಕು ಮಾಹಿತಿ

By ಅನಿಲ್ ಆಚಾರ್
|
Google Oneindia Kannada News

ಬೆಂಗಳೂರು, ಜೂನ್ 4: ಬೆಂಗಳೂರಿನಲ್ಲಿ ಚಾಲುಕ್ಯ ವೃತ್ತದಿಂದ ಹೆಬ್ಬಾಳ ವೃತ್ತದ ತನಕ ಉಕ್ಕಿನ ಸೇತುವೆ ನಿರ್ಮಿಸುವ ಸರಕಾರ ಯೋಜನೆ ವಿರೋಧಿಸಿ ನಮ್ಮ ಬೆಂಗಳೂರು ಫೌಂಡೇಷನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಕರ್ನಾಟಕ ಹೈ ಕೋರ್ಟ್ ಕೈಗೆತ್ತಿಕೊಂಡಿತು. ನಮ್ಮ ಬೆಂಗಳೂರು ಫೌಂಡೇಷನ್ ಪರ ವಕೀಲರು ಅರ್ಜಿಯ ಸ್ವರೂಪವನ್ನು ಕೋರ್ಟ್ ಗೆ ವಿವರಿಸಿದರು.

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಅದೇಶದ ಪರಿಣಾಮದ ಬಗ್ಗೆ ವಿಚಾರಿಸಿದ ಹೈ ಕೋರ್ಟ್ ನ ನ್ಯಾಯಮೂರ್ತಿಗಳಿಗೆ, ಎನ್ ಜಿಟಿ ಆದೇಶದ ಪ್ರಕಾರ ಈ ಉಕ್ಕಿನ ಸೇತುವೆ ಯೋಜನೆ ಮುಂದುವರಿಸಲು ಸಾಧ್ಯವಿಲ್ಲ. ಅದಕ್ಕೆ ಪರಿಸರ ಇಲಾಖೆಯ ಒಪ್ಪಿಗೆ ಪಡೆಯಬೇಕಾಗುತ್ತದೆ ಎಂದು ಫೌಂಡೇಷನ್ ನ ವಕೀಲರು ವಿವರಿಸಿದ್ದಾರೆ.

ದೇವನಹಳ್ಳಿಯ ಕ್ವಾರಿಯಲ್ಲಿ ಹುತಾತ್ಮ ಸೈನಿಕರ ವೀರಗಲ್ಲಿಗೆ ಗೌರವ ನಮನದೇವನಹಳ್ಳಿಯ ಕ್ವಾರಿಯಲ್ಲಿ ಹುತಾತ್ಮ ಸೈನಿಕರ ವೀರಗಲ್ಲಿಗೆ ಗೌರವ ನಮನ

ಉಕ್ಕಿನ ಸೇತುವೆ ನಿರ್ಮಾಣ ಯೋಜನೆಯನ್ನು ಸರಕಾರ ಕೈಗೆತ್ತಿಕೊಳ್ಳಲಿಲ್ಲ. ಆದ್ದರಿಂದ ಅರ್ಜಿಯಲ್ಲಿ ಅರ್ಥವಿಲ್ಲ ಎಂದು ಕೋರ್ಟ್ ಹೇಳಿದೆ. ಆಗ ನಮ್ಮ ಬೆಂಗಳೂರು ಫೌಂಡೇಷನ್ ನ ವಕೀಲರು, ನಮ್ಮ ಅರ್ಜಿದಾರರು ಯೋಜನೆಯನ್ನು ಪ್ರಶ್ನೆ ಮಾಡಿರುವುದು ಬಿಎಂಪಿಸಿಯಿಂದ ಅನುಮತಿ ಪಡೆಯದೆ, ಬೆಂಗಳೂರು ವಿಷನ್ ಗ್ರೂಪ್ ನಿಂದ (ಬಿವಿಜಿ) ಅನುಮೋದನೆ ಪಡೆದಿರುವುದಕ್ಕೆ ಎಂದು ಹೇಳಿದ್ದಾರೆ.

Karnataka government should inform High court about steel bridge project on Friday

ಸರಕಾರವು ಹೊರಡಿಸಿದ ಅಧಿಸೂಚನೆ ಬಿವಿಜಿಯ ಸಂವಿಧಾನಕ್ಕೆ ಮೀರಿದ್ದಾಗಿದೆ. ಮತ್ತು ಬಿವಿಜಿಯಿಂದ ಉಕ್ಕಿನ ಸೇತುವೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದ್ದು, ಹೊಸದಾಗಿ ಮಂಜೂರು ಪ್ರಕ್ರಿಯೆ ನಡೆದು, ಎಂಪಿಸಿ ಮುಂದೆ ಇಡಬೇಕಾಗುತ್ತದೆ ಎಂದು ಎಂದು ಮೂರು ವರ್ಷದ ಹಿಂದಿನ ಅರ್ಜಿಯನ್ನು ವಕೀಲರು ಪ್ರಸ್ತಾಪಿಸಿದರು.

ಈ ಅಂಶವನ್ನು ಕೇಳಿದ ನಂತರ ಕೋರ್ಟ್, ಈ ಪ್ರಕರಣದಲ್ಲಿ ಮುಖ್ಯ ಎಂಪಿಸಿಯನ್ನು ಸೇರಿಸಿ ಅರ್ಜಿಯನ್ನು ಪ್ರಶ್ನಿಸಬೇಕೆ ಹಾಗೂ ಸರಕಾರಿ ಪರ ವಕೀಲರು ಮಾಹಿತಿ ನೀಡುವುದಾಗಿ ಹಾಗೂ ಸರಕಾರವು ಈ ಯೋಜನೆ ಕೈಗೆತ್ತಿಕೊಳ್ಳುವುದೇ ಇಲ್ಲವೆ ಎಂಬುದನ್ನು ಶುಕ್ರವಾರ ತಿಳಿಸುವುದಾಗಿ ಹೇಳಿದರು. ಆದ್ದರಿಂದ ಈ ಪ್ರಕರಣವನ್ನು ಜೂನ್ ಏಳಕ್ಕೆ ಮುಂದೂಡಲಾಯಿತು.

English summary
The Steel Flyover matter came up for hearing today in the High Court. The counsel of NBF explained to the Court the nature of the petition. The Hon'ble Chief Justice enquired as to what is the effect of the NGT order and our counsel explained that on account of the NGT order the project can't go ahead without environmental clearance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X