ಕೇಂದ್ರ ಜಾತಿ ಜನಗಣತಿಗೆ ಕರ್ನಾಟಕ ಸರ್ಕಾರ ಬೆಂಬಲ: ಡಿಕೆ ಶಿವಕುಮಾರ್
ಬೆಂಗಳೂರು, ಮೇ 01: ಕರ್ನಾಟಕದಲ್ಲಿ ಜಾತಿ ಗಣತಿ ವರದಿ ಬಿಡುಗಡೆ, ಜಾರಿ ಕುರಿತು ಸಾಕಷ್ಟು ಆಕ್ಷೇಪ, ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ಕೆಂದ್ರ ಸರ್ಕಾರ ಸಹ ತಾನು ಜಾತಿ ಜನಗಣತಿ ಮಾಡುವುದಾಗಿ ತಿಳಿಸಿದೆ. ವಿಪಕ್ಷಗಳ ಆಗ್ರಹದ ಬೆನ್ನಲ್ಲೆ ಜನಗಣತಿ ಜೊತೆಗೆ ಜಾತಿ ಗಣತಿ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಈ ಹೇಳಿಕೆಯನ್ನು ಕಾಂಗ್ರೆಸ್ ಸಹ ಸ್ವಾಗತಿಸಿದ್ದು, ಆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.
ಗುರುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಜಾತಿ ಜನಗಣತಿ ನಡೆಸುವ ಕೇಂದ್ರದ ನಿರ್ಧಾರದವನ್ನು ಕರ್ನಾಟಕ ಸರ್ಕಾರ ಸಹ ಸ್ವಾಗತಿಸುತ್ತದೆ. ನಮ್ಮ ನಾಯಕ ರಾಹುಲ್ ಗಾಂಧಿ ಅವರು ಕೂಡ ಇದನ್ನು ಸ್ವಾಗತಿಸಿದ್ದಾರೆ. ಸಮಾಜದ ಪ್ರತಿಯೊಂದು ಅಧಿವೇಶನಕ್ಕೂ ಸಾಮಾಜಿಕ ನ್ಯಾಯ ಒದಗಿಸಲು ಕಾಂಗ್ರೆಸ್ ಬದ್ಧವಾಗಿದೆ. ಕಾಂಗ್ರೆಸ್ ಸರ್ಕಾರಗಳು ವ್ಯವಸ್ಥೆಯೊಂದಿಗೆ ಸಹಕರಿಸಲು ಬದ್ಧವಾಗಿವೆ" ಎಂದು ಅವರು ಹೇಳಿದ್ದಾರೆ.

ಬಿಹಾರ, ತೆಲಂಗಾಣದಲ್ಲಿ ಜಾತಿ ಗಣತಿ ವರದಿ ಮಾಡಿ ಹಿಂದುಳಿದ ವರ್ಗಗಳಿಗೆ ಹಲವು ನೆರವು ಒದಗಿಸಲಾಗಿತ್ತದೆ. ಇದೇ 1931ರ ನಂತರ ದೇಶದ ಎಲ್ಲ ಜನರ ಜಾತಿ ಗಣತಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕರ್ನಾಟಕದಲ್ಲಿ ನಡೆಸಿದ ಜನರ ಆರ್ಥಿಕ, ಸಾಮಾಜಿಕ ಸಮೀಕ್ಷೆ ಜಾತಿ ಗಣತಿ ವರದಿ (Karnataka Caste Cunsus) ವಿವಾದ ಸೃಷ್ಟಿಸಿದೆ. ನಿರ್ದಿಷ್ಟ ಜಾತಿ ಜನ ಸಮುದಾಯ ಅಂಕಿ ಸಂಖ್ಯೆ ಏರಿಳಿತದಿಂದ ಕೂಡಿದೆ. ಇದು ಅವೈಜ್ಞಾನಿಕ ಎಂದು ಬಿಜೆಪಿ ದೂರಿದೆ.
ಇದರ ಬೆನ್ನಲ್ಲೆ ಕೇಂದ್ರ ಬಿಜೆಪಿ ಸರ್ಕಾರ ಮಹತ್ವದ ಬೆಳವಣಿಗೆಯಲ್ಲಿ ಜಾತಿ ಗಣತಿ ಸಮೀಕ್ಷೆ ಕೈಗೊಳ್ಳುವುದಾಗಿ ತಿಳಿಸಿದೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ಮಾತ್ರವೇ ಜಾತಿ ಗಣತಿ ವರದಿ ಮಾಡಲಾಗುತ್ತದೆ. ಕಳೆದ ಬಾರಿ 2010ರಲ್ಲಿ ಜಾತಿ ಗಣತಿ ವರದಿ ನಡೆದದ್ದೇ ಕೊನೆ. ನಂತರ ಆಗಿಲ್ಲ. 2020ರಲ್ಲಿ ಜನಗಣತಿ ನಡೆಯಬೇಕಿತ್ತು. ಆದರೆ ಕೊರೊನಾ ಮಹಾಮಾರಿ ಕಾರಣದಿಂದಾಗಿ ಸಮೀಕ್ಷೆ ಕೈಗೊಳ್ಳಲು ಆಗಿಲ್ಲ.
ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ
ಕೇಂದ್ರ ಸರ್ಕಾರ ಜಾತಿ ಗಣತಿ ನಡೆಸುವುದರಿಂದ ಜಾತಿ ಸಂಘರ್ಷಗಳು ಹೆಚ್ಚಾಗಿ ಸಮಾಜ ಒಡೆದು ಹೋಗುತ್ತದೆ. ಜಾತಿ ಗಣತಿ ಎನ್ನುವುದು ಹಿಂದೂ ಸಮಾಜವನ್ನು ಒಡೆಯುವ ಹುನ್ನಾರ ಎಂದೆಲ್ಲ ವರ್ಷಗಳ ಕಾಲ ಟೀಕಾಪ್ರಹಾರ ಮಾಡುತ್ತಾ ಬಂದ ಬಿಜೆಪಿ ಪಕ್ಷ ಮತ್ತದರ ನೇತೃತ್ವದ ಸರ್ಕಾರಗಳು ಕೊನೆಗೂ ಜಾತಿ ಗಣತಿಯ ಸಾಮಾಜಿಕ ಮಹತ್ವವನ್ನು ಅರ್ಥ ಮಾಡಿಕೊಂಡಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.












Click it and Unblock the Notifications