ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಕನಸಿನ ಕೂಸು ಇಂದಿರಾ ಕ್ಯಾಂಟೀನ್‌ ಬಗ್ಗೆ ಎಚ್‌ಡಿಕೆ ನಿರ್ಲಕ್ಷ್ಯ?

By Manjunatha
|
Google Oneindia Kannada News

ಬೆಂಗಳೂರು, ಜೂನ್ 26: ಸಿದ್ದರಾಮಯ್ಯ ಅವರ ಮೆಚ್ಚಿನ ಯೋಜನೆಗಳಲ್ಲೊಂದಾದ 'ಇಂದಿರಾ ಕ್ಯಾಂಟೀನ್' ಬಗ್ಗೆ ಮೈತ್ರಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆಯೇ ಎಂಬ ಅನುಮಾನ ಮೂಡಿದೆ. ಅನುಮಾನ ಸಕಾರಣವೂ ಆಗಿದೆ.

ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಸರ್ಕಾರ ನಿಡಬೇಕಿದ್ದ 100 ಅನುದಾನವನ್ನು ಇನ್ನೂ ನೀಡದಿರುವ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಇದು ಬಿಬಿಎಂಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಇಂದಿರಾ ಕ್ಯಾಂಟೀನ್‌ಗೆ ಹಣ ನೀಡದ ಸರ್ಕಾರ, ಇಕ್ಕಟ್ಟಿನಲ್ಲಿ ಬಿಬಿಎಂಪಿಇಂದಿರಾ ಕ್ಯಾಂಟೀನ್‌ಗೆ ಹಣ ನೀಡದ ಸರ್ಕಾರ, ಇಕ್ಕಟ್ಟಿನಲ್ಲಿ ಬಿಬಿಎಂಪಿ

ಬಿಬಿಎಂಪಿಯು ಹಣಕಾಸು ವಿಭಾಗದ ಅಧಿಕಾರಿ, ಇಂದಿರಾ ಕ್ಯಾಂಟೀನ್ ನೌಕರರ ಗುತ್ತಿಗೆದಾರರಿಗೆ ಬರೆದ ಪತ್ರ ಒಂದು ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಮೈತ್ರಿ ಸರ್ಕಾರವು ಇಂದಿರಾ ಕ್ಯಾಂಟೀನ್ ಬಗ್ಗೆ ನಿರ್ಲಕ್ಷ ವಹಿಸಿರುವುದು ಇದರಿಂದ ಬೆಳಕಿಗೆ ಬಂದಿದೆ.

Karnataka government not yet released grant for Indira canteen

ಹೊಸ ಸರ್ಕಾರವು ಇಂದಿರಾ ಕ್ಯಾಂಟೀನ್‌ಗೆ ಬಿಡುಗಡೆ ಮಾಡಬೇಕಾದ ಅನುದಾನವನ್ನು ಇನ್ನೂ ಬಿಡುಗಡೆ ಮಾಡಿಲ್ಲ, ಅಲ್ಲದೆ ಕಳೆದ ಸರ್ಕಾರ ಕೂಡ ಬಿಡುಗಡೆ ಮಾಡಬೇಕಿದ್ದ 130 ಕೊಟಿ ಅನುದಾನಕ್ಕೆ ಬದಲಾಗಿ 100 ಕೋಟಿ ಮಾತ್ರವನ್ನೇ ಬಿಡುಗಡೆ ಮಾಡಿತ್ತು. ಉಳಿದ ಮೊತ್ತವನ್ನು ಬಿಬಿಎಂಪಿಯೇ ಭರಿಸಿತ್ತು.

ಸಿದ್ದರಾಮಯ್ಯ ಮಾತಿಗೆ ನೇರವಾಗಿಯೇ ಎದಿರೇಟು ನೀಡಿದ ಕುಮಾರಸ್ವಾಮಿಸಿದ್ದರಾಮಯ್ಯ ಮಾತಿಗೆ ನೇರವಾಗಿಯೇ ಎದಿರೇಟು ನೀಡಿದ ಕುಮಾರಸ್ವಾಮಿ

ಈ ಬಾರಿಯೂ ಸಹ ಇನ್ನೂ ಅನುದಾನ ಬಿಡುಗಡೆ ಆಗದ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ಹಣ ನೀಡಲಾಗುತ್ತಿಲ್ಲ. ಕಳೆದ 19 ತಿಂಗಳಿನಿಂದಲೂ ಗುತ್ತಿಗೆದಾರ ಬಿಲ್ ಬಾಕಿ ಉಳಿಸಿಕೊಂಡಿದೆ ಬಿಬಿಎಂಪಿ.

English summary
coalition government not yet released grant yearly grant for Indira canteen. Government should release minimum rs 100 crore for Indira canteen maintenance every year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X