Bengaluru International Airport: ಬೆಂಗಳೂರು ಏರ್‌ಪೋರ್ಟ್ ಬಗ್ಗೆ ಸರ್ಕಾರದಿಂದ ಮಹತ್ವದ ಘೋಷಣೆ
ಬೆಂಗಳೂರು, ಜೂನ್ 18: ವಾರ್ಷಿಕವಾಗಿ ಮಿಲಿಯನ್‌ಗಟ್ಟಲೇ ಜನರಿಗೆ ವಿಮಾನಯಾನ ಸೇವೆ ಒದಗಿಸುತ್ತಿರುವ, ಹೊಸ ಹೊಸ ಉಪಕ್ರಮಗಳಿಗೆ ಸಾಕ್ಷಿಯಾದ, ಹಲವು ಪ್ರಶಸ್ತಿಗಳನ್ನು, ಹೆಗ್ಗಳಿಕೆಗಳನ್ನು ಮುಡಿಗೇರಿಸಿಕೊಂಡ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಕುರತು ಕರ್ನಾಟಕ ರಾಜ್ಯ ಸರ್ಕಾರ ಮಹತ್ವದ ಘೋಷಣೆಯೊಂದನ್ನು ಮಾಡಿದೆ.
ದೇಶದ ನಾವೀನ್ಯತೆಯ ಪರಿಸರ ವ್ಯವಸ್ಥೆಯನ್ನು ವಿಶ್ವ ಮಟ್ಟದಲ್ಲಿ ಕೊಂಡೊಯ್ಯುವ ಮತ್ತು ಉನ್ನತೀಕರಣ ಸದುದ್ದೇಶದಿಂದ ಬೆಂಗಳೂರು ವಿಮಾನ ನಿಲ್ದಾಣ ನಗರ ನಿಯಮಿತ (BESL) ಹಾಗೂ (ANSR) ಸಹಭಾಗಿತ್ವದಲ್ಲಿ ಡಿಸ್ಟ್ರಿಕ್ಟ್ I ಎಂಬ 'ಜಾಗತಿಕ ನಾವೀನ್ಯತೆ ಕೇಂದ್ರ'ವನ್ನು ಆರಂಭಿಸುತ್ತೇವೆ ಎಂದು ತಿಳಿಸಿದೆ. ಇದರಲ್ಲಿ ಸಾಕಷ್ಟು ಮೂಲಭೂತ ಸೌಕರ್ಯಗಳು, ಜಾಗತಿಕ ಕೇಂದ್ರಗಳು ತಲೆ ಎತ್ತಲಿವೆ. ಅದರ ವಿವರ ಮುಂದಿದೆ.

ಡೀಪ್-ಟೆಕ್ ಉದ್ಯಮಶೀಲತೆ, ಉದ್ಯಮ ಚಾಲಿತ ನಾವೀನ್ಯತೆ ಮತ್ತು ಶೈಕ್ಷಣಿಕ ಸಂಶೋಧನೆಯ ವಾಣಿಜ್ಯೀಕರಣವನ್ನು ವರ್ಧಿಸುವ ಕೇಂದ್ರ ವೇದಿಕೆಯಾಗಿ ಡಿಸ್ಟ್ರಿಕ್ಟ್ I ಕಾರ್ಯ ನಿರ್ವಹಿಸಲಿದೆ. ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCC), ಆಕ್ಸಿಲರೇಟರ್‌ಗಳು, ಕಾರ್ಪೊರೇಟ್ ಲ್ಯಾಬ್‌ಗಳು, ವಿಸಿಗಳು (VCs), ಸ್ಟಾರ್ಟ್‌ಅಪ್‌ಗಳು, ಮಾಹಿತಿ ತಂತ್ರಜ್ಞಾನ ಸೇವಾ ಪೂರೈಕೆದಾರರು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ಒಟ್ಟುಗೂಡಿಸಿ ಉದ್ಯಮಗಳು ಹಾಗೂ ಸಂಸ್ಥೆಗಳಾದ್ಯಂತ ಪರಸ್ಪರ ಸಂಪರ್ಕ ಸಹಯೋಗ ಹೊಂದಲಾಗಿದೆ.
ಇನ್ನೂ ಈ ಕೇಂದ್ರದಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ (AI), ಬ್ಲಾಕ್‌ಚೈನ್ ಮತ್ತು ಗ್ರಾಹಕ ಅನುಭವ ತಂತ್ರಜ್ಞಾನಗಳಂತಹ ಮುಂದುವರಿದ ತಂತ್ರಜ್ಞಾನಗಳ ಮೇಲೆ ಗಮನಹರಿಸಲಾಗುವುದು. ಈ ಕೇಂದ್ರವು, ಏರೋಸ್ಪೇಸ್, ಬಾಹ್ಯಾಕಾಶ ತಂತ್ರಜ್ಞಾನ, ಬಿಎಫ್‌ಎಸ್‌ಐ, ಉತ್ಪಾದನೆ, ದೂರಸಂಪರ್ಕ ಮತ್ತು ರಕ್ಷಣೆ, ಸ್ಮಾರ್ಟ್ ಸಿಟಿ, ಚಿಲ್ಲರೆ ವ್ಯಾಪಾರ ಒಳಗೊಂಡಂತೆ ಮಹತ್ವದ ಕೈಗಾರಿಕೆಗಳಲ್ಲಿ ನಾವೀನ್ಯತೆಯನ್ನು ಬೆಳೆಸಲು ನೆರವಾಗುತ್ತದೆ.
ವಿಶಾಲ ಪ್ರದೇಶದಲ್ಲಿ ಹೊಸ ನಗರ
ವಿಮಾನ ನಿಲ್ದಾಣ ನಗರದ ಒಟ್ಟು 28 ದಶಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಾವಿನ್ಯತಾ ಕೇಂದ್ರ ನಿರ್ಮಾಣವಾಗಲಿದೆ. ವಿಶಾಲ ಬಿಸಿನೆಸ್ ಪಾರ್ಕ್ ಕ್ಲಸ್ಟರ್‌ನ ಅವಿಭಾಜ್ಯ ಅಂಗ ಆಗಲಿದೆ. ವಿಶ್ವದರ್ಜೆಯ, ಬಹು ಉದ್ದೇಶಿತ ಬಳಕೆಯ ನಗರ ತಾಣವಾಗಿದೆ. ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು, ಮೀಸಲಾದ ಶಿಕ್ಷಣ ಮತ್ತು ಆರೋಗ್ಯ ಜಿಲ್ಲೆ, ಆತಿಥ್ಯ, ಮನರಂಜನೆ ಮತ್ತು ಜೀವನಶೈಲಿಯ ಕೊಡುಗೆಗಳ ಮಿಶ್ರಣ ಒಳಗೊಳ್ಳಲಿರುವ ಬೆಂಗಳೂರು ವಿಮಾನ ನಿಲ್ದಾಣ ನಗರವು ಸುಸ್ಥಿರ, ಸ್ಮಾರ್ಟ್ ಮತ್ತು ಅಂತರ್ಗತ ನಗರ ಬೆಳವಣಿಗೆಗೆ ಅಂತಾರಾಷ್ಟ್ರೀಯ ಹೆಬ್ಬಾಗಿಲು ಆಗಲಿದೆ.

ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳಾದ ಏಕರೂಪ್ ಕೌರ್ ಈ ಕುರಿತು ಪ್ರತಿಕ್ರಿಯಿಸಿ ಹರ್ಷ ವ್ಯಕ್ತಪಡಿಸಿದರು. 'ಭಾರತದ ತಂತ್ರಜ್ಞಾನ ವಲಯದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಜಾಗತಿಕ ನಾವೀನ್ಯತೆ ಕೇಂದ್ರದ ಮೂಲಕ ಜಾಗತಿಕವಾಗಿ ಸಹಕರಿಸಲು, ನಾವೀನ್ಯತೆಯನ್ನು ಸೃಷ್ಟಿಸಲು ಮತ್ತು ಜಾಗತಿಕವಾಗಿ ಮುನ್ನಡೆಸಲು ಅಗತ್ಯ ವ್ಯವಸ್ಥೆ ಇಲ್ಲಿ ಒಟ್ಟುಗೂಡಲಿದೆ. ವೇದಿಕೆ ಸಿದ್ಧವಾಗಲಿದೆ ಎಂದು ತಿಳಿಸಿದರು.
ಬೆಂಗಳೂರು ಏರ್‌ಪೋರ್ಟ್ ಕೇಂದ್ರದಲ್ಲಿ, ಮುಂದಿನ ಪೀಳಿಗೆಯ ನಾವೀನ್ಯತೆಯ ಅನ್ವೇಷಕರಿಗೆ ಸ್ಫೂರ್ತಿ ಹಾಗೂ ಸಬಲೀಕರಣ ನೀಡಲು ರಚಿಸಲಾದ ಕ್ರಿಯಾತ್ಮಕ ಕೇಂದ್ರವಾದ ಡಿಸ್ಟ್ರಿಕ್ಟ್ I ನ್ನು ಪರಿಚಯಿಸಲು ಹೆಮ್ಮೆ ಆಗುತ್ತಿದೆ. ಕೆಲಸ, ಕ್ರೀಡೆ, ಬದುಕು, ಕಲಿಕೆ ಮತ್ತು ನೀತಿಯನ್ನು ರೂಪಿಸಲಿದೆ. ಸ್ಟಾರ್ಟ್‌ಅಪ್ ಮತ್ತು ಉದ್ಯಮಗಳಿಗೆ ವಿಶ್ವ ದರ್ಜೆಯ ಮೂಲಸೌಕರ್ಯದಿಂದ ಕೂಡಿದ ಉತ್ತಮ ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ನಿರ್ಮಾಣವಾಗಲಿದೆ ಎಂದು ಬಿಎಸಿಎಲ್ ಸಿಇಒ ರಾವ್ ಮುನುಕುಟ್ಲ ಹೇಳಿದರು.
ಎಎನ್‌ಎಸ್‌ಆರ್ ಸಂಸ್ಥಾಪಕ ಲಲಿತ್ ಅಹುಜಾ ಅವರು ಮಾತನಾಡಿ, "ಬೆಂಗಳೂರು ಪ್ರಮುಖ ತಂತ್ರಜ್ಞಾನ ಕೇಂದ್ರವೆಂದು ಗುರುತಿಸಲ್ಪಟ್ಟಿದ್ದರೂ, ಜಾಗತಿಕ ನಾವೀನ್ಯತೆಯ ವೇದಿಕೆಯಾಗಿ ಈ ಸ್ಥಾನವನ್ನು ಬಲಪಡಿಸುವ ಸಾಮರ್ಥ್ಯವನ್ನು ಇನ್ನಷ್ಟು ಬೆಳೆಸಿಕೊಳ್ಳುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.












Click it and Unblock the Notifications